ADVERTISEMENT

ಎಲ್ಲ ಮಾದರಿ ಕ್ರಿಕೆಟ್‌ಗೆ ವಿದಾಯ ಹೇಳಿದ ಬ್ರಾವೊ: KKR ಮೆಂಟರ್ ಆಗಿ ಸೇರ್ಪಡೆ

ಕೋಲ್ಕತ್ತ ನೈಟ್ ರೈಡರ್ಸ್‌ ತಂಡಕ್ಕೆ ಮೆಂಟರ್ ಆಗಿಸ ಸೇರ್ಪಡೆಯಾಗಲಿದ್ದಾರೆ.

ಪಿಟಿಐ
Published 27 ಸೆಪ್ಟೆಂಬರ್ 2024, 12:45 IST
Last Updated 27 ಸೆಪ್ಟೆಂಬರ್ 2024, 12:45 IST
<div class="paragraphs"><p>ಡ್ವೇನ್‌ ಬ್ರಾವೊ</p></div>

ಡ್ವೇನ್‌ ಬ್ರಾವೊ

   

ನವದೆಹಲಿ: ವಿಶ್ವ ಕಪ್‌ ವಿಜೇತ ವೆಸ್ಟ್‌ ಇಂಡೀಸ್ ತಂಡದ ಆಲ್‌ರೌಂಡರ್‌ ಡ್ವೇನ್‌ ಬ್ರಾವೊ ಅವರುಎಲ್ಲ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತರಾಗುವುದಾಗಿ ಪ್ರಕಟಿಸಿದ್ದಾರೆ. ಅವರು ಐಪಿಎಲ್‌ ತಂಡವಾದ ಕೋಲ್ಕತ್ತ ನೈಟ್ ರೈಡರ್ಸ್‌ ತಂಡಕ್ಕೆ ಮೆಂಟರ್ ಆಗಿಸ ಸೇರ್ಪಡೆಯಾಗಲಿದ್ದಾರೆ.

ಆಟಗಾರರನಾಗಿ ಚೆನ್ನೈ ಸೂಪರ್ ಕಿಂಗ್ಸ್‌ ಜೊತೆಗಿನ ಬ್ರಾವೊ ಅವರ ದೀರ್ಘ ಕಾಲದ ಬಾಂಧವ್ಯ ಅಂತ್ಯಗೊಳ್ಳಲಿದೆ. ಈ ಹಿಂದೆ ಕೋಲ್ಕತ್ತ ನೈರ್ಟ್‌ ರೈಡರ್ಸ್‌ ತಂಡದ ಮೆಂಟರ್ ಆಗಿದ್ದ ಗೌತಮ್ ಗಂಭೀರ್ ಅವರ ಸ್ಥಾನವನ್ನು 40 ವರ್ಷದ ಬ್ರಾವೊ ಅವರು ತುಂಬಲಿದ್ದಾರೆ. ಗಂಭಿರ್ ಅವರು ಭಾರತ ತಂಡದ ಹೆಡ್‌ ಕೋಚ್‌ ಸ್ಥಾನದಲ್ಲಿದ್ದಾರೆ.

ADVERTISEMENT

ಈ ವಾರದ ಆರಂಭದಲ್ಲಿ ಗಾಯಾಳಾದ ಕಾರಣ ಕೆರೀಬಿಯನ್ ಸೂಪರ್‌ ಲೀಗ್‌ನಲ್ಲಿ ಅವರ ಪಯಣ ಈ ಬಾರಿ ಬೇಗ ಅಂತ್ಯಕಂಡಿದ.ಎ

‘ನನಗೆ ಎಲ್ಲವನ್ನೂ ಕೊಟ್ಟ ಆಟಕ್ಕೆ ಇಂದು ವಿದಾಯ ಹೇಳುತ್ತಿದ್ದೇನೆ’ ಎಂದು ಬ್ರಾವೊ ಅವರು ಗುರುವಾರ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದಿದ್ದಾರೆ.

2021ರಲ್ಲಿ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಕಳೆದ ವರ್ಷ ಐಪಿಎಲ್‌ಗೆ ಕೊನೆಹಾಡಿದ್ದರು. ಅವರ ಅವಧಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮೂರು ಬಾರಿ ಚಾಂಪಿಯನ್ ಆಗಿದೆ. 2011ರಲ್ಲಿ ಅವರು ಮೊದಲ ಬಾರಿ ಚೆನ್ನೈ ತಡ ಸೇರಿದ್ದರು.

ಅವರು ಅಫ್ಗಾನಿಸ್ತಾನ ತಂಡಕ್ಕೆ ಕನ್ಸಲ್ಟೆಂಟ್‌ ಆಗಿ ಸೇವೆ ಸಲ್ಲಿಸಿದ್ದರು.

‘ಡಿಜೆ ಬ್ರಾವೊ ಅವರು ತಂಡವನ್ನು ಸೇರಿಸಿಕೊಳ್ಳುತ್ತಿರುವುದು ಖುಷಿ ತಂದಿದೆ. ಗೆಲ್ಲಬೇಕೆಂಬ ಅವರ ತುಡಿತ, ಅವರ ಅನುಭವ, ಆಳವಾದ ಜ್ಞಾನವು ನಮ್ಮ ಫ್ರಾಂಚೈಸಿ ಮತ್ತು ಆಟಗಾರರಿಗೆ ನೆರವಾಗಲಿದೆ’ ಎಂದು ಕೆಕೆಆರ್‌ ಗ್ರೂಪ್‌ ಸಿಇಒ ವೆಂಕಿ ಮೈಸೂರ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅವರು ಕೆಕೆಆರ್‌ನ ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.