ಬೆಂಗಳೂರು: ಐಪಿಎಲ್‌ನಲ್ಲಿ ಕ್ರಿಕೆಟ್ ಆಟಕ್ಕಿಂತ ಹೆಚ್ಚು ಹಣಕ್ಕೆ ಪ್ರಾಶಸ್ತ್ಯ ಸಿಗುತ್ತದೆ ಎಂದು ಹೇಳಿ ಟ್ರೋಲ್‌ಗೆ ಒಳಗಾಗಿದ್ದ ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಡೇಲ್ ಸ್ಟೇಯ್ನ್ ತಮ್ಮ ಹೇಳಿಕೆ ಕುರಿತಂತೆ ಕ್ಷಮೆ ಯಾಚಿಸಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ್ದ ಡೇಲ್ ಸ್ಟೇಯ್ನ್ ತಾನು ಏಕೆ ಐಪಿಎಲ್‌ನಿಂದ ಹೊರಗುಳಿದಿದ್ದೀನಿ ಎಂಬ ಬಗ್ಗೆ ನೀಡಿದ್ದ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಟೀಕೆಗೆ ಕಾರಣವಾಗಿತ್ತು. ಈ ಬಗ್ಗೆ ಟ್ವಿಟರ್‌ನಲ್ಲಿ ವಿವರಣೆ ನೀಡಿರುವ ಅವರು, ಐಪಿಎಲ್ ಕ್ರೀಡಾಕೂಟವು ನನ್ನ ವೃತ್ತಿಜೀವನದಲ್ಲಿ ಅದ್ಭುತವಾದದ್ದು, ಇತರೆ ಆಟಗಾರರಿಗೂ ಅದ್ಬುತವೇ. ನನ್ನ ಮಾತುಗಳು ಯಾವುದೇ ಲೀಗ್‌ಗಳನ್ನು ಕೀಳಾಗಿ ನೋಡುವ, ಅವಮಾನಿಸುವ ಅಥವಾ ಹೋಲಿಸುವ ಉದ್ದೇಶವನ್ನು ಹೊಂದಿರಲಿಲ್ಲ. ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ ಎಂದು ಡೇಲ್ ಸ್ಟೇಯ್ನ್ ಹೇಳಿದ್ದಾರೆ.
ಐಪಿಎಲ್‌ನಲ್ಲಿ, ಪ್ರತಿ ತಂಡದಲ್ಲಿ ಹಲವು ದೊಡ್ಡ ಹೆಸರಿನ ಆಟಗಾರರಿರುತ್ತಾರೆ. ಅಲ್ಲಿನ ಗಮನವು ಕ್ರಿಕೆಟ್‌ನಿಂದ ದೂರ ಸರಿಯುತ್ತದೆ ಮತ್ತು ಒಬ್ಬ ವ್ಯಕ್ತಿಗೆ ನೀಡಲಾಗುವ ಹಣದ ಮೇಲೆ ಹೆಚ್ಚಿನ ಒತ್ತು ನೀಡಲಾಗುತ್ತದೆ ಎಂದು ಸ್ಟೇನ್ ಉಲ್ಲೇಖಿಸಿದ್ದರು.
'ಇತರ ಲೀಗ್‌ಗಳಲ್ಲಿ ಆಡುವುದು ಆಟಗಾರನಾಗಿ ಸ್ವಲ್ಪ ಹೆಚ್ಚು ಉತ್ತಮವೆಂದು ನಾನು ಕಂಡುಕೊಂಡಿದ್ದೇನೆ'ಎಂದು ಸ್ಟೇನ್ ಯೂಟ್ಯೂಬ್ ಚಾನೆಲ್ ಕ್ರಿಕೆಟ್ ಪಾಕಿಸ್ತಾನಕ್ಕೆ ತಿಳಿಸಿದ್ದರು.
'ನೀವು ಐಪಿಎಲ್‌ಗೆ ಹೋದಾಗ, ಅಲ್ಲಿ ದೊಡ್ಡ ತಂಡಗಳಿವೆ ಮತ್ತು ಹಲವಾರು ಪ್ರಸಿದ್ದ ಹೆಸರಿನ ಆಟಗಾರರಿದ್ದಾರೆ. ಅಲ್ಲಿ ಆಟಗಾರರು ಗಳಿಸುವ ಹಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತದೆ, ಕೆಲವೊಮ್ಮೆ, ಎಲ್ಲೋ ಒಂದು ಕಡೆ ಕೆಟ್ ಮರೆತುಹೋಗುತ್ತದೆ' ಎಂದು ಅವರು ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.