ADVERTISEMENT

ಟಿ20 ವಿಶ್ವಕಪ್ ವೇಳೆ ತಂಡ ಸೇರುವ ಗುರಿ: ಜೋಫ್ರಾ ಆರ್ಚರ್‌

ಏಜೆನ್ಸೀಸ್
Published 27 ಮೇ 2021, 14:24 IST
Last Updated 27 ಮೇ 2021, 14:24 IST
ಜೋಫ್ರಾ ಆರ್ಚರ್‌–ರಾಯಿಟರ್ಸ್ ಚಿತ್ರ
ಜೋಫ್ರಾ ಆರ್ಚರ್‌–ರಾಯಿಟರ್ಸ್ ಚಿತ್ರ   

ಲಂಡನ್‌: ಅಕ್ಟೋಬರ್‌ನಲ್ಲಿ ನಡೆಯುವ ಟ್ವೆಂಟಿ–20 ವಿಶ್ವಕಪ್ ಟೂರ್ನಿ ಮತ್ತು ಅದರ ನಂತರ ನಡೆಯುವ ಆ್ಯಶಸ್ ಸರಣಿಯ ವೇಳೆಗೆ ತಂಡಕ್ಕೆ ಮರಳುವ ಗುರಿ ಇಟ್ಟುಕೊಂಡಿರುವುದಾಗಿ ಇಂಗ್ಲೆಂಡ್‌ನ ವೇಗದ ಬೌಲರ್‌ ಜೋಫ್ರಾ ಆರ್ಚರ್ ತಿಳಿಸಿದ್ದಾರೆ. ಮೊಣಕೈ ಗಾಯಕ್ಕೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿರುವ ಅವರು ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ.

26 ವರ್ಷದ ಆರ್ಚರ್‌ ಕಳೆದ ವಾರ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಸದ್ಯ ಪುನಶ್ಚೇತನ ಶಿಬಿರದಲ್ಲಿದ್ದಾರೆ.

‘ಗಾಯದಿಂದ ಚೇತರಿಸಿಕೊಂಡ ಬಳಿಕ ತಂಡವನ್ನು ಸೇರುವ ಧಾವಂತ ಇಲ್ಲ. ಟ್ವೆಂಟಿ–20 ವಿಶ್ವಕಪ್‌ ಮತ್ತು ಆ ಬಳಿಕ ನಡೆಯುವ ಆ್ಯಶಸ್‌ ಸರಣಿಗೆ ತಂಡದ ಪರ ಕಣಕ್ಕಿಳಿಯುವುದರತ್ತ ಚಿತ್ತ ನೆಟ್ಟಿದ್ದೇನೆ. ಅವರೆಡೂ ಟೂರ್ನಿಗಳೇ ಸದ್ಯ ನನ್ನ ಮುಂದಿರುವ ಗುರಿಗಳು. ಅದಕ್ಕೂ ಮೊದಲು ಸಂಪೂರ್ಣ ಚೇತರಿಸಿಕೊಂಡು ಭಾರತ ತಂಡದ ವಿರುದ್ಧ ತವರಿನಲ್ಲಿ ನಡೆಯುವ ಟೆಸ್ಟ್ ಸರಣಿಯಲ್ಲಿ ಆಡುವುದು ಸಾಧ್ಯವಾದರೆ ಉತ್ತಮ‘ ಎಂದು ‘ಡೇಲಿ ಮೇಲ್‌‘ಗೆ ಬರೆದಿರುವ ಅಂಕಣದಲ್ಲಿ ಆರ್ಚರ್‌ ತಿಳಿಸಿದ್ದಾರೆ.

ADVERTISEMENT

ಇಂಗ್ಲೆಂಡ್ ತಂಡವು ಜೂನ್‌ನಲ್ಲಿ ನ್ಯೂಜಿಲೆಂಡ್ ಎದುರು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಅದಾದ ಬಳಿಕ ಶ್ರೀಲಂಕಾ ಮತ್ತು ಪಾಕಿಸ್ತಾನ ತಂಡಗಳ ಎದುರು ಸೀಮಿತ ಓವರ್‌ಗಳ ಪಂದ್ಯಗಳ ಸರಣಿ ನಂತರ ಭಾರತದ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕಣಕ್ಕಿಳಿಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.