ADVERTISEMENT

ಪ್ರತಿಭೆ ಗುರುತಿಸಿ ಬೆಳೆಸುವಲ್ಲಿ ನಾವು ಹಿಂದೆ..ಚೆಟ್ರಿ ಹೇಳಿಕೆಗೆ ನೆಟ್ಟಿಗರ ಸಹಮತ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2024, 16:25 IST
Last Updated 1 ಆಗಸ್ಟ್ 2024, 16:25 IST
   

ಬೆಂಗಳೂರು: ‘ನಾವು 150 ಕೋಟಿ ಜನಸಂಖ್ಯೆ ಹೊಂದಿದ್ದರೂ, ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಬೆಳೆಸುವಲ್ಲಿ ವಿಫಲವಾಗಿರುವುದರಿಂದ ಒಲಿಂಪಿಕ್ಸ್‌ನಲ್ಲಿ ನಮ್ಮ ದೇಶ ಸಾಕಷ್ಟು ಪದಕಗಳನ್ನು ಗೆಲ್ಲಲು ಆಗುತ್ತಿಲ್ಲ’ ಎಂದು ಫುಟ್‌ಬಾಲ್‌ ದಿಗ್ಗಜ ಸುನಿಲ್‌ ಚೆಟ್ರಿ ಪಾಡ್‌ಕಾಸ್ಟ್‌ನಲ್ಲಿ ಪ್ರಕಟವಾದ ಸಂದರ್ಶನದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಅವರ ಹೇಳಿಕೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಪ್ಯಾರಿಸ್‌ ಒಲಿಂಪಿಕ್ಸ್ ಆರಂಭಕ್ಕೆ ಮುನ್ನ (ಜುಲೈ ನಾಲ್ಕನೇ ವಾರ) ಈ ಪಾಡ್‌ಕಾಸ್ಟ್‌ ಪ್ರಸಾರಗೊಂಡಿತ್ತು.

‘ಒಲಿಂಪಿಕ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ಚೀನಾ, ಅಮೆರಿಕ, ಜರ್ಮನಿ, ಜಪಾನ್‌, ಆಸ್ಟ್ರೇಲಿಯಾ, ಕೆನಡಾ ನಮಗಿಂತ ಎಷ್ಟೊ ಮೇಲ್ಮಟ್ಟದಲ್ಲಿವೆ’ ಎಂದಿದ್ದಾರೆ. ‘ನಮ್ಮಲ್ಲೂ ಪ್ರತಿಭೆಗಳಿವೆ. ಆದರೆ ಅವರನ್ನು ಗುರುತಿಸಿ, ಬೆಳೆಸಿ ಮುಂದಿನ ಹಂತಕ್ಕೆ ಸಜ್ಜುಗೊಳಿಸುವ ಕಡೆ ಹೆಚ್ಚು ಗಮನ ನೀಡುತ್ತಿಲ್ಲ’ ಎಂದಿದ್ದಾರೆ.

ADVERTISEMENT

ಜಾಲತಾಣಗಳ ಹಲವು ಬಳಕೆದಾರರು ಅವರ ಮಾತಿಗೆ ಸಮ್ಮತಿ ಸೂಚಿಸಿದ್ದಾರೆ. ‘ನಮ್ಮಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ ಎಂದು ಜನಸಾಮಾನ್ಯರು ಹೇಳುವುದಕ್ಕೆ ನನ್ನ ಸಹಮತವಿದೆ’ ಎಂದಿದ್ದಾರೆ.

‘ಪ್ರತಿಭೆಗಳನ್ನು ಸರಿಯಾದ ಸಮಯದಲ್ಲಿ, ಸರಿಯಾದ ರೀತಿಯಲ್ಲಿ ಗುರುತಿಸಿ ಬೆಳೆಸುವಲ್ಲಲಿ ನಾವು ತುಂಬಾ ಹಿಂದೆಯಿದ್ದೇವೆ. ಇದಕ್ಕಾಗಿ ನನ್ನನ್ನು ಕೊಲ್ಲಲೂ ಮುಂದಾದರೂ ಹೆದರುವುದಿಲ್ಲ. ಆದರೆ ಇದು ವಾಸ್ತವ ವಿಷಯ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.