ADVERTISEMENT

ದೇವಧರ್ ಟ್ರೋಫಿ: ದೇವದತ್ತ, ಗೌತಮ್‌ಗೆ ಸ್ಥಾನ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2019, 18:43 IST
Last Updated 25 ಅಕ್ಟೋಬರ್ 2019, 18:43 IST
ದೇವದತ್ತ ಪಡಿಕ್ಕಲ್
ದೇವದತ್ತ ಪಡಿಕ್ಕಲ್   

ನವದೆಹಲಿ: ರಾಂಚಿಯಲ್ಲಿ ಇದೇ 31ರಿಂದ ಆರಂಭವಾಗಲಿರುವ ದೇವಧರ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಆಡಲಿರುವ ಮೂರು ತಂಡಗಳನ್ನು ಗುರುವಾರ ಆಯ್ಕೆ ಮಾಡಲಾಯಿತು. ಕರ್ನಾಟಕದ ಯುವ ಆಟಗಾರ ದೇವದತ್ತ ಪಡಿಕ್ಕಲ್, ಮಯಂಕ್ ಅಗರವಾಲ್ ಮತ್ತು ಕೃಷ್ಣಪ್ಪ ಗೌತಮ್ ಸ್ಥಾನ ಪಡೆದಿದ್ಧಾರೆ.

ಭಾರತ ಎ ತಂಡಕ್ಕೆ ಹನುಮವಿಹಾರಿ, ಬಿ ತಂಡಕ್ಕೆ ಪಾರ್ಥಿವ್ ಪಟೇಲ್ ಮತ್ತು ಸಿ ತಂಡಕ್ಕೆ ಯುವ ಆಟಗಾರ ಶುಭಮನ್ ಗಿಲ್ ಅವರನ್ನ ನಾಯಕರನ್ನಾಗಿ ನೇಮಕ ಮಾಡಲಾಗಿದೆ. ಮುಂಬೈನಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ಈ ತಂಡಗಳನ್ನು ಪ್ರಕಟಿಸಲಾಯಿತು. ತಮಿಳುನಾಡಿನ ಅನುಭವಿ ಆಟಗಾರ ದಿನೇಶ್ ಕಾರ್ತಿಕ್ ಅವರು ಗಿಲ್ ನಾಯಕತ್ವದ ತಂಡದಲ್ಲಿ ಆಡಲಿದ್ದಾರೆ.

ತಂಡಗಳು:

ADVERTISEMENT

ಭಾರತ ‘ಎ’: ಹನುಮವಿಹಾರಿ (ನಾಯಕ), ದೇವದತ್ತ ಪಡಿಕ್ಕಲ್, ಎ.ಆರ್. ಈಶ್ವರನ್, ವಿಷ್ಣು ವಿನೋದ್, ಅಮನದೀಪ್ ಖರೆ, ಅಭಿಷೇಕ್ ರಾಮನ್, ಇಶಾನ್ ಕಿಶನ್ (ವಿಕೆಟ್‌ಕೀಪರ್), ಶಹಬಾಜ್ ಅಹಮದ್, ರವಿ ಬಿಷ್ಣೋಯ್, ಆರ್. ಅಶ್ವಿನ್, ಜಯದೇವ್ ಉನದ್ಕತ್, ಸಂದೀಪ್ ವಾರಿಯರ್, ಸಿದ್ಧಾರ್ಥ್ ಕೌಲ್, ಭಾರ್ಗವ್ ಮೆರೈ.

ಭಾರತ ‘ಬಿ’: ಪಾರ್ಥಿವ್ ಪಟೇಲ್ (ನಾಯಕ/ವಿಕೆಟ್‌ಕೀಪರ್), ಪ್ರಿಯಾಂಕ್ ಪಾಂಚಾಲ್, ಯಶಸ್ವಿ ಜೈಸ್ವಾಲ್, ಬಾಬಾ ಅಪರಾಜಿತ್, ಕೇದಾರ್ ಜಾಧವ್, ಋತುರಾಜ್ ಗಾಯಕವಾಡ್, ಶಹಬಾಜ್ ನದೀಂ, ಅನುಕೂಲ್ ರಾಯ್, ಕೃಷ್ಣಪ್ಪ ಗೌತಮ್, ವಿಜಯ ಶಂಕರ್, ಮೊಹಮ್ಮದ್ ಸಿರಾಜ್, ರುಷ್ ಕಲೇರಿಯಾ, ಯರ್ರಾ ಪಾರ್ಥಿವರಾಜ್, ನಿತೀಶ್ ರಾಣಾ.

ಭಾರತ ‘ಸಿ’: ಶುಭಮನ್ ಗಿಲ್ (ನಾಯಕ), ಮಯಂಕ್ ಅಗರವಾಲ್, ಅನ್ಮೋಲ್‌ಪ್ರೀತ್ ಸಿಂಗ್, ಸೂರ್ಯಕುಮಾರ್ ಯಾದವ್, ಪ್ರಿಯಂ ಗಾರ್ಗ್, ದಿನೇಶ್ ಕಾರ್ತಿಕ್ (ವಿಕೆಟ್‌ಕೀಪರ್), ಅಕ್ಷರ್ ಪಟೇಲ್, ಮಯಂಕ್ ಮಾರ್ಕಂಡೆ, ಜಲಜ್ ಸಕ್ಸೆನಾ, ಆವೇಶ್ ಖಾನ್, ಧವಳ್ ಕುಲಕರ್ಣಿ, ಇಶಾನ್ ಪೊರೆಲ್, ಡಿ.ಜಿ. ಪಠಾಣಿಯಾ, ವಿರಾಟ್ ಸಿಂಗ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.