ADVERTISEMENT

ಎಲಿಸ್ ಪೆರಿ ವಿನೂತನ ದಾಖಲೆ

ಪಿಟಿಐ
Published 29 ಜುಲೈ 2019, 20:05 IST
Last Updated 29 ಜುಲೈ 2019, 20:05 IST
ಎಲಿಸ್ ಪೆರಿ –ರಾಯಿಟರ್ಸ್ ಚಿತ್ರ
ಎಲಿಸ್ ಪೆರಿ –ರಾಯಿಟರ್ಸ್ ಚಿತ್ರ   

ಬ್ರೈಟನ್: ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ಆಲ್‌ರೌಂಡರ್ ಎಲಿಸ್ ಪೆರಿ ಅವರು ಭಾನುವಾರ ವಿನೂತನ ದಾಖಲೆ ಬರೆದರು. ಟ್ವೆಂಟಿ–20 ಮಾದರಿಯಲ್ಲಿ (ಪುರುಷ ಮತ್ತು ಮಹಿಳಾ ವಿಭಾಗ ಸೇರಿ) 1000 ರನ್ ಮತ್ತು 100 ವಿಕೆಟ್ ಕಬಳಿಸಿದ ಮೊದಲ ಕ್ರಿಕೆಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಇಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ಎದುರಿನ ಮಹಿಳೆಯರ ಟ್ವೆಂಟಿ–20 ಆ್ಯಷಸ್ ಟೂರ್ನಿಯ ಎರಡನೇ ಪಂದ್ಯದಲ್ಲಿ ಅವರು ಈ ಅಪರೂಪದ ಸಾಧನೆ ಮಾಡಿದರು. ನಾಯಕಿ ಮೆಗ್‌ಲ್ಯಾನಿಂಗ್ (43) ಜೊತೆ ಏಳನೇ ವಿಕೆಟ್‌ಗೆ ಅಮೋಘ ಆಟವಾಡಿದ ಪೆರಿ (ಅಜೇಯ 47) ತಂಡಕ್ಕೆ ಜಯದ ಕಾಣಿಕೆ ನೀಡಿದರು.

ಕಳೆದ ನವೆಂಬರ್‌ನಲ್ಲಿ ನಡೆದಿದ್ದ ವಿಶ್ವ ಟ್ವೆಂಟಿ–20 ಟೂರ್ನಿಯ ಫೈನಲ್‌ನಲ್ಲಿ ಇಂಗ್ಲೆಂಡ್‌ನ ನ್ಯಾಟ್ ಶೀವರ್ ವಿಕೆಟ್ ಕಬಳಿಸಿದ ಪೆರಿ 100 ವಿಕೆಟ್ ಸಾಧನೆ ಮಾಡಿದ್ದರು. ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಬೌಂಡರಿ ಸಿಡಿಸುವುದರೊಂದಿಗೆ ಸಾವಿರ ರನ್‌ ಕಲೆ ಹಾಕಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.