ADVERTISEMENT

ಎಸಿಸಿ ಎಮರ್ಜಿಂಗ್‌ ಏಷ್ಯಾ ಕಪ್‌ ಟಿ20 ಕ್ರಿಕೆಟ್‌ |ಅಜೇಯವಾಗಿ ಸೆಮಿಗೆ ಭಾರತ ಎ

ಪಿಟಿಐ
Published 24 ಅಕ್ಟೋಬರ್ 2024, 0:09 IST
Last Updated 24 ಅಕ್ಟೋಬರ್ 2024, 0:09 IST
ಆಯುಷ್​ ಬದೋನಿ
ಆಯುಷ್​ ಬದೋನಿ   

ಮಸ್ಕತ್‌: ‌ಭಾರತ ‘ಎ’ ತಂಡವು ಎಸಿಸಿ ಎಮರ್ಜಿಂಗ್‌ ಏಷ್ಯಾ ಕಪ್‌ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಅಜೇಯವಾಗಿ ಸೆಮಿಫೈನಲ್‌ಗೆ ಲಗ್ಗೆ ಹಾಕಿದೆ.

ಬುಧವಾರ ನಡೆದ ‘ಬಿ’ ಗುಂಪಿನ ಕೊನೆಯ ಪಂದ್ಯದಲ್ಲಿ ತಿಲಕ್‌ ವರ್ಮಾ ನೇತೃತ್ವದ ಭಾರತ ತಂಡವು 6 ವಿಕೆಟ್‌ಗಳಿಂದ ಒಮನ್‌ ತಂಡವನ್ನು ಮಣಿಸಿತು. ಶುಕ್ರವಾರ ನಡೆಯುವ ಸೆಮಿಫೈನಲ್‌ನಲ್ಲಿ ಭಾರತ ಅಫ್ಗಾನಿಸ್ತಾನ ತಂಡವನ್ನು ಎದುರಿಸಲಿದೆ.

ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡ ಒಮನ್​ 20 ಓವರ್​ಗಳಲ್ಲಿ 5 ವಿಕೆಟ್‌ಗೆ 140 ರನ್​ ಗಳಿಸಿತು. ಈ ಗುರಿಯನ್ನು ಭಾರತ ತಂಡವು ಆಯುಷ್​ ಬದೋನಿ (51 ರನ್, 27 ಎ​) ಅರ್ಧಶತಕದ ನೆರವಿನಿಂದ 15.2 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ ತಲುಪಿತು.

ADVERTISEMENT

ಆಡಿರುವ ಮೂರೂ ಪಂದ್ಯ ಗೆದ್ದಿರುವ ಭಾರತ ತಂಡವು ‘ಬಿ’ ಗುಂಪಿನಲ್ಲಿ ಅಗ್ರಸ್ಥಾನ ಪಡೆದಿದೆ. ಮೂರು ಪಂದ್ಯಗಳ ಪೈಕಿ ಎರಡನ್ನು ಗೆದ್ದಿರುವ ಪಾಕಿಸ್ತಾನ ಶಾಹೀನ್ಸ್ ತಂಡ ನಾಲ್ಕು ಅಂಕ ಗಳಿಸಿ, ಎರಡನೇ ಸ್ಥಾನದೊಂದಿಗೆ ನಾಲ್ಕರ ಘಟ್ಟಕ್ಕೆ ಮುನ್ನಡೆಯಿತು. ಪಾಕ್‌ ತಂಡವು ಮತ್ತೊಂದು ಸೆಮಿಫೈನಲ್‌ನಲ್ಲಿ ಶ್ರೀಲಂಕಾ ತಂಡವನ್ನು ಎದುರಿಸಲಿದೆ.

ಸಂಕ್ಷಿಪ್ತ ಸ್ಕೋರ್‌: ಒಮನ್‌: 20 ಓವರ್‌ಗಳಲ್ಲಿ 5ಕ್ಕೆ 140 (ಮೊಹಮ್ಮದ್‌ ನದೀಮ್ 41, ಹಮ್ಮದ್ ಮಿರ್ಜಾ ಔಟಾಗದೇ 28; ಆರ್. ಸಾಯಿ ಕಿಶೋರ್ 21ಕ್ಕೆ 1). ಭಾರತ ಎ: 15.2 ಓವರ್‌ಗಳಲ್ಲಿ 4ಕ್ಕೆ 146 (ಆಯುಷ್ ಬದೋನಿ 51, ತಿಲಕ್‌ ವರ್ಮಾ ಔಟಾಗದೇ 36, ಅಭಿಷೇಕ್‌ ಶರ್ಮಾ 34). ಫಲಿತಾಂಶ: ಭಾರತ ಎ ತಂಡಕ್ಕೆ 6 ವಿಕೆಟ್‌ ಜಯ. ಪಂದ್ಯದ ಆಟಗಾರ: ಆಯುಷ್ ಬದೋನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.