ADVERTISEMENT

ಮಹಿಳೆಯರ ಟಿ20 ವಿಶ್ವಕಪ್ ಕ್ರಿಕೆಟ್: ದಕ್ಷಿಣ ಆಫ್ರಿಕಾ ಜಯದ ಆರಂಭ

ಮ್ಲಾಬಾ 4 ವಿಕೆಟ್, ಲಾರಾ, ಬ್ರಿಟ್ಸ್‌ ಅರ್ಧಶತಕ

ಪಿಟಿಐ
Published 4 ಅಕ್ಟೋಬರ್ 2024, 14:36 IST
Last Updated 4 ಅಕ್ಟೋಬರ್ 2024, 14:36 IST
ಅರ್ಧಶತಕ ಗಳಿಸಿದ ದಕ್ಷಿಣ ಆಫ್ರಿಕಾ ತಂಡದ ನಾಯಕಿ ಲಾರಾ ವೊಲ್ವಾರ್ಟ್  
ಅರ್ಧಶತಕ ಗಳಿಸಿದ ದಕ್ಷಿಣ ಆಫ್ರಿಕಾ ತಂಡದ ನಾಯಕಿ ಲಾರಾ ವೊಲ್ವಾರ್ಟ್     

ದುಬೈ: ಎಡಗೈ ಸ್ಪಿನ್ನರ್ ನಾನಕುಲುಲೆಕೊ ಮ್ಲಾಬಾ (29ಕ್ಕೆ4) ಅವರ ಅಮೋಘ ಬೌಲಿಂಗ್ ಬಲದಿಂದ ದಕ್ಷಿಣ ಆಫ್ರಿಕಾ ತಂಡವು ಮಹಿಳೆಯರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಜಯದ ಆರಂಭ ಮಾಡಿತು. 

ಶುಕ್ರವಾರ ಇಲ್ಲಿ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು 10 ವಿಕೆಟ್‌ಗಳಿಂದ ವೆಸ್ಟ್ ಇಂಡೀಸ್ ತಂಡವನ್ನು ಪರಾಭವಗೊಳಿಸಿತು. 

ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ನಾನಕುಲುಲೆಕೊ ಮತ್ತು ಮಧ್ಯಮವೇಗಿ ಮರಿಝಾನ್ ಕ್ಯಾಪ್ (14ಕ್ಕೆ2) ಅವರಿಬ್ಬರ ನಿಖರ ದಾಳಿಯಿಂದಾಗಿ ವಿಂಡೀಸ್ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 118 ರನ್‌ಗಳ ಸಾಧಾರಣ ಮೊತ್ತ ಗಳಿಸಿತು. ಸ್ಟೆಫಾನಿ ಟೇಲರ್ (ಔಟಾಗದೆ 44; 41ಎ) ಅವರೊಬ್ಬರೇ ದಿಟ್ಟ ಹೋರಾಟ ಮಾಡಿದರು. ಉಳಿದ ಬ್ಯಾಟರ್‌ಗಳು ವಿಫಲರಾದರು. ಟೇಲರ್‌ 2 ಬೌಂಡರಿ ಮತ್ತು 1 ಸಿಕ್ಸರ್‌ ಸಿಡಿಸಿದರು.  

ADVERTISEMENT

ಈ ಗುರಿಯನ್ನು ದಕ್ಷಿಣ ಆಫ್ರಿಕಾ ತಂಡವು ನಿರಾಯಾಸವಾಗಿ ಸಾಧಿಸಿತು. ತಂಡದ ನಾಯಕಿ ಲಾರಾ ವೊಲ್ವಾರ್ಟ್ (ಔಟಾಗದೆ 59; 55ಎ, 4X7) ಮತ್ತು ತಾಝ್ಮಿನ್ ಬ್ರಿಟ್ಸ್‌ (ಔಟಾಗದೆ 57; 52ಎ, 4X6) ಮುರಿಯದ ಮೊದಲ ವಿಕೆಟ್ ಜೊತೆಯಾಟದಲ್ಲಿ 119 ರನ್‌ ಸೇರಿಸಿದರು. 

ಸಂಕ್ಷಿಪ್ತ ಸ್ಕೋರು: ವೆಸ್ಟ್ ಇಂಡೀಸ್: 20 ಓವರ್‌ಗಳಲ್ಲಿ 6ಕ್ಕೆ118 (ಸ್ಟೆಫಾನಿ ಟೇಲರ್ ಔಟಾಗದೆ 44, ಶೆಮೈನ್ ಕ್ಯಾಂಪ್‌ಬೆಲ್ 17, ಝೈದಾ ಜೇಮ್ಸ್ ಔಟಾಗದೆ 15, ಮರಿಝಾನ್ ಕ್ಯಾಪ್ 14ಕ್ಕೆ2, ನಾನಕುಲುಲೆಕೊ ಮ್ಲಾಬಾ 29ಕ್ಕೆ4) ದಕ್ಷಿಣ ಆಫ್ರಿಕಾ: 17.5 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೇ 119 (ಲಾರಾ ವೊಲ್ವಾರ್ಟ್ ಔಟಾಗದೆ 59, ತಾಝ್ಮಿನ್ ಬ್ರಿಟ್ಸ್‌ ಔಟಾಗದೆ 57) ಫಲಿತಾಂಶ: ದಕ್ಷಿಣ ಆಫ್ರಿಕಾ ತಂಡಕ್ಕೆ 10 ವಿಕೆಟ್‌ಗಳ ಜಯ. ಪಂದ್ಯದ ಆಟಗಾರ್ತಿ: ನಾನಕುಲುಲೆಕೊ ಮ್ಲಾಬಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.