ADVERTISEMENT

ಖಾಸಗಿ ಮಾತುಕತೆಯನ್ನು ಪ್ರಸಾರ ಮಾಡಿಲ್ಲ: ರೋಹಿತ್ ಆರೋಪಕ್ಕೆ ಸ್ಟಾರ್‌ ಪ್ರತಿಕ್ರಿಯೆ

ಪಿಟಿಐ
Published 20 ಮೇ 2024, 12:54 IST
Last Updated 20 ಮೇ 2024, 12:54 IST
   

ನವದೆಹಲಿ: ಯಾವುದೇ ವ್ಯಕ್ತಿಯ ಖಾಸಗಿ ಸಂಭಾಷಣೆಯನ್ನು ಪ್ರಸಾರ ಮಾಡಿಲ್ಲ ಎಂದು ಐಪಿಎಲ್ ಪ್ರಸಾರಕ ಚಾನಲ್ ಸ್ಟಾರ್ ಸ್ಪೋರ್ಟ್ಸ್ ಸೋಮವಾರ ಸ್ಪಷ್ಟನೆ ನೀಡಿದೆ.

ಮನವಿ ಮಾಡಿದ್ದರೂ ಖಾಸಗಿ ಮಾತುಕತೆಯನ್ನು ಸ್ಟಾರ್‌ ಸ್ಪೋರ್ಟ್ಸ್ ಪ್ರಸಾರ ಮಾಡಿದೆ ಎಂದು ಮುಂಬೈ ಇಂಡಿಯನ್ಸ್ ತಂಡದ ಆಟಗಾರ ರೋಹಿತ್ ಶರ್ಮಾ ಆರೋಪಿಸಿದ್ದರು. ಇದರ ಬೆನ್ನಲ್ಲೇ ವಾಹಿನಿ ಸ್ಪಷ್ಟೀಕರಣ ನೀಡಿ ಪ್ರಕಟಣೆ ಬಿಡುಗಡೆ ಮಾಡಿದೆ.

ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಆಟಗಾರ ಅಭಿಷೇಕ್ ನಾಯರ್‌ ಅವರ ಜೊತೆ ಮಾತನಾಡುವ ದೃಶ್ಯದಲ್ಲಿ ಅಡಿಯೊ ತೆಗೆದುಹಾಕಿ ಎಂದು ರೋಹಿತ್ ಮನವಿ ಮಾಡಿದ್ದರು. ಆದರೂ ಸ್ಟಾರ್‌, ಖಾಸಗಿ ಮಾತುಕತೆಯನ್ನು ಪ್ರಸಾರ ಮಾಡಿದೆ ಎಂದು ರೋಹಿತ್ ಶರ್ಮಾ ಭಾನುವಾರ ಆರೋಪಿಸಿದ್ದರು.

ADVERTISEMENT

ರೋಹಿತ್ ಅವರ ಈ ಹೇಳಿಕೆಯನ್ನು ವಾಹಿನಿಯು ಅಲ್ಲಗೆಳೆದಿದೆ.

‘ಮೇ 16ರಂದು ವಾಂಖೆಡೆ ಮೈದಾನದಲ್ಲಿ ಅಭ್ಯಾಸದ ವೇಳೆ ವಿಡಿಯೊ ಚಿತ್ರೀಕರಣ ಮಾಡಲಾಗಿತ್ತು. ಮೈದಾನದ ಒಂದು ಭಾಗದಲ್ಲಿ ಸ್ನೇಹಿತರೊಂದಿಗೆ ಮಾತನಾಡುತ್ತಿದ್ದ ರೋಹಿತ್ ಶರ್ಮಾ ಅವರ ದೃಶ್ಯವನ್ನು ಸೆರೆಹಿಡಿಯಲಾಗಿತ್ತು. ಅವರ ಮಾತುಕತೆಯ ಆಡಿಯೊ ದಾಖಲಿಸಿಕೊಂಡಿಲ್ಲ. ಪ್ರಸಾರವೂ ಮಾಡಿಲ್ಲ’ ಎಂದು ಸ್ಟಾರ್ ಸ್ಪೋರ್ಟ್‌ ವಾಹಿನಿ ಪ್ರಕಟಣೆಯಲ್ಲಿ ತಿಳಿಸಿದೆ.

ನಾವು ಆಟಗಾರರ ಖಾಸಗಿತನದ ರಕ್ಷಣೆಗೆ ಬದ್ಧವಾಗಿದ್ದೇವೆ ಎಂದು ವಾಹಿನಿ ಹೇಳಿದೆ.

ಕೆಕೆಆರ್ ತಂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ವಿಡಿಯೊದಲ್ಲಿ, ರೋಹಿತ್ ಶ

ರ್ಮಾ ಅವರು ಮುಂಬೈ ಇಂಡಿಯನ್ಸ್ ಪರ ಮುಂದುವರಿಯುವುದರ ಬಗ್ಗೆ ಹಲವು ಅಭಿಪ್ರಾಯಗಳು ವ್ಯಕ್ತವಾಗಿದ್ದವು. ವಿವಾದದ ಬೆನ್ನಲ್ಲೇ ಕೆಕೆಆರ್‌ ವಿಡಿಯೊ ಡಿಲೀಟ್ ಮಾಡಿತ್ತು.

ನನ್ನ ಸಂಭಾಷಣೆಗಳನ್ನು ರೆಕಾರ್ಡ್ ಮಾಡಬೇಡಿ ಎಂದು ಸ್ಟಾರ್ ಸ್ಪೋರ್ಟ್ಸ್‌ಗೆ ಕೇಳಿಕೊಂಡರೂ ಅದು ಪ್ರಸಾರ ಮಾಡಿತ್ತು. ಇದು ಖಾಸಗಿತನದ ಸ್ಪಷ್ಟ ಉಲ್ಲಂಘನೆಯಾಗಿದೆ. ಎಕ್ಸ್‌ಕ್ಲೂಸಿವ್ ಕಂಟೆಂಟ್‌ಗಳಿಗಾಗಿಯೊ, ವೀಕ್ಷಣೆ ಹೆಚ್ಚಿಸುವುದಕ್ಕಾಗಿಯೋ ಮಾಡುವ ಈ ಕೆಲಸ ಮುಂದೆ ಅಭಿಮಾನಿಗಳು, ಕ್ರಿಕೆಟಿಗರು ಮತ್ತು ಕ್ರಿಕೆಟ್ ನಡುವಿನ ನಂಬಿಕೆಯನ್ನು ಮುರಿಯುತ್ತದೆ’ ಎಂದು ರೋಹಿತ್ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.