ನವದೆಹಲಿ: ಆಗಸ್ಟ್ ತಿಂಗಳ ದ್ವಿತಿಯಾರ್ಧದಲ್ಲಿ ಚೊಚ್ಚಲ ಡೆಲ್ಲಿ ಪ್ರೀಮಿಯರ್ ಲೀಗ್(ಡಿಪಿಎಲ್) ಆವೃತ್ತಿಯನ್ನು ಆಯೋಜಿಸುವುದಾಗಿ ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಮಂಡಳಿಯು(ಡಿಡಿಸಿಎ) ಘೋಷಿಸಿದೆ.
ಇದೊಂದು ಟಿ–20 ಟೂರ್ನಿಯಾಗಿದ್ದು, ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಪುರುಷರು ಮತ್ತು ಮಹಿಳೆಯರ ಪಂದ್ಯಗಳು ನಡೆಯಲಿವೆ. .
ಭಾನುವಾರ ನಡೆದ ಫ್ರಾಂಚೈಸ್ ಹರಾಜಿನಲ್ಲಿ ₹49.65 ಕೋಟಿಗೆ ಪುರುಷರ 6 ತಂಡಗಳನ್ನು ಖರೀದಿಸಲಾಗಿದೆ.
ಟಾಪ್ 4 ಬಿಡ್ಡರ್‌ಗಳಿಗೆ ಸ್ವಯಂಚಾಲಿತವಾಗಿ ಮಹಿಳಾ ತಂಡಗಳ ಫ್ರಾಂಚೈಸ್ ಸಹ ಸಿಕ್ಕಿದೆ.
ಡಿಪಿಎಲ್ ಉದ್ಘಾಟನಾ ಆವೃತ್ತಿಯಲ್ಲಿ ಒಟ್ಟು 40 ಪಂದ್ಯಗಳಿದ್ದು, 33 ಪಂದ್ಯಗಳಲ್ಲಿ ಪುರುಷರು ಮತ್ತು 7 ಪಂದ್ಯಗಳಲ್ಲಿ ಮಹಿಳೆಯರು ಆಡಲಿದ್ದಾರೆ.
‘ಮಹಿಳೆಯರು ಮತ್ತು ಪುರುಷರಿಗೆ ಸಮಾನ ಅವಕಾಶ ನೀಡುವ ದೃಷ್ಟಿಯಿಂದ ಡೆಲ್ಲಿ ಪ್ರೀಮಿಯರ್ ಲೀಗ್(ಡಿಪಿಎಲ್)–1 ಅನ್ನು ಘೋಷಿಸಲು ಹರ್ಷಿಸುತ್ತೇನೆ’ಎಂದು ಡಿಡಿಸಿಎ ಅಧ್ಯಕ್ಷ ರೋಹನ್ ಜೇಟ್ಲಿ ಹೇಳಿದ್ದಾರೆ.
ರಾಜ್ಯ ಮತ್ತು ರಾಷ್ಟ್ರೀಯ ತಂಡಗಳಲ್ಲಿ ಮಿಂಚಬಲ್ಲ ಪ್ರತಿಭೆಗಳನ್ನು ಪ್ರೋತ್ಸಾಹಿಸುವುದೇ ಡಿಡಿಸಿಎ ಉದ್ದೇಶವಾಗಿದೆ ಎಂದಿದ್ದಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.