ಬೆಂಗಳೂರು: ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಎಸ್ಟೋನಿಯಾದ ಬ್ಯಾಟರ್ ಸಾಹಿಲ್ ಚೌಹಾಣ್ ನೂತನ ವಿಶ್ವದಾಖಲೆ ಬರೆದಿದ್ದು, ಕೇವಲ 27 ಎಸೆತಗಳಲ್ಲಿ ಶತಕ ಸಾಧನೆ ಮಾಡಿದ್ದಾರೆ.
ಸೈಪ್ರಸ್ ವಿರುದ್ಧ ನಡೆದ ಟ್ವೆಂಟಿ-20 ಪಂದ್ಯದಲ್ಲಿ ಎಸ್ಟೋನಿಯಾದ ಸಾಹಿಲ್, ಈ ದಾಖಲೆ ಬರೆದಿದ್ದಾರೆ.
ಆ ಮೂಲಕ 'ಯೂನಿವರ್ಸ್ ಬಾಸ್' ಖ್ಯಾತಿಯ ವೆಸ್ಟ್‌ಇಂಡೀಸ್‌ನ ಮಾಜಿ ಸ್ಫೋಟಕ ಬ್ಯಾಟರ್ ಕ್ರಿಸ್ ಗೇಲ್ ದಾಖಲೆಯನ್ನು ಮುರಿದಿದ್ದಾರೆ. 2013ರ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಗೇಲ್ 30 ಎಸೆತಗಳಲ್ಲಿ ಸೆಂಚುರಿ ಬಾರಿಸಿದ್ದರು.
ಟ್ವೆಂಟಿ-20 ಕ್ರಿಕೆಟ್‌ನಲ್ಲಿ ವೇಗದ ಶತಕ ವೀರರು:
ಸಾಹಿಲ್ ಚೌಹಾಣ್: 27 ಎಸೆತ (2024)
ಕ್ರಿಸ್ ಗೇಲ್: 30 ಎಸೆತ (2013)
ರಿಷಭ್ ಪಂತ್: 32 ಎಸೆತ (2018)
18 ಸಿಕ್ಸರ್ ದಾಖಲೆ...
32 ವರ್ಷದ ಸಾಹಿಲ್ ಅಂತಿಮವಾಗಿ 41 ಎಸೆತಗಳಲ್ಲಿ ಅಜೇಯ 144 ರನ್ ಗಳಿಸಿದರು. ಸಾಹಿಲ್ ಇನಿಂಗ್ಸ್‌ನಲ್ಲಿ 6 ಬೌಂಡರಿ ಹಾಗೂ 18 ಸಿಕ್ಸರ್‌ಗಳು ಸೇರಿದ್ದವು. 351.21ರ ಸ್ಟ್ರೈಕ್‌ರೇಟ್‌ನಲ್ಲಿ ಅಬ್ಬರಿಸಿದರು.
ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದಾಖಲಾದ ಅತಿ ವೇಗದ ಶತಕ ಇದಾಗಿದೆ. ಆ ಮೂಲಕ ನಮೀಬಿಯಾದ ಜಾನ್ ನಿಕೋಲ್ ಲಾಫ್ಟಿ-ಈಟನ್ (33 ಎಸೆತ) ದಾಖಲೆಯನ್ನು ಮುರಿದಿದ್ದಾರೆ.
18 ಸಿಕ್ಸರ್ ಗಳಿಸಿದ ಸಾಹಿಲ್, ಟ್ವೆಂಟಿ-20 ಅಂತರಾಷ್ಟ್ರೀಯ ಕ್ರಿಕೆಟ್‌ನ ಇನಿಂಗ್ಸ್‌ವೊಂದರಲ್ಲಿ ಅತಿ ಹೆಚ್ಚು ಸಿಕ್ಸರ್ ಗಳಿಸಿದ ಬ್ಯಾಟರ್ ಎಂಬ ಹಿರಿಮೆಗೆ ಭಾಜನರಾಗಿದ್ದಾರೆ. ಈ ಹಿಂದೆ ಅಫ್ಗಾನಿಸ್ತಾನದ ಹಜ್ರತುಲ್ಲ ಜಾಜೈ ಹಾಗೂ ನ್ಯೂಜಿಲೆಂಡ್‌ನ ಫಿನ್ ಅಲೆನ್ ತಲಾ 16 ಸಿಕ್ಸರ್ ಗಳಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.