ನವದೆಹಲಿ: ಹಿರಿಯ ಕ್ರಿಕೆಟಿಗರಾದ ಸುನಿಲ್ ವಲ್ಸನ್ ಮತ್ತು ಯಶ್‌ಪಾಲ್ ಶರ್ಮಾ ಅವರನ್ನು ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆಯು (ಡಿಡಿಸಿಎ) ಕ್ರಿಕೆಟ್ ಸಲಹಾ ಸಮಿತಿಯ (ಸಿಎಸಿ) ಸದಸ್ಯರನ್ನಾಗಿ ನೇಮಕ ಮಾಡಿದೆ.
ಯಶ್‌ಪಾಲ್ ಮತ್ತು ವಲ್ಸನ್ ಅವರು 1983ರಲ್ಲಿ ಭಾರತವು ವಿಶ್ವಕಪ್ ಗೆದ್ದಾಗ ತಂಡದಲ್ಲಿ ಆಡಿದ್ದರು.
‘ಯಶ್‌ಪಾಲ್ ಮತ್ತು ವಲ್ಸನ್ ಅವರು 2019–20ರ ಋತುವಿನಲ್ಲಿ ಸಿಎಸಿ ಸದಸ್ಯರಾಗಿ ಕೆಲಸ ಮಾಡಲಿದ್ದಾರೆ. ರಾಜ್ಯದ ವಿವಿಧ ವಯೋಮಾನದ ತಂಡಗಳಿಗೆ ಕೋಚ್ ಮತ್ತು ನೆರವು ಸಿಬ್ಬಂದಿ ನೇಮಿಸುವ, ಆಯ್ಕೆ ಸಮಿತಿ ಸದಸ್ಯರನ್ನು ಆಯ್ಕೆಮಾಡುವ ಅಧಿಕಾರ ಇವರಿಗೆ ನೀಡಲಾಗಿದೆ’ ಎಂದು ಡಿಡಿಸಿಎ ಟ್ವೀಟ್ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.