ನವದೆಹಲಿ: ರಜತ್ ಶರ್ಮಾ ಅವರನ್ನು ದೆಹಲಿ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ನಿರ್ದೇಶಕ ಮಂಡಳಿಯ ಎಂಟು ಸದಸ್ಯರು ಸಹಿ ಹಾಕಿದ್ದಾರೆ. 16 ಸದಸ್ಯರಿರುವ ಮಂಡಳಿಯಲ್ಲಿ ಬಹುಮತ ಇಲ್ಲದೆ ಈಗ ಶರ್ಮಾ ಸಂಕಷ್ಟಕ್ಕೀಡಾಗಿದ್ದಾರೆ.
ಸದಸ್ಯರಲ್ಲಿ ಒಬ್ಬರಾದ ಗೌತಮ್ ಗಂಭೀರ್ ಸಹಿ ಹಾಕಿಲ್ಲ. ರಜತ್ ಶರ್ಮಾ ಅವರು ಏಕಪಕ್ಷೀಯವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಸದಸ್ಯರು ಆರೋಪಿಸಿದ್ದು, ಇನ್ನೊಬ್ಬ ಸದಸ್ಯ ಸಹಿ ಹಾಕಿದರೆ ಶರ್ಮಾ ತಡೆಯಾಜ್ಞೆ ತರಲು ನ್ಯಾಯಾಲಯಕ್ಕೆ ಹೋಗಬಹುದು ಎಂದು ಹೇಳಿದ್ದಾರೆ.2018ರ ಜುಲೈನಲ್ಲಿ ಶರ್ಮಾ ಅಧಿಕಾರ ಸ್ವೀಕರಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.