ADVERTISEMENT

ವಿಂಡೀಸ್‌ ವಿರುದ್ಧ ಶತಕ: ಹೊಸ ದಾಖಲೆ ಬರೆದ ಫಿಲ್ ಸಾಲ್ಟ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ನವೆಂಬರ್ 2024, 4:30 IST
Last Updated 10 ನವೆಂಬರ್ 2024, 4:30 IST
<div class="paragraphs"><p>ಫಿಲ್ ಸಾಲ್ಟ್</p></div>

ಫಿಲ್ ಸಾಲ್ಟ್

   

(ಚಿತ್ರ ಕೃಪೆ: X/@englandcricket)

ಬಾರ್ಬಡೋಸ್​: ಕಿಂಗ್ಸ್​ಸ್ಟನ್ ಓವಲ್ ಮೈದಾನದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಇಂಗ್ಲೆಂಡ್‌ ತಂಡದ ವಿಕೆಟ್‌ ಕೀಪರ್‌ ಫಿಲ್ ಸಾಲ್ಟ್ ಶತಕ ಸಿಡಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.

ADVERTISEMENT

ಟಿ20 ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ಈವರೆಗೆ ಕೇವಲ 13 ವಿಕೆಟ್ ಕೀಪರ್​ಗಳು ಮಾತ್ರ ಶತಕ ಸಿಡಿಸಿದ್ದಾರೆ. ಈ ಹದಿಮೂರು ವಿಕೆಟ್​ ಕೀಪರ್​ಗಳಲ್ಲಿ ಅತ್ಯಧಿಕ ಸೆಂಚುರಿ ಬಾರಿಸಿದ್ದು ಇಂಗ್ಲೆಂಡ್​ನ ಫಿಲ್ ಸಾಲ್ಟ್​. ಅವರು 34 ಪಂದ್ಯಗಳಿಂದ 3 ಶತಕ ಸಿಡಿಸಿದ್ದಾರೆ. 54 ಎಸೆತಗಳನ್ನು ಎದುರಿಸಿದ ಫಿಲ್ ಸಾಲ್ಟ್ 6 ಸಿಕ್ಸರ್‌, 9 ಫೋರ್​ಗಳೊಂದಿಗೆ ಅಜೇಯ 103 ರನ್ ಸಿಡಿಸಿದರು.

ಟಿ20 ಕ್ರಿಕೆಟ್ ಇತಿಹಾಸದಲ್ಲಿ ಒಂದೇ ತಂಡದ (ವಿಂಡೀಸ್‌) ವಿರುದ್ಧ ಮೂರು ಸೆಂಚುರಿ ಸಿಡಿಸಿದ ವಿಶೇಷ ವಿಶ್ವ ದಾಖಲೆ ಕೂಡ ಫಿಲ್ ಸಾಲ್ಟ್ ಪಾಲಾಗಿದೆ. 2023ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಶತಕ ಬಾರಿಸುವ ಮೂಲಕ ಸಾಲ್ಟ್ ಸೆಂಚುರಿ ಖಾತೆ ತೆರೆದರು. ಅದೇ ವರ್ಷ ವಿಂಡೀಸ್ ವಿರುದ್ಧ 2ನೇ ಶತಕ ಸಿಡಿಸಿದರು. ಇದೀಗ ಮೂರನೇ ಶತಕ ಬಾರಿಸುವ ಮೂಲಕ ಒಂದೇ ತಂಡದ ವಿರುದ್ಧ ಮೂರು ಟಿ20 ಶತಕ ಸಿಡಿಸಿದ ವಿಶ್ವದ ಏಕೈಕ ವಿಕೇಟ್‌ ಕೀಪರ್‌ ಎನಿಸಿಕೊಂಡಿದ್ದಾರೆ.

ಈ ಪಂದ್ಯದಲ್ಲಿ ವಿಂಡೀಸ್‌ ತಂಡವು ಇಗ್ಲೆಂಡ್‌ಗೆ 183 ರನ್​ಗಳ ಕಠಿಣ ಗುರಿ ನೀಡಿತ್ತು. ಫಿಲ್ ಸಾಲ್ಟ್ ಶತಕದ ನೆರವಿನಿಂದ ಇಂಗ್ಲೆಂಡ್‌ 16.5 ಓವರ್​ಗಳಲ್ಲಿ 2 ವಿಕೆಟ್ ಕಳೆದುಕೊಂಡು 183 ರನ್​ಗಳಿಸಿ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.