ಮುಲ್ತಾನ್, ಪಾಕಿಸ್ತಾನ : ಜೋ ರೂಟ್ ಅವರ ದ್ವಿಶತಕದ ಬಳಿಕ, ಹ್ಯಾರಿ ಬ್ರೂಕ್ ಅಮೋಘ ತ್ರಿಶತಕ ದಾಖಲಿಸಿದರು. ನಂತರ ಇಂಗ್ಲೆಂಡ್ ಬೌಲರ್‌ಗಳ ದಾಳಿಗೆ ಪಾಕಿಸ್ತಾನದ ಬ್ಯಾಟರ್‌ಗಳು ಪರದಾಡಿದ್ದು, ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್ ಗೆಲುವಿನ ಹಾದಿಯಲ್ಲಿದೆ.
ರೂಟ್ 262 ರನ್ ಗಳಿಸಿದರೆ, ಬ್ರೂಕ್ 317 ರನ್ ಬಾರಿಸಿದ್ದು, ಪಂದ್ಯದ ನಾಲ್ಕನೇ ದಿನವಾದ ಗುರುವಾರ ಇಂಗ್ಲೆಂಡ್ 7 ವಿಕೆಟ್‌ಗೆ 823 ರನ್‌ಗಳ ಹಿಮಾಲಯದೆತ್ತರದ ಮೊತ್ತ ಗಳಿಸಿ ಮೊದಲ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ತನ್ಮೂಲಕ ಪ್ರವಾಸಿ ತಂಡ 267 ರನ್‌ಗಳ ಮೊದಲ ಇನಿಂಗ್ಸ್ ಮುನ್ನಡೆ ಪಡೆಯಿತು.
ದಿನದಾಟ ಮುಗಿದಾಗ, ಪಾಕಿಸ್ತಾನ ಎರಡನೇ ಇನಿಂಗ್ಸ್‌ನಲ್ಲಿ 152 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದೆ.
ಆಘಾ ಸಲ್ಮಾನ್ ಅಜೇಯ 41 ರನ್ ಮತ್ತು ಅಮೇರ್ ಜಮಾಲ್ ಅಜೇಯ 27 ರನ್ ಗಳಿಸಿ ಆಡುತ್ತಿದ್ದಾರೆ. ಇವರಿಬ್ಬರು ಮುರಿಯದ ಏಳನೇ ವಿಕೆಟ್‌ಗೆ 70 ರನ್ ಸೇರಿಸಿದ ಪರಿಣಾಮ ಪಾಕ್ ಇನ್ನಷ್ಟು ಮುಖಭಂಗ ತಪ್ಪಿಸಿಕೊಂಡಿತು. ತಂಡ ಇನಿಂಗ್ಸ್ ಸೋಲು ತಪ್ಪಿಸಿಕೊಳ್ಳಲು ಇನ್ನೂ 115 ರನ್ ಗಳಿಸಬೇಕಾಗಿದೆ.
ಮುಲ್ತಾನಿನ ಸ್ಟೇಡಿಯಮ್‌ನಲ್ಲಿ 1379 ರನ್‌ಗಳು ಹರಿದುಬಂದಿವೆ. 17 ವಿಕೆಟ್‌ಗಳಷ್ಟೇ ಉರುಳಿವೆ.
ಬ್ರೂಕ್ ಮತ್ತು ರೂಟ್ ನಾಲ್ಕನೇ ವಿಕೆಟ್‌ಗೆ ದಾಖಲೆಯ 454 ರನ್ ಪೇರಿಸಿದರು. ಇಂಗ್ಲೆಂಡ್ (ಬುಧವಾರ: 3 ವಿಕೆಟ್‌ಗೆ 492) ಟೆಸ್ಟ್ ಇತಿಹಾಸದಲ್ಲಿ ನಾಲ್ಕನೇ ಅತ್ಯಧಿಕ ಮೊತ್ತ ಪೇರಿಸಿತು. ಈ ಹಿಂದೆ, 1957ರಲ್ಲಿ ಬರ್ಮಿಂಗಮ್ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಪೀಟರ್ ಮೇ ಮತ್ತು ಕಾಲಿನ್ ಕೌಡ್ರಿ ನಾಲ್ಕನೇ ವಿಕೆಟ್‌ಗೆ 411 ರನ್ ಜೊತೆಯಾಟವಾಡಿದ್ದು ದಾಖಲೆಯಾಗಿತ್ತು.
ಚಹಕ್ಕೆ ಹೊರಡಲು 33 ನಿಮಿಷಗಳಿದ್ದಾಗ ಇಂಗ್ಲೆಂಡ್ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಅಬ್ದುಲ್ಲಾ ಶಫೀಖ್ ಎರಡನೇ ಇನಿಂಗ್ಸ್‌ನ ಮೊದಲ ಎಸೆತದಲ್ಲೇ ಕ್ರಿಸ್ ವೋಕ್ಸ್ ಅವರಿಗೆ ವಿಕೆಟ್ ನೀಡಿದರು. ನಾಯಕ ಶಾನ್ ಮಸೂದ್ (11), ಬಾಬರ್ ಆಜಂ (5) ಮತ್ತು ಸಯೀಮ್ ಅಯೂಬ್ (25) ಕೂಡ ಪ್ರತಿರೋಧ ತೋರಲಿಲ್ಲ
ಬ್ರೂಕ್ ಅವರ 429 ನಿಮಿಷಗಳ (322 ಎಸೆತಗಳ) ಬ್ಯಾಟಿಂಗ್‌ನಲ್ಲಿ 29 ಬೌಂಡರಿ, ಮೂರು ಸಿಕ್ಸರ್‌ಗಳಿದ್ದವು. ಅವರು ತ್ರಿಶತಕ ಬಾರಿಸಿದ ಇಂಗ್ಲೆಂಡ್‌ನ ಆರನೇ ಆಟಗಾರ. ರೂಟ್ 375 ಎಸೆತಗಳನ್ನೆದುರಿಸಿ 17 ಬೌಂಡರಿಗಳನ್ನು ಬಾರಿಸಿದರು.
ಮೊದಲ ಇನಿಂಗ್ಸ್: ಪಾಕಿಸ್ತಾನ: 556; ಇಂಗ್ಲೆಂಡ್: 150 ಓವರುಗಳಲ್ಲಿ 7 ವಿಕೆಟ್‌ಗೆ 823 ಡಿಕ್ಲೇರ್ಡ್ (ಜೋ ರೂಟ್ 262, ಹ್ಯಾರಿ ಬ್ರೂಕ್ 317); ಎರಡನೇ ಇನಿಂಗ್ಸ್: 37 ಓವರುಗಳಲ್ಲಿ 6 ವಿಕೆಟ್‌ಗೆ 152 (ಸಯೀಮ್ ಅಯೂಬ್ 25, ಸಾದ್ ಶಕೀಲ್ 29, ಸಲ್ಮಾನ್ ಆಘಾ ಔಟಾಗದೇ 41, ಆಮೇರ್ ಜಮಾಲ್ ಔಟಾಗದೇ 27; ಗಸ್ ಅಟ್ಕಿನ್ಸನ್ 27ಕ್ಕೆ2, ಬ್ರಿಡನ್ ಕಾರ್ಸ್ 39ಕ್ಕೆ2)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.