ADVERTISEMENT

ಕ್ರಿಕೆಟ್: ಮತ್ತೊಂದು ಜಯಭೇರಿಯ ಮೇಲೆ ಇಂಗ್ಲೆಂಡ್ ಕಣ್ಣು

ಇಂಗ್ಲೆಂಡ್–ಐರ್ಲೆಂಡ್ ಏಕದಿನ ಸರಣಿ ನಾಳೆಯಿಂದ

​ಪ್ರಜಾವಾಣಿ ವಾರ್ತೆ
Published 29 ಜುಲೈ 2020, 19:30 IST
Last Updated 29 ಜುಲೈ 2020, 19:30 IST
ಇಂಗ್ಲೆಂಡ್ ತಂಡದ ನಾಯಕ ಏಯಾನ್ ಮಾರ್ಗನ್ ಮಂಗಳವಾರ ಏಜಿಸ್ ಬೌಲ್ ಕ್ರೀಡಾಂಗಣದಲ್ಲಿ ಫೀಲ್ಡಿಂಗ್ ಅಭ್ಯಾಸ ಮಾಡಿದರು  –ರಾಯಿಟರ್ಸ್ ಚಿತ್ರ
ಇಂಗ್ಲೆಂಡ್ ತಂಡದ ನಾಯಕ ಏಯಾನ್ ಮಾರ್ಗನ್ ಮಂಗಳವಾರ ಏಜಿಸ್ ಬೌಲ್ ಕ್ರೀಡಾಂಗಣದಲ್ಲಿ ಫೀಲ್ಡಿಂಗ್ ಅಭ್ಯಾಸ ಮಾಡಿದರು  –ರಾಯಿಟರ್ಸ್ ಚಿತ್ರ   

ಸೌತಾಂಪ್ಟನ್: ಕೊರೊನಾ ಕಾಲದಲ್ಲಿ ಮೊಟ್ಟಮೊದಲ ಟೆಸ್ಟ್ ಸರಣಿ ಸಂಘಟಿಸಿ, ಜಯಭೇರಿ ಬಾರಿಸಿದ ಇಂಗ್ಲೆಂಡ್ ತಂಡ ಈಗ ಮತ್ತೊಂದು ಯಶಸ್ಸಿನತ್ತ ಚಿತ್ತ ನೆಟ್ಟಿದೆ.

ಗುರುವಾರದಿಂದ ತನ್ನ ನೆರೆಯ ದೇಶ ಐರ್ಲೆಂಡ್ ತಂಡದ ಎದುರು ಏಕದಿನ ಕ್ರಿಕೆಟ್ ಸರಣಿಯನ್ನು ಆಡಲು ಸಜ್ಜಾಗಿದೆ. ಏಜಿಸ್‌ ಬೌಲ್‌ನಲ್ಲಿ ಮೊದಲ ಪಂದ್ಯ ನಡೆಯಲಿದೆ. ಏಯಾನ್ ಮಾರ್ಗನ್ ಇಂಗ್ಲೆಂಡ್ ತಂಡದ ಸಾರಥ್ಯ ವಹಿಸಿದ್ದಾರೆ. ಈ ಮಾದರಿಯ ವಿಶ್ವ ಚಾಂಪಿಯನ್ ತಂಡವಾಗಿರುವ ಇಂಗ್ಲೆಂಡ್, ಈ ಸರಣಿಯಲ್ಲಿಯೂ ಜಯಿಸುವ ಛಲದಲ್ಲಿದೆ. ಐರ್ಲೆಂಡ್ ತಂಡಕ್ಕೆ ಆ್ಯಂಡ್ರ್ಯೂ ಬಲ್ಬಿರ್ನಿ ನಾಯಕರಾಗಿದ್ದಾರೆ. ಈ ಸರಣಿಯಲ್ಲಿ ಒಟ್ಟು ಮೂರು ಪಂದ್ಯಗಳು ನಡೆಯಲಿವೆ. ಜೀವ ಸುರಕ್ಷತಾ ವಾತಾವರಣದಲ್ಲಿ ಟೂರ್ನಿ ನಡೆಯಲಿದೆ.

ತಂಡಗಳು

ADVERTISEMENT

ಇಂಗ್ಲೆಂಡ್: ಏಯಾನ್ ಮಾರ್ಗನ್ (ನಾಯಕ), ಜೇಸನ್ ರಾಯ್, ಜಾನಿ ಬೆಸ್ಟೊ (ವಿಕೆಟ್‌ಕೀಪರ್), ಜೇಮ್ಸ್ ವಿನ್ಸಿ, ಮೋಯಿನ್ ಅಲಿ, ಸ್ಯಾಮ್ ಬಿಲ್ಲಿಂಗ್ಸ್‌, ಟಾಮ್ ಬ್ಯಾಂಟನ್, ಆದಿಲ್ ರಶೀದ್, ಟಾಮ್ ಕರನ್, ಡೇವಿಡ್ ವಿಲ್ಲಿ, ರೀಸ್ ಟೋಪ್ಲಿ.

ಐರ್ಲೆಂಡ್: ಆ್ಯಂಡ್ರ್ಯೂ ಬಲ್ಬೀರ್ನಿ (ನಾಯಕ), ಕರ್ಟೀಸ್ ಕ್ಯಾಂಪರ್, ಗರೆತ್ ಡೆಲೇನಿ, ಜೋಶ್ ಲಿಟಲ್, ಆ್ಯಂಡ್ರ್ಯೂ ಮೆಕ್‌ಶ್ರೈನ್, ಬೆರ್ರಿ ಮೆಕಾರ್ತಿ, ಕೆವಿನ್ ಓ ಬ್ರೇನ್, ವಿಲಿಯಂ್ ಪೋರ್ಟರ್‌ಫೀಲ್ಡ್, ಬಾಯ್ಡ್ ರಂಕಿನ್, ಸಿಮಿ ಸಿಂಗ್, ಪಾಲ್ ಸ್ಟರ್ಲಿಂಗ್, ಹ್ಯಾರಿ ಟೆಕ್ಟರ್, ಲಾರ್ಕನ್, ಟಕರ್, ಕ್ರೇಗ್ ಯಂಗ್.

ಪಂದ್ಯ ಆರಂಭ: ಸಂಜೆ 6.30 (ಭಾರತೀಯ ಕಾಲಮಾನ)

ನೇರಪ್ರಸಾರ: ಸೋನಿ ಸಿಕ್ಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.