ADVERTISEMENT

ಮಹಿಳಾ ಟಿ20 ವಿಶ್ವಕಪ್: ಇಂಗ್ಲೆಂಡ್ ಸೆಮಿ ಕನಸು ಜೀವಂತ

ಪಿಟಿಐ
Published 13 ಅಕ್ಟೋಬರ್ 2024, 14:47 IST
Last Updated 13 ಅಕ್ಟೋಬರ್ 2024, 14:47 IST
ಇಂಗ್ಲೆಂಡ್ ತಂಡದ ಆರಂಭಿಕ ಜೋಡಿ ಡ್ಯಾನಿಲ್ ವೈಟ್ ಮತ್ತು ಮಯಿಯಾ ಬೌಷಿಯರ್ ಪರಸ್ಪರ ಅಭಿನಂದಿಸಿದರು   –ಎಪಿ/ಪಿಟಿಐ ಚಿತ್ರ 
ಇಂಗ್ಲೆಂಡ್ ತಂಡದ ಆರಂಭಿಕ ಜೋಡಿ ಡ್ಯಾನಿಲ್ ವೈಟ್ ಮತ್ತು ಮಯಿಯಾ ಬೌಷಿಯರ್ ಪರಸ್ಪರ ಅಭಿನಂದಿಸಿದರು   –ಎಪಿ/ಪಿಟಿಐ ಚಿತ್ರ     

ಶಾರ್ಜಾ: ಇಂಗ್ಲೆಂಡ್ ತಂಡವು ಇಲ್ಲಿ ನಡೆಯುತ್ತಿರುವ ಮಹಿಳಾ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಭಾನುವಾರ ಸ್ಕಾಟ್ಲೆಂಡ್ ವಿರುದ್ಧ 10 ವಿಕೆಟ್‌ಗಳಿಂದ ಜಯಿಸಿತು. ಇದರೊಂದಿಗೆ ಸೆಮಿಫೈನಲ್ ಪ್ರವೇಶದ ಕನಸನ್ನು ಜೀವಂತವಾಗುಳಿಸಿಕೊಂಡಿತು. 

ಟಾಸ್ ಗೆದ್ದ ಸ್ಕಾಟ್ಲೆಂಡ್ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಇಂಗ್ಲೆಂಡ್ ತಂಡದ ಬೌಲರ್‌ಗಳ ಪರಿಣಾಮಕಾರಿ ದಾಳಿಯ ಎದುರು ಸ್ಕಾಟ್ಲೆಂಡ್ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 109 ರನ್ ಮಾತ್ರ ಗಳಿಸಿತು. ತಂಡದ ಕ್ಯಾಥರಿನ್ ಬ್ರೈಸ್ (33 ರನ್) ಅವರು ತಂಡಕ್ಕೆ ಕಾಣಿಕೆ ನೀಡಿದರು. 

ಆದರೆ ಸ್ಕಾಟ್ಲೆಂಡ್ ಬೌಲರ್‌ಗಳು ಇಂಗ್ಲೆಂಡ್ ತಂಡದ ಎದುರು ದುರ್ಬಲರಾದರು. ಇಂಗ್ಲೆಂಡ್ ಆರಂಭಿಕ ಜೋಡಿ ಮಾಯಿಯಾ ಬೌಷಿಯರ್ (ಔಟಾಗದೆ 62) ಹಾಗೂ ಡ್ಯಾನಿಲ್ ವೈಡ್ ಹಾಜ್ (ಔಟಾಗದೆ 51) ಅವರಿಬ್ಬರೂ ತಂಡವನ್ನು ಕೇವಲ 10 ಓವರ್‌ಗಳಲ್ಲಿ ಗೆಲುವಿನ ದಡ ಸೇರಿಸಿದರು. 

ADVERTISEMENT

ಸಂಕ್ಷಿಪ್ತ ಸ್ಕೋರು: ಸ್ಕಾಟ್ಲೆಂಡ್: 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 109 (ಕ್ಯಾಥರಿನ್ ಬ್ರೈಸ್ 33, ಸೋಫಿ ಎಕ್ಸೆಲೆಸ್ಟೋನ್ 13ಕ್ಕೆ2) ಇಂಗ್ಲೆಂಡ್: 10 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 113 (ಮಾಯಿಯಾ ಬೌಷಿಯರ್ ಔಟಾಗದೆ 62, ಡ್ಯಾನಿಲ್ ವೈಟ್ ಹಾಜ್ ಔಟಾಗದೆ 51) ಫಲಿತಾಂಶ: ಇಂಗ್ಲೆಂಡ್ ತಂಡಕ್ಕೆ 10 ವಿಕೆಟ್‌ಗಳ ಜಯ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.