ನವದೆಹಲಿ: ಭಾರತ ‘ಬಿ’ ತಂಡವು ದೇವಧರ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ಪ್ರವೇಶಿಸಿತು.
ಬುಧವಾರ ನಡೆದ ಪಂದ್ಯದಲ್ಲಿ ಹನುಮವಿಹಾರಿ (76 ರನ್) ಉತ್ತಮ ಬ್ಯಾಟಿಂಗ್ ನೆರವಿನಿಂದ ಭಾರತ ಬಿ ತಂಡವು 30 ರನ್‌ಗಳಿಂದ ಭಾರತ ಸಿ ತಂಡವನ್ನು ಸೋಲಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ಬಿ ತಂಡವು 50 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 231 ರನ್ ಗಳಿಸಿತು. ಹನುಮವಿಹಾರಿ ಮತ್ತ ಅಂಕುಶ್ ಬೇನ್ಸ್ ಅವರು ಜೊತೆಯಾಟದಲ್ಲಿ 60 ರನ್ ಸೇರಿಸಿದರು.
ಸಿ ತಂಡದಲ್ಲಿರುವ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಆಫ್‌ಸ್ಪಿನ್ನರ್ (40ಕ್ಕೆ3) ಮತ್ತು ಮನೋಜ್ ತಿವಾರಿ (44ಕ್ಕೆ3) ಕಟ್ಟಿಹಾಕಿದರು. ಅಜಿಂಕ್ಯ ರಹಾನೆ ಮತ್ತೊಮ್ಮೆ ವೈಫಲ್ಯ ಅನುಭವಿಸಿದರು. ಫಿರೋಜ್ ಶಾ ಕೋಟ್ಲಾ ಕ್ರೀಡಾಂಗಣದ ಪಿಚ್‌ನಲ್ಲಿ ಅವರು ಸ್ಪಿನ್ನರ್‌ಗಳ ಎಸೆತಗಳನ್ನು ಆಡುವಲ್ಲಿ ತಡಬಡಾಯಿಸಿದರು. ಗೌತಮ್ ಬೌಲಿಂಗ್‌ನಲ್ಲಿ ಔಟಾದರು.
ಸಂಕ್ಷಿಪ್ತ ಸ್ಕೋರ್: ಭಾರತ ಬಿ : 50 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 231 (ಹನುಮವಿಹಾರಿ 76, ಅಂಕುಶ್ ಬೇನ್ಸ್ 25, ರಜನೀಶ್ ಗುರುಬಾನಿ 38ಕ್ಕೆ3), ಭಾರತ ‘ಸಿ’: 48.2 ಓವರ್‌ಗಳಲ್ಲಿ 201 (ಸೂರ್ಯಕುಮಾರ್ ಯಾದವ್ 39, ಕೆ. ಗೌತಮ್ 40ಕ್ಕೆ3, ಮನೋಜ್ ತಿವಾರಿ 44ಕ್ಕೆ3) ಫಲಿತಾಂಶ: ಭಾರತ ‘ಬಿ’ ತಂಡಕ್ಕೆ 30 ರನ್‌ಗಳ ಜಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.