ADVERTISEMENT

ಮಹಿಳಾ ಕ್ರಿಕೆಟ್‌ ಸರಣಿ ಆಯೋಜನೆಗೆ ಇಸಿಬಿ ಚಿಂತನೆ

ಪಿಟಿಐ
Published 10 ಜೂನ್ 2020, 21:13 IST
Last Updated 10 ಜೂನ್ 2020, 21:13 IST
ಇಸಿಬಿ ಲೋಗೊ
ಇಸಿಬಿ ಲೋಗೊ   

ಲಂಡನ್‌: ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿಯು (ಇಸಿಬಿ) ಈ ವರ್ಷದ ಕೊನೆಯಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳನ್ನು ಒಳಗೊಂಡ ತ್ರಿಕೋನ ಸರಣಿ ಆಯೋಜಿಸಲು ಆ ದೇಶಗಳ ಮಂಡಳಿಗಳೊಂದಿಗೆ ಮಾತುಕತೆ ನಡೆಸಿದೆ.

ಭಾರತ ಮಹಿಳಾ ತಂಡವು ಇಂಗ್ಲೆಂಡ್‌ ವಿರುದ್ಧ ತಲಾ ಮೂರು ಏಕದಿನ ಹಾಗೂ ಟ್ವೆಂಟಿ–20 ಪಂದ್ಯಗಳನ್ನು ಒಳಗೊಂಡ ದ್ವಿಪಕ್ಷೀಯ ಸರಣಿ ಆಡಬೇಕಿತ್ತು. ಆದರೆ ಸದ್ಯ ಅದು ಮುಂದೂಡಿಕೆಯಾಗಿದೆ.

ಆಸ್ಟ್ರೇಲಿಯಾದಲ್ಲಿ ಮಹಿಳಾ ಟ್ವೆಂಟಿ–20 ವಿಶ್ವಕಪ್‌ ನಡೆದ ಬಳಿಕ ಮಾರ್ಚ್‌ನಲ್ಲಿ ಕೋವಿಡ್‌–19 ಪಿಡುಗಿನ ಹಿನ್ನೆಲೆಯಲ್ಲಿ ಎಲ್ಲ ಕ್ರೀಡಾ ಚಟುವಟಿಕೆಗಳು ಸ್ಥಗಿತಗೊಂಡಿದ್ದವು.

ADVERTISEMENT

‘ಎಲ್ಲಾ ಯೋಜನೆಯ ಪ್ರಕಾರ ನಡೆದರೆ ಈ ವರ್ಷ ಅಂತರರಾಷ್ಟ್ರೀಯ ಮಟ್ಟದಲ್ಲಿ ಕೆಲವು ಮಹಿಳಾ ಟೂರ್ನಿಗಳನ್ನು ನಡೆಸಬಹುದು’ ಎಂದು ಇಸಿಬಿ ಮುಖ್ಯ ಕಾರ್ಯನಿರ್ಹವಣಾಧಿಕಾರಿ ಟಾಮ್‌ ಹ್ಯಾರಿಸನ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಇಂಗ್ಲೆಂಡ್‌ನಲ್ಲಿ ಸೆಪ್ಟೆಂಬರ್‌ನಲ್ಲಿ ತ್ರಿಕೋನ ಸರಣಿ ಆಯೋಜಿಸುವ ಕುರಿತು ಬಿಸಿಸಿಐ ಹಾಗೂ ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಮಂಡಳಿಯೊಂದಿಗೆ (ಸಿಎಸ್‌ಎ) ಮಾತುಕತೆ ನಡೆಸಿದ್ದೇವೆ’ ಎಂದು ಪಾಡ್‌ಕಾಸ್ಟ್‌ ಸಂವಾದದಲ್ಲಿ ಹ್ಯಾರಿಸನ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.