ನವದೆಹಲಿ: ಮಹಿಳಾ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ಪ್ರಮುಖ ಆಟಗಾರ್ತಿಯರನ್ನು ಉಳಿಸಿಕೊಂಡಿದೆ. ಅದರಲ್ಲಿ ನಾಯಕಿ ಸ್ಮೃತಿ ಮಂದಾನ, ಎಲಿಸ್ ಪೆರಿ, ಕನ್ನಡತಿ ಶ್ರೇಯಾಂಕಾ ಪಾಟೀಲ ಹಾಗೂ ವಿಕೆಟ್‌ಕೀಪರ್ ರಿಚಾ ಘೋಷ್ ಅವರಿದ್ದಾರೆ. ಒಟ್ಟು ಐವರು ಆಟಗಾರ್ತಿಯರನ್ನು ಬಿಡುಗಡೆ ಮಾಡಿದೆ.
ಆರ್‌ಸಿಬಿಯು ದಿಶಾ ಕಾಸಾತ್, ಇಂದ್ರಾಣಿ ರಾಯ್, ಶ್ರದ್ಧಾ ಪೊಕಾರ್ಕರ್, ಶುಭ ಸತೀಶ್ ಮತ್ತು ಸಿಮ್ರಾನ್ ಬಹದ್ದೂರ್ ಅವರು ಬಿಡುಗಡೆಯಾಗಿದ್ದಾರೆ. ಗುರುವಾರ ಆರ್‌ಸಿಬಿಯು ಫ್ರಾಂಚೈಸಿ 6 ವಿದೇಶಿ ಆಟಗಾರ್ತಿಯರು ಸೇರಿದಂತೆ 14 ಮಂದಿಯನ್ನು ಉಳಿಸಿಕೊಂಡಿದೆ.
ಆರ್‌ಸಿಬಿಯು ಶೋಭನಾ, ಡೇನಿಲ್ ವೈಟ್, ಏಕ್ತಾ ಬಿಸ್ಟ್, ಎಲಿಸ್ ಪೆರಿ, ಜಾರ್ಜಿಯಾ ವರ‍್ರೆಹ್ಯಾಮ್, ಕನ್ನಿಕಾ ಅಹುಜಾ, ಕೇಟ್ ಕ್ರಾಸ್, ರೇಣುಕಾ ಸಿಂಗ್, ರಿಚಾ ಘೋಷ್, ಎಸ್. ಮೇಘನಾ, ಶ್ರೇಯಾಂಕಾ ಪಾಟೀಲ, ಸ್ಮೃತಿ ಮಂದಾನ, ಸೋಫಿ ಡಿವೈನ್ ಮತ್ತು ಸೋಫಿ ಮಾಲಿನೆ ಅವರನ್ನು ಉಳಿಸಿಕೊಂಡಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡವೂ ತನ್ನ ಬಳಗದ ಪಟ್ಟಿ ಪ್ರಕಟಿಸಿದೆ. ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ರಾಧಾ ಯಾದವ್ ಮತ್ತು ಅರುಂಧತಿ ರೆಡ್ಡಿ ಅವರನ್ನು ಉಳಿಸಿಕೊಂಡಿದೆ.
ಮುಂಬೈ ಇಂಡಿಯನ್ಸ್ ತಂಡವೂ 14 ಆಟಗಾರ್ತಿಯರನ್ನ ರಿಟೇನ್ ಮಾಡಿಕೊಂಡಿದೆ. ಹರ್ಮನ್‌ಪ್ರೀತ್ ಕೌರ್, ನಾಟ್ ಸೀವರ್ ಉಳಿದ ಆಟಗಾರ್ತಿಯರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.