ADVERTISEMENT

ಇಂಗ್ಲೆಂಡ್ ವೇಗಿ ಜೊಫ್ರಾ ಆರ್ಚರ್‌ಗೆ ಗಾಯ: ಭಾರತ ವಿರುದ್ಧದ ಏಕದಿನ ಸರಣಿಗೆ ಅಲಭ್ಯ

ಏಜೆನ್ಸೀಸ್
Published 30 ಮಾರ್ಚ್ 2021, 3:21 IST
Last Updated 30 ಮಾರ್ಚ್ 2021, 3:21 IST
ಜೊಫ್ರಾ ಆರ್ಚರ್
ಜೊಫ್ರಾ ಆರ್ಚರ್   

ಲಂಡನ್‌: ಮೊಣಕೈಗೆ ಗಾಯಗೊಂಡಿರುವ ವೇಗದ ಬೌಲರ್ ಜೊಫ್ರಾ ಆರ್ಚರ್ ಭಾರತ ಎದುರಿನ ಇಂಗ್ಲೆಂಡ್ ತಂಡದ ಏಕದಿನ ಸರಣಿಗೆ ಅಲಭ್ಯರಾಗಲಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌) ಕ್ರಿಕೆಟ್ ಟೂರ್ನಿಯ ಆರಂಭದ ಕೆಲವು ಪಂದ್ಯಗಳಲ್ಲಿ ಕೂಡ ಆಡಲು ಅವರಿಗೆ ಸಾಧ್ಯವಾಗದು.

ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಭಾನುವಾರ ಈ ವಿಷಯ ತಿಳಿಸಿದ್ದು ಶನಿವಾರ ಕೊನೆಗೊಂಡ ಟಿ20 ಸರಣಿಯ ಎಲ್ಲ ಐದು ಪಂದ್ಯಗಳಲ್ಲೂ ನೋವು ಸಹಿಸುತ್ತಲೇ ಬೌಲಿಂಗ್ ಮಾಡಿದ್ದಾರೆ ಎಂದು ವಿವರಿಸಿದೆ.

ಟಿ20 ಸರಣಿಯ ಪ್ರತಿ ಪಂದ್ಯದಲ್ಲೂ ಅವರು ತಮ್ಮ ಪಾಲಿನ ತಲಾ ನಾಲ್ಕು ಓವರ್‌ಗಳನ್ನು ಬೌಲಿಂಗ್ ಮಾಡಿದ್ದಾರೆ. ಸರಣಿಯಲ್ಲಿ ಭಾರತ 3–2ರಲ್ಲಿ ಜಯ ಗಳಿಸಿತ್ತು. ಮೂರು ಪಂದ್ಯಗಳ ಏಕದಿನ ಸರಣಿ ಇದೇ 23ರಿಂದ ಪುಣೆಯಲ್ಲಿ ನಡೆಯಲಿದೆ. ಏಪ್ರಿಲ್ ಒಂಬತ್ತರಂದು ಐಪಿಎಲ್ ಆರಂಭಗೊಳ್ಳಲಿದೆ.

ADVERTISEMENT

ಭಾರತ ಎದುರಿನ ಟೆಸ್ಟ್ ಸರಣಿಯ ಆರಂಭದಲ್ಲೂ ಆರ್ಚರ್‌ಗೆ ಮೊಣಕೈ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಮೊದಲ ಎರಡು ಪಂದ್ಯಗಳಲ್ಲಿ ಅವರು ಆಡಿರಲಿಲ್ಲ. ಇದೀಗ ಹೆಚ್ಚಿನ ಪರೀಕ್ಷೆ ಮತ್ತು ಚಿಕಿತ್ಸೆಗಾಗಿ ಇಂಗ್ಲೆಂಡ್‌ಗೆ ಕರೆಸಿಕೊಳ್ಳಲಾಗಿದೆ ಎಂದು ಕ್ರಿಕೆಟ್ ಮಂಡಳಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.