ಭಾರತ ಕ್ರಿಕೆಟಿಗ ಸುರೇಶ್ ರೈನಾ ಅವರು ಎಲ್ಲ ಮಾದರಿಯ ಕ್ರಿಕೆಟ್‌ಗೆ ವಿದಾಯ ಘೋಷಿಸುತ್ತಿರುವುದಾಗಿ ಮಂಗಳವಾರ ಪ್ರಕಟಿಸಿದ್ದಾರೆ.
ಈ ಸಂಬಂಧ ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಸುರೇಶ್ ರೈನಾ, 'ನನ್ನ ದೇಶ ಮತ್ತು ರಾಜ್ಯವನ್ನು ಪ್ರತಿನಿಧಿಸುವುದು ನಿಜವಾಗಿಯೂ ಗೌರವದ ಸಂಗತಿ. ಎಲ್ಲ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಲು ಬಯಸುತ್ತೇನೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ), ಉತ್ತರ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್, ಚೆನ್ನೈ ಸೂಪರ್ ಕಿಂಗ್ಸ್, ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಸರ್ ಹಾಗೂ ಬೆಂಬಲಿಸಿದ ಮತ್ತು ನನ್ನ ಸಾಮರ್ಥ್ಯದಲ್ಲಿ ದೃಢವಾದ ನಂಬಿಕೆ ಇರಿಸಿದ್ದ ಎಲ್ಲ ಅಭಿಮಾನಿಗಳಿಗೆ ಧನ್ಯವಾದಗಳನ್ನು ತಿಳಿಸಲು ಇಚ್ಛಿಸುತ್ತೇನೆ' ಎಂದು ಬರೆದುಕೊಂಡಿದ್ದಾರೆ.
ಭಾರತ ಪರ ಕ್ರಿಕೆಟ್‌ನ ಮೂರೂ ಮಾದರಿಗಳಲ್ಲಿ ಶತಕ ಗಳಿಸಿದ ಆಟಗಾರರಲ್ಲಿ ಒಬ್ಬರೆನಿಸಿರುವ35 ವರ್ಷದ ರೈನಾ, ಎರಡು ವರ್ಷಗಳ ಹಿಂದೆಯೇ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು.
ಉತ್ತರ ಪ್ರದೇಶದವರಾದ ಅವರು ಭಾರತ ತಂಡಕ್ಕಾಗಿ 18 ಟೆಸ್ಟ್, 226 ಏಕದಿನ ಮತ್ತು 78 ಟ್ವೆಂಟಿ–20 ಪಂದ್ಯಗಳನ್ನು ಆಡಿರುವ ರೈನಾ ಕ್ರಮವಾಗಿ 768, 5615 ಮತ್ತು 1605 ರನ್ ಗಳಿಸಿದ್ದಾರೆ. ಐಪಿಎಲ್‌ನಲ್ಲಿ 193 ಪಂದ್ಯಗಳನ್ನು ಆಡಿದ್ದು 5368 ರನ್ ಕಲೆ ಹಾಕಿದ್ದಾರೆ.
ಟೆಸ್ಟ್‌ನಲ್ಲಿ 120, ಏಕದಿನ ಕ್ರಿಕೆಟ್‌ನಲ್ಲಿ 116 ಮತ್ತು ಟ್ವೆಂಟಿ–20ಯಲ್ಲಿ 101 ರನ್ ಅವರ ಗರಿಷ್ಠ ಸ್ಕೋರ್. ಐಪಿಎಲ್‌ನಲ್ಲೂ ಅಜೇಯ ಶತಕ ಸಿಡಿಸಿದ್ದಾರೆ. ಟೆಸ್ಟ್ ಮತ್ತು ಟ್ವೆಂಟಿ–20ಯಲ್ಲಿ ತಲಾ 13, ಏಕದಿನ ಕ್ರಿಕೆಟ್‌ನಲ್ಲಿ 36 ಮತ್ತು ಐಪಿಎಲ್‌ನಲ್ಲಿ 25 ವಿಕೆಟ್‌ಗಳನ್ನೂ ಕಬಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.