ADVERTISEMENT

ರಣಜಿ ಟ್ರೋಫಿ: ಪಡಿಕ್ಕಲ್ ಶತಕ, ಬೃಹತ್ ಮುನ್ನಡೆಯತ್ತ ಕರ್ನಾಟಕ

​ಪ್ರಜಾವಾಣಿ ವಾರ್ತೆ
Published 6 ಜನವರಿ 2024, 7:17 IST
Last Updated 6 ಜನವರಿ 2024, 7:17 IST
<div class="paragraphs"><p>ಶತಕ ಗಳಿಸಿದ ದೇವದತ್ತ ಪಡಿಕ್ಕಲ್ ಸಂಭ್ರಮ</p><p></p></div>

ಶತಕ ಗಳಿಸಿದ ದೇವದತ್ತ ಪಡಿಕ್ಕಲ್ ಸಂಭ್ರಮ

   

ಪ್ರಜಾವಾಣಿ ಚಿತ್ರ/ಗೋವಿಂದರಾಜ ಜವಳಿ

ADVERTISEMENT

ಹುಬ್ಬಳ್ಳಿ: ದೇವದತ್ತ ಪಡಿಕ್ಕಲ್ ಅವರ ಆಕರ್ಷಕ ಶತಕ (157) ಮತ್ತು ಮನೀಷ್ ಪಾಂಡೆ ಅವರ ಅರ್ಧಶತಕದ (86) ಬಲದಿಂದ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂಜಾಬ್ ಎದುರಿನ‌ ಪಂದ್ಯದಲ್ಲಿ ಕರ್ನಾಟಕ ತಂಡ ಬೃಹತ್ ಮುನ್ನಡೆಯತ್ತ ದಾಪುಗಾಲು ಇಟ್ಟಿದೆ.

ಕರ್ನಾಟಕ ತಂಡ ಶುಕ್ರವಾರ ಮೊದಲ ದಿನದಾಟದ ಅಂತ್ಯಕ್ಕೆ 33 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 142 ರನ್ ಗಳಿಸಿತ್ತು. ಶನಿವಾರ ಎರಡನೇ ದಿನದಾಟದ ಊಟದ ವಿರಾಮದ ವೇಳೆಗೆ 66 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 294 ರನ್ ಗಳಿಸಿದ್ದು, 142 ರನ್ ಗಳ ಮುನ್ನಡೆ ಗಳಿಸಿದೆ.

ವೇಗಿ ಬಲ್ತೇಜ್ ಸಿಂಗ್ ಎಸೆದ ಇನಿಂಗ್ಸ್ ನ 42ನೇ ಓವರ್ ನ ಎರಡನೇ ಎಸೆತವನ್ನು ಬೌಂಡರಿ ಗೆರೆ ದಾಟಿಸಿದ ದೇವದತ್ತ, ಶತಕ ಪೂರೈಸಿದರು.

ಇನ್ನೊಂದೆಡೆ ದೇವದತ್ತಗೆ ಉತ್ತಮ ಸಾತ್ ನೀಡಿದ ಮನೀಷ್ ಪಾಂಡೆ ಅರ್ಧಶತಕ ಗಳಿಸಿ, ಸಂಭ್ರಮಿಸಿದರು. ಇದಕ್ಕೆ ಅವರು 88 ಎಸೆತಗಳನ್ನು ತೆಗೆದುಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.