ಬೆಂಗಳೂರು: ಕರ್ನಾಟಕದ ಯುವಕ್ರಿಕೆಟಿಗ ದೇವದತ್ತ ಪಡಿಕ್ಕಲ್ ಅವರ ಕುರಿತು ಕೇರಳದ ಕಾಂಗ್ರೆಸ್ ಮುಖಂಡ ಶಶಿ ತರೂರ್ ನೀಡಿರುವ ಹೇಳಿಕೆಗೆ ರಾಜದ್ಯದ ಹಿರಿಯ ಕ್ರಿಕೆಟಿಗ ದೊಡ್ಡಗಣೇಶ್ ತಿರುಗೇಟು ನೀಡಿದ್ದಾರೆ.
'ಈ ವರ್ಷದ ಐಪಿಎಲ್‌ನಲ್ಲಿ ಎರಡೂ ಶತಕಗಳನ್ನು ಮಲಯಾಳಿಗಳು ಗಳಿಸಿರುವುದು ಎಷ್ಟೊಂದು ಸೋಜಿಗ. ಇಷ್ಟು ಕಾಲ ಕೇರಳವನ್ನು ಕ್ರಿಕೆಟ್‌ನ ಹಿನ್ನೀರು ಎಂದು ಪರಿಗಣಿಸಲಾಗಿತ್ತು. ಪ್ರಸಕ್ತ ಸಾಲಿನಲ್ಲಿ 100ರ ಗಡಿ ದಾಟಿದ ಇಬ್ಬರು ಬ್ಯಾಟ್ಸ್‌ಮನ್‌ಗಳು ಮಲಯಾಳಿಗಳು. ಸಂಜು ಸ್ಯಾಮ್ಸನ್ ಜೊತೆ ಸೇರಿದ ದೇವದತ್ತ ಪಡಿಕ್ಕಲ್ ಅವರಿಗೆ ಅಭಿನಂದನೆಗಳು' ಎಂದು ಶಶಿ ತರೂರ್ ಟ್ವೀಟ್ ಮಾಡಿದ್ದರು. ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಆಡುವ ದೇವದತ್ತ ಗುರುವಾರದ ಪಂದ್ಯದಲ್ಲಿ ಶತಕ ಬಾರಿಸಿದ್ದರು.
ತರೂರ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ದೊಡ್ಡ ಗಣೇಶ್, '2016ರಲ್ಲಿ ಟೆಸ್ಟ್‌ನಲ್ಲಿ ತ್ರಿಶತಕ ಬಾರಿಸಿದ್ದ ಕರುಣ್ ನಾಯರ್ ಅವರನ್ನು ಕೆಲವರು ತಮ್ಮವರೆಂದು ವಾದಿಸಿದ್ದರು. ಆದರೆ, ಭಾರತ ತಂಡದಲ್ಲಿ ಅವರು ಸ್ಥಾನ ಕಳೆದುಕೊಂಡಾಗ ಸುಮ್ಮನಿದ್ದರು. ಈಗ ದೇವದತ್ತ ಹೆಸರಲ್ಲೂ ಅದೇ ನಡೆಯುತ್ತಿದೆ. ಅವರು ಕೇರಳ ಮೂಲದವರು ಎಂಬುದನ್ನು ಒಪ್ಪುತ್ತೇನೆ. ಆದರೆ ಕ್ರಿಕೆಟಿಗರಾಗಿ ಕರುಣ್ ಹಾಗೂ ದೇವದತ್ತ ಅವರನ್ನು ಬೆಳೆಸಿದ್ದರಲ್ಲಿ ಕೇರಳದ ಪಾತ್ರವೇನೂ ಇಲ್ಲ. ಅವರು ಕರ್ನಾಟಕದ ಹುಡುಗರು' ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.