ಲಂಡನ್: ಮೂರನೇ ಮತ್ತು ನಿರ್ಣಾಯಕ ಕ್ರಿಕೆಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿದ ಇಂಗ್ಲೆಂಡ್ ಟೆಸ್ಟ್ ಸರಣಿಯನ್ನು 2–1ರಿಂದ ತನ್ನದಾಗಿಸಿಕೊಂಡಿದೆ.
ಮೂರು ದಿನ ಮಾತ್ರ ನಡೆದ ಟೆಸ್ಟ್‌ನಲ್ಲಿ ಇಂಗ್ಲೆಂಡ್ ಪಾರಮ್ಯ ಮೆರೆಯಿತು. ಒಂಬತ್ತು ವಿಕೆಟ್‌ಗಳಿಂದ ಪ್ರವಾಸಿ ತಂಡವನ್ನು ಸೋಲಿಸಿತು. ಮೊದಲ ದಿನ ಮಳೆಯಿಂದಾಗಿ ಆಟ ನಡೆದಿರಲಿಲ್ಲ. ರಾಣಿ ಎರಡನೇ ಎಲಿಜಬೆತ್ ಸಾವಿನ ಕಾರಣಎರಡನೇ ದಿನದಾಟ ರದ್ದುಗೊಂಡಿತ್ತು.
130 ರನ್‌ಗಳ ಗುರಿ ಪಡೆದಿದ್ದ ಇಂಗ್ಲೆಂಡ್, ನಾಲ್ಕನೇ ದಿನದಾಟದ ಅಂತ್ಯಕ್ಕೆ ವಿಕೆಟ್ ಕಳೆದುಕೊಳ್ಳದೆ 97 ರನ್ ಗಳಿಸಿತ್ತು. ಸೋಮವಾರ ಜಾಕ್ ಕ್ರಾವ್ಲಿ (ಔಟಾಗದೆ 69) ಮತ್ತು ಒಲಿ ಪೋಪ್ (ಔಟಾಗದೆ 11) ತಂಡವನ್ನು ಜಯದ ದಡ ಸೇರಿಸಿದರು. ಅಲೆಕ್ಸ್ ಲೀಸ್ (39) ವಿಕೆಟ್ ಮಾತ್ರ ಕಳೆದುಕೊಂಡಿತು.
ಬೆನ್ ಸ್ಟೋಕ್ಸ್ ನಾಯಕತ್ವದಲ್ಲಿ ಆಡಿದ ಏಳು ಟೆಸ್ಟ್‌ಗಳಲ್ಲಿ ಆತಿಥೇಯ ತಂಡಕ್ಕೆ ಇದು ಆರನೇ ಜಯವಾಗಿದೆ. ಡೀನ್ ಎಲ್ಗರ್ ನಾಯಕರಾದ ಬಳಿಕ ದಕ್ಷಿಣ ಆಫ್ರಿಕಾ ಮೊದಲ ಬಾರಿ ಸರಣಿ ಸೋಲು ಅನುಭವಿಸಿತು.
ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್:ದಕ್ಷಿಣ ಆಫ್ರಿಕಾ: 36.2 ಓವರ್‌ಗಳಲ್ಲಿ 118; ಇಂಗ್ಲೆಂಡ್: 36.2 ಓವರ್‌ಗಳಲ್ಲಿ 158: ಎರಡನೇ ಇನಿಂಗ್ಸ್: ದಕ್ಷಿಣ ಆಫ್ರಿಕಾ: 56.2 ಓವರ್‌ಗಳಲ್ಲಿ 169; ಇಂಗ್ಲೆಂಡ್: 22.3 ಓವರ್‌ಗಳಲ್ಲಿ 1ಕ್ಕೆ 130 (ಅಲೆಕ್ಸ್ ಲೀಸ್ 39, ಜಾಕ್ ಕ್ರಾವ್ಲಿ ಔಟಾಗದೆ 69, ಒಲಿ ಪೋಪ್ ಔಟಾಗದೆ 11). ಫಲಿತಾಂಶ: ಇಂಗ್ಲೆಂಡ್ ತಂಡಕ್ಕೆ ಒಂಬತ್ತು ವಿಕೆಟ್‌ಗಳ ಜಯ. 2–1ರಿಂದ ಸರಣಿ ಗೆಲುವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.