ADVERTISEMENT

ಎರಡನೇ ಕ್ರಿಕೆಟ್‌ ಟೆಸ್ಟ್‌: ಹೋರಾಟ ತೋರಿದ ಪಾಕ್

ಎರಡನೇ ಕ್ರಿಕೆಟ್‌ ಟೆಸ್ಟ್‌:ಓಲ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2024, 15:30 IST
Last Updated 16 ಅಕ್ಟೋಬರ್ 2024, 15:30 IST
ಬೆನ್‌ ಡಕೆಟ್‌
ರಾಯಿಟರ್ಸ್ ಚಿತ್ರ
ಬೆನ್‌ ಡಕೆಟ್‌ ರಾಯಿಟರ್ಸ್ ಚಿತ್ರ   

ಮುಲ್ತಾನ್: ಪಾಕಿಸ್ತಾನದ ಸ್ಪಿನ್ನರ್ ಸಾಜಿದ್ ಖಾನ್ ಅವರು ಶತಕ ವೀರ ಬೆನ್‌ ಡಕೆಟ್‌ ಅವರನ್ನೂ ಒಳಗೊಂಡು ಹತ್ತು ಎಸೆತಗಳ ಅಂತರದಲ್ಲಿ ಮೂರು ವಿಕೆಟ್‌ಗಳನ್ನು ಪಡೆದು, ಪಾಕಿಸ್ತಾನ ತಂಡಕ್ಕೆ ಎರಡನೇ ಟೆಸ್ಟ್‌ ಪಂದ್ಯದ ಎರಡನೇ ದಿನವಾದ ಬುಧವಾರ ಮೇಲುಗೈ ಒದಗಿಸಿದರು.

ಪಾಕಿಸ್ತಾನ ತಂಡದ 366 ರನ್‌ಗಳಿಗೆ ಉತ್ತರವಾಗಿ ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 6 ವಿಕೆಟ್‌ಗೆ 239 ರನ್ ಗಳಿಸಿದೆ. ಮುನ್ನಡೆಗೆ ಇನ್ನೂ 127 ರನ್ ದೂರವಿದೆ.

ಒಂದು ಹಂತದಲ್ಲಿ 2 ವಿಕೆಟ್‌ಗೆ 211 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿದ್ದ ಪ್ರವಾಸಿ ತಂಡಕ್ಕೆ ಸಾಜಿದ್ ಆಘಾತ ಚಹ ವಿರಾಮದ ಬಳಿಕ ಆಘಾತ ನೀಡಿದರು. ಮೊದಲ ಜೊ ರೂಟ್ (34), ನಂತರ ಬೆನ್ ಡಕೆಟ್‌ (114) ಮತ್ತು ಕೊನೆಯಲ್ಲಿ ಹ್ಯಾರಿ ಬ್ರೂಕ್ (9) ಅವರ ವಿಕೆಟ್ ಪಡೆದರು. ಇನ್ನೊಂದೆಡೆ ಸ್ಪಿನ್ನರ್‌ ನೊಮನ್ ಅಲಿ ಅವರು ಇಂಗ್ಲೆಂಡ್ ನಾಯಕ ಬೆನ್‌ ಸ್ಟೋಕ್ಸ್‌ (1) ಅವರ ವಿಕೆಟ್ ಗಳಿಸಿದ್ದರಿಂದ, ಪಾಕ್ ತಂಡ ಮೊದಲ ಬಾರಿ ಹಿಡಿತ ಪಡೆಯಿತು.

ADVERTISEMENT

ಇದಕ್ಕೆ ಮೊದಲು, 5 ವಿಕೆಟ್‌ಗೆ 290 ರನ್‌ಗಳೊಡನೆ ಆಟ ಮುಂದುವರಿಸಿದ ಪಾಕಿಸ್ತಾನ ಆ ಮೊತ್ತಕ್ಕೆ 76 ರನ್ ಸೇರಿಸಿತು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಪಾಕಿಸ್ತಾನ: 123.3 ಓವರುಗಳಲ್ಲಿ 366 (ಮೊಹಮ್ಮದ್ ರಿಜ್ವಾನ್ 41, ಅಮೆರ್ ಜಮಾಲ್ 37, ನೊಮಾನ್ ಅಲಿ 32; ಬ್ರೈಡನ್ ಕಾರ್ಸ್‌ 50ಕ್ಕೆ3, ಜಾಕ್ ಲೀಚ್ 114ಕ್ಕೆ4); ಇಂಗ್ಲೆಂಡ್‌: 53 ಓವರುಗಳಲ್ಲಿ 6 ವಿಕೆಟ್‌ಗೆ 239 (ಜಾಕ್‌ ಕ್ರಾಲಿ 37, ಬೆನ್ ಡಕೆಟ್‌ 114, ಓಲಿ ಪೋಪ್ 29, ಜೋ ರೂಟ್‌ 34; ಸಾಜಿದ್‌ ಖಾನ್ 86ಕ್ಕೆ4, ನೊಮಾನ್ ಅಲಿ 75ಕ್ಕೆ2).

ಬೆನ್‌ ಡಕೆಟ್‌ ಎಎಫ್‌ಪಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.