ಗುರುಗ್ರಾಮ: ಅತಿಯಾದ ನಿರೀಕ್ಷೆಗಳು ಕೆಲವೊಮ್ಮೆ ಮನಸ್ಸಿಗೆ ಆಘಾತ ತಂದೊಡ್ಡುತ್ತವೆ. ಆದ್ದರಿಂದ ಸಮತೋಲನ ಸಾಧಿಸುವುದು ಮುಖ್ಯ ಎಂದು ದಿಗ್ಗಜ ಕ್ರಿಕೆಟಿಗ ಕಪಿಲ್ ದೇವ್ ಹೇಳಿದ್ದಾರೆ.
ಈಚೆಗೆ ವಿಶ್ವಕಪ್ ಕ್ರಿಕೆಟ್ ಫೈನಲ್‌ನಲ್ಲಿ ಭಾರತದ ಎದುರು ಆಸ್ಟ್ರೇಲಿಯಾ ತಂಡವು ಗೆದ್ದಿತ್ತು. ಅದಕ್ಕೂ ಮುನ್ನ ಭಾರತವೇ ಕಪ್ ಜಯಿಸುವ ಅಪಾರ ನಿರೀಕ್ಷೆಯು ಅಭಿಮಾನಿಗಳ ವಲಯದಲ್ಲಿ ಮೂಡಿತ್ತು. ವಿಶ್ವಕಪ್ ಟೂರ್ನಿಯ ಲೀಗ್‌ನಲ್ಲಿ ಎಲ್ಲ ಒಂಬತ್ತು ಪಂದ್ಯ ಮತ್ತು ಸೆಮಿಫೈನಲ್ ಪಂದ್ಯವನ್ನು ಗೆದ್ದಿದ್ದ ಭಾರತವು ಆಜೇಯವಾಗಿ ಫೈನಲ್ ತಲುಪಿತ್ತು.
ಈ ಕುರಿತು ಮಾತನಾಡಿದ ಕಪಿಲ್, ‘ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸಿದ್ದ ಇನ್ನಿತರ ತಂಡಗಳೂ ಪ್ರಶಸ್ತಿ ಗೆಲುವಿನ ಕನಸು ಕಂಡಿದ್ದವು. ಅವರು ಕೂಡ ಗೆಲ್ಲಲ್ಲೆಂದೇ ಇಲ್ಲಿಗೆ ಬಂದಿದ್ದರು. ಅತಿಯಾದ ನಿರೀಕ್ಷೆಗಳನ್ನಿಟ್ಟುಕೊಂಡರೆ ಸೋಲು ಎದುರುದಾಗ ಹೃದಯ ಒಡೆದು ಹೋಗುವುದು ಸಹಜ. ಆದ್ದರಿಂದ ಅತಿರಂಜಿತವಾದ ನಿರೀಕ್ಷೆಗಳು ಬೇಡ. ಸಮತೋಲನ ಇರಲಿ’ ಎಂದರು. ಅವರು ಗ್ರ್ಯಾಂಟ್ ಥೊರಂಟನ್ ಅಹ್ವಾನಿತ ಗಾಲ್ಫ್ ಟೂರ್ನಿಯ ಟೀ ಆಫ್ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.