ADVERTISEMENT

ಮಗಳನ್ನು ಭೇಟಿಯಾದ ಶಮಿ, 'ಶೋ ಆಫ್' ಎಂದ ಹಸೀನ್ ಜಹಾನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಅಕ್ಟೋಬರ್ 2024, 16:16 IST
Last Updated 3 ಅಕ್ಟೋಬರ್ 2024, 16:16 IST
<div class="paragraphs"><p>ಮಗಳ ಜತೆ ಮೊಹಮ್ಮದ್ ಶಮಿ</p></div>

ಮಗಳ ಜತೆ ಮೊಹಮ್ಮದ್ ಶಮಿ

   

(ಸ್ಕ್ರೀನ್‌ಶಾಟ್: ಮೊಹಮ್ಮದ್ ಶಮಿ/ಇನ್‌ಸ್ಟಾಗ್ರಾಂ)

ಬೆಂಗಳೂರು: ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿ, ಸುದೀರ್ಘ ಸಮಯದ ಬಳಿಕ ತಮ್ಮ ಮಗಳನ್ನು ಭೇಟಿಯಾಗಿದ್ದಾರೆ.

ADVERTISEMENT

ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿದ್ದಾರೆ.

ಮಗಳ ಜತೆಗಿನ ಅಮೂಲ್ಯ ಕ್ಷಣಗಳನ್ನು ಕಳೆದಿರುವ ಶಮಿ, ಈ ಸಂಬಂಧ ಅಭಿಮಾನಿಗಳಿಗಾಗಿ ವಿಡಿಯೊ ಹಂಚಿಕೊಂಡಿದ್ದಾರೆ.

ತಂದೆಯ ಭೇಟಿ ಹಾಗೂ ಶಾಪಿಂಗ್ ಅನ್ನು ಮಗಳು ಸಂಭ್ರಮಿಸಿದ್ದು ವಿಡಿಯೊದಲ್ಲಿದೆ. ಹೊಸ ಶೂಗಳು, ಬಟ್ಟೆ ಹಾಗೂ ಬಗೆಬಗೆಯ ತಿನಿಸುಗಳನ್ನು ಮಗಳಿಗೆ ಶಮಿ ಕೊಡಿಸಿದ್ದಾರೆ.

ಗಾಯದ ಸಮಸ್ಯೆಯಿಂದಾಗಿ ಶಮಿ ಟೀಮ್ ಇಂಡಿಯಾದಿಂದ ಹೊರಗುಳಿದಿದ್ದು, ಸದ್ಯ ಚೇತರಿಕೆಯ ಹಂತದಲ್ಲಿದ್ದಾರೆ.

ಆದರೆ ಮಗಳನ್ನು ಶಮಿ ಭೇಟಿ ಮಾಡಿರುವುದನ್ನು ಬೇರ್ಪಟ್ಟ ಪತ್ನಿ ಹಸೀನ್ ಜಹಾನ್ ಟೀಕಿಸಿದ್ದಾರೆ. ಇದು ಬರೀ 'ಶೋ ಆಫ್' ಎಂದು ಆರೋಪಿಸಿದ್ದಾರೆ.

ಈ ಕುರಿತು 'ಎನ್‌ಡಿಟಿವಿ' ವರದಿ ಮಾಡಿದೆ.

'ಮಗಳ ಬಗ್ಗೆ ಶಮಿ ಎಂದಿಗೂ ವಿಚಾರಿಸುವುದಿಲ್ಲ. ಮಗಳ ಪಾಸ್‌ಪೋರ್ಟ್ ಅವಧಿ ಮುಗಿದಿದೆ. ಹೊಸ ಪಾಸ್‌ಪೋರ್ಟ್‌ಗಾಗಿ ಶಮಿ ಸಹಿ ಅಗತ್ಯವಿತ್ತು. ಅದಕ್ಕಾಗಿ ತಂದೆಯ ಬಳಿ ಹೋಗಿದ್ದಾಳೆ. ಆದರೆ ಶಮಿ ಸಹಿ ಮಾಡಲಿಲ್ಲ. ಮಗಳ ಜತೆ ಶಾಪಿಂಗ್ ಮಾಲ್‌ಗೆ ಹೋಗಿದ್ದಾರೆ' ಎಂದು ಹೇಳಿದ್ದಾರೆ.

ಈ ಹಿಂದೆ ಕೌಟುಂಬಿಕ ದೌರ್ಜನ್ಯ, ಅನೈತಿಕ ಸಂಬಂಧ ಕುರಿತು ಸಂಬಂಧಿಸಿದಂತೆ ಶಮಿ ವಿರುದ್ಧ ಪತ್ನಿ ದೂರು ದಾಖಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.