ADVERTISEMENT

ಮೊದಲ ಟೆಸ್ಟ್‌: ದಕ್ಷಿಣ ಆಫ್ರಿಕಾ ವಿರುದ್ಧ ಇನಿಂಗ್ಸ್ ಸೋಲು ತಪ್ಪಿಸಿದ ಮಿರಾಜ್

ಏಜೆನ್ಸೀಸ್
Published 23 ಅಕ್ಟೋಬರ್ 2024, 14:24 IST
Last Updated 23 ಅಕ್ಟೋಬರ್ 2024, 14:24 IST
<div class="paragraphs"><p>ಕ್ರಿಕೆಟ್ </p></div>

ಕ್ರಿಕೆಟ್

   

(ಸಾಂಕೇತಿಕ ಚಿತ್ರ)

ಮೀರ್‌ಪುರ (ಬಾಂಗ್ಲಾದೇಶ): ಆಲ್‌ರೌಂಡರ್‌ ಮೆಹಿದಿ ಹಸನ್ ಮಿರಾಜ್‌ ಅವರ ಅಜೇಯ 87 ರನ್‌ಗಳ ನೆರವಿನಿಂದ ಬಾಂಗ್ಲಾದೇಶ ತಂಡ ಮೊದಲ ಟೆಸ್ಟ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಇನಿಂಗ್ಸ್ ಸೋಲು ತಪ್ಪಿಸಿಕೊಂಡಿದೆ. ಬುಧವಾರ ಮೂರನೇ ದಿನದಾಟ ಬೇಗ ಕೊನೆಗೊಂಡಾಗ ಆತಿಥೇಯರು ಎರಡನೇ ಇನಿಂಗ್ಸ್‌ನಲ್ಲಿ 81 ರನ್‌ಗಳ ಮುನ್ನಡೆ ಪಡೆದಿದ್ದಾರೆ.

ADVERTISEMENT

ದಟ್ಟ ಮೋಡ, ಮಳೆಯಿಂದ ದಿನದಾಟ ಬೇಗನೇ ಕೊನೆಗೊಂಡಾಗ ನಜ್ಮುಲ್ ಹಸನ್ ಶಾಂತೊ ಪಡೆ  ಎರಡನೇ ಇನಿಂಗ್ಸ್‌ನಲ್ಲಿ 7 ವಿಕೆಟ್‌ಗೆ 283 ರನ್ ಗಳಿಸಿತ್ತು. ಎರಡನೇ ದಿನದ ಕೊನೆಗೆ 3 ವಿಕೆಟ್‌ಗೆ 102 ರನ್ ಗಳಿಸಿದ್ದ ಬಾಂಗ್ಲಾ ಒಂದು ಹಂತದಲ್ಲಿ 112 ರನ್‌ಗಳಾಗುವಷ್ಟರಲ್ಲಿ 6 ವಿಕೆಟ್‌ ಕಳೆದುಕೊಂಡು ಇನಿಂಗ್ಸ್‌ ಸೋಲಿನ ಭಯದಲ್ಲಿತ್ತು.

ಆದರೆ, ಮೆಹಿದಿ ಹಸನ್ ಮಿರಾಜ್, ಟೆಸ್ಟ್‌ಗೆ ಪದಾರ್ಪಣೆ ಮಾಡಿದ ಜೇಕರ್ ಆಲಿ ಜೊತೆ ಏಳನೇ ವಿಕೆಟ್‌ಗೆ 138 ರನ್ ಸೇರಿಸಿದ್ದರಿಂದ ತಂಡ ಮುಖಭಂಗ ತಪ್ಪಿಸಿಕೊಂಡಿತು. ನಂತರ ಮಿರಾಜ್‌ ಮುರಿಯದ ಎಂಟನೇ ವಿಕೆಟ್‌ಗೆ ನಯೀಮ್ ಹಸನ್ (ಔಟಾಗದೇ 16) ಜೊತೆ 33 ರನ್ ಸೇರಿಸಿ ಹೋರಾಟ ಮುಂದುವರಿಸಿದರು.

ವೇಗದ ಬೌಲರ್ ಕಗಿಸೊ ರಬಾಡ 35 ರನ್ನಿಗೆ 4 ವಿಕೆಟ್ ಪಡೆದರೆ, ಸ್ಪಿನ್ನರ್ ಕೇಶವ ಮಹಾರಾಜ್ ಮೂರು ವಿಕೆಟ್ ಪಡೆದರು.

ಬಾಂಗ್ಲಾದೇಶದ ಮೊದಲ ಇನಿಂಗ್ಸ್‌ 106 ರನ್‌ಗಳಿಗೆ ಉತ್ತರವಾಗಿ ದಕ್ಷಿಣ ಆಫ್ರಿಕಾ 308 ರನ್ ಗಳಿಸಿ 202 ರನ್‌ಗಳ ಮುನ್ನಡೆ ಪಡೆದಿತ್ತು.

ಸ್ಕೋರುಗಳು: ಬಾಂಗ್ಲಾದೇಶ: 106 ಮತ್ತು 85 ಓವರುಗಳಲ್ಲಿ 7 ವಿಕೆಟ್‌ಗೆ 283 (ಮಹಮದುಲ್ ಹಸನ್ ಜಾಯ್ 40, ಮುಷ್ಫಿಕುರ್‌ ರಹೀಂ 33, ಮಹಿದಿ ಹಸನ್ ಮಿರಾಜ್ ಔಟಾಗದೇ 87, ಜೇಕರ್ ಅಲಿ 58; ಕಗಿಸೊ ರಬಾಡ 35ಕ್ಕೆ4, ಕೇಶವ ಮಹಾರಾಜ್ 105ಕ್ಕೆ3); ದಕ್ಷಿಣ ಆಫ್ರಿಕಾ: 308.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.