ನವದೆಹಲಿ: ‘ಹಿಟ್ ಮ್ಯಾನ್’ಆಗಲು ದೊಡ್ಡ ದೇಹ, ಮಾಂಸಖಂಡಗಳು ಬೇಕಿಲ್ಲ ಎಂದು ಭಾರತ ಟ್ವೆಂಟಿ–20 ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಹೇಳಿದರು.
ರಾಜ್‌ಕೋಟ್‌ನ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ಗುರುವಾರ ಬಾಂಗ್ಲಾ ವಿರುದ್ಧ ನಡೆದ ಎರಡನೇ ಚುಟುಕು ಪಂದ್ಯದಲ್ಲಿ ತಮ್ಮ ವೃತ್ತಿಜೀವನದ 100ನೇ ಟ್ವೆಂಟಿ–20 ಪಂದ್ಯ ಆಡಿದ ರೋಹಿತ್ ಶರ್ಮಾ, ಆರು ಸಿಕ್ಸರ್, ಆರು ಬೌಂಡರಿ ಸಹಿತ 85 ರನ್ ಗಳಿಸಿ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು.
ಪಂದ್ಯ ಮುಗಿದ ಬಳಿಕಸ್ಪಿನ್ನರ್ ಯಜುವೇಂದ್ರ ಚಾಹಲ್ ನಡೆಸಿದ ಸಂದರ್ಶನಲ್ಲಿ ರೋಹಿತ್ ಮಾತನಾಡಿದ್ದಾರೆ.
ಮೊಸಾದೆಕ್ ಹುಸೇನ್ ಎಸೆದ ಓವರ್‌ನಲ್ಲಿ ಸತತ ಸಿಕ್ಸರ್ ಬಾರಿಸಿದ ಕ್ಷಣ ನಿಮಗೆ ಏನು ಎನಿಸಿತು ಎಂದು ಚಾಹಲ್ ಪ್ರಶ್ನಿಸಿದಕ್ಕೆ, ‘ನಾನು ಸತತ ಮೂರು ಎಸೆತಗಳನ್ನು ಸಿಕ್ಸರ್ ಸಿಡಿಸಿದ ಬಳಿಕ ನಾಲ್ಕನೇ ಎಸೆತವನ್ನು ಸಿಕ್ಸರ್‌ಗೆ ಪ್ರಯತ್ನಿಸಿದೆ. ಆದರೆ, ಸಾಧ್ಯವಾಗಲಿಲ್ಲ. ಬಳಿಕ ಒಂದೊಂದು ರನ್ ಗಳಿಸಲು ಮುಂದಾದೆ‘ ಎಂದಿದ್ದಾರೆ.
ಮಾತು ಮುಂದುವರಿಸಿ, ‘ನೀವು (ಚಾಹಲ್) ಕೂಡ ಸಿಕ್ಸರ್ ಸಿಡಿಸಬಹುದು. ಸಿಕ್ಸರ್ ಬಾರಿಸಲು ಕೇವಲ ದೊಡ್ಡ ದೇಹ, ಮಾಂಸಖಂಡಗಳು ಬೇಕಿಲ್ಲ. ಆದರೆ, ನಿಮಗೆ ಸಮಯ ಬೇಕಾಗುತ್ತದೆ. ಚೆಂಡನ್ನು ಬ್ಯಾಟ್‌ನ ಮಧ್ಯದಲ್ಲಿ ಹೊಡೆಯಬೇಕು ಎಂಬ ಸಂಗತಿ ನಿಮ್ಮ ತಲೆಯಲ್ಲಿ ಇರಬೇಕು. ಸಿಕ್ಸರ್ ಹೊಡೆಯಲುನಿಮಗೆ ಹಲವು ವಿಷಯಗಳುತಿಳಿದಿರಬೇಕು’ಎಂದು ಹೇಳಿದ್ದಾರೆ.
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 153ರನ್ ಗಳಿಸಿತ್ತು. ಈ ಮೊತ್ತ ಬೆನ್ನತ್ತಿದ ಭಾರತ 15.4 ಓವರ್‌ಗಳಲ್ಲಿ ಗೆಲುವಿನ ನಗೆ ಬೀರಿತು.
ಇದೇ ಪಂದ್ಯದಲ್ಲಿ ರೋಹಿತ್ ಶರ್ಮಾ (37 ಸಿಕ್ಸರ್) ಟಿ–20 ಕ್ರಿಕೆಟ್‌ನಲ್ಲಿ ಭಾರತದ ನಾಯಕನೊಬ್ಬ ಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆಯನ್ನು ತಮ್ಮದಾಗಿಸಿಕೊಂಡರು. ಈ ಮೂಲಕ ಮಾಜಿ ನಾಯಕ ಎಂ.ಎಸ್.ಧೋನಿ (34 ಸಿಕ್ಸರ್) ದಾಖಲೆಯನ್ನು ಮುರಿದಿದ್ದಾರೆ.
‘ತಂಡದ ಆರಂಭಿಕ ಆಟಗಾರರು ಉತ್ತಮ ಆರಂಭ ಕಂಡುಕೊಂಡರೆ ಪಂದ್ಯದ ಗತಿಯನ್ನೇ ಬದಲಾಯಿಸಬಹುದು. ಕೆಟ್ಟ ಸಮಯ ನಾನು ಔಟಾದೆ ಇದರ ಬಗ್ಗೆ ಸ್ಪಲ್ಪ ಬೇಸರವಿದೆ. ಆದಾಗ್ಯೂ, ನನ್ನ ಆಟದ ಬಗ್ಗೆ ನನಗೆ ಹೆಮ್ಮೆ ಇದೆ’ಎಂದು ಹೇಳಿದ್ದಾರೆ.
ನಾವು ದೆಹಲಿ ನಡೆದ ಮೊದಲ ಪಂದ್ಯ ಸೋಲು ಕಂಡಿದ್ದೇವು. ಆದರೆ ರಾಜ್‌ಕೋಟ್‌ನಲ್ಲಿ ಗೆಲುವು ಸಾಧಿಸುವುದು ನಮಗೆಮುಖ್ಯವಾಗಿತ್ತು ಎಂದರು.
ಸದ್ಯ ಮೂರು ಪಂದ್ಯಗಳು ಟಿ–20 ಸರಣಿಯಲ್ಲಿ ಉಭಯ ತಂಡಗಳು 1–1ರಲ್ಲಿ ಸಮಬಲ ಸಾಧಿಸಿವೆ.
ಭಾನುವಾರ ನಾಗ್ಪುರದಲ್ಲಿ ಮೂರನೇ ಟಿ–20 ಪಂದ್ಯ ನಡೆಯಲಿದ್ದು, ಸರಣಿ ಗೆಲುವಿನತ್ತ ಉಭಯ ತಂಡಗಳು ಚಿತ್ತನೆಟ್ಟಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.