ಮುಂಬೈ: ಬೆರಳಿನ ಗಾಯದಿಂದ ಗುಣಮುಖರಾಗಿರುವ ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರು ಮುಂಬೈ ಇಂಡಿಯನ್ಸ್ ತಂಡಕ್ಕೆ ಮರಳಿದ್ದಾರೆ.
ಹೋದ ತಿಂಗಳು ವೆಸ್ಟ್ ಇಂಡೀಸ್ ಎದುರಿನ ಸರಣಿಯಲ್ಲಿ ಅವರ ಬೆರಳಿಗೆ ಪೆಟ್ಟುಬಿದ್ದಿತ್ತು. ಅದರ ನಂತರ ಅವರು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಆರೈಕೆ ಮತ್ತು ಪುನಶ್ಚೇತನ ಶಿಬಿರದಲ್ಲಿದ್ದರು. ಅದರಿಂದಾಗಿ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎದುರು ನಡೆದಿದ್ದ ಪಂದ್ಯದಲ್ಲಿ ಆಡಿರಲಿಲ್ಲ.
ರಾಜಸ್ಥಾನ ರಾಯಲ್ಸ್ ಎದುರು ನಡೆಯಲಿರುವ ಪಂದ್ಯದಲ್ಲಿ ಅವರು ಕಣಕ್ಕೆ ಇಳಿಯುವರು ಎಂದು ಮುಂಬೈ ತಂಡದ ಮೂಲಗಳು ತಿಳಿಸಿವೆ.
‘ಮೂರು ದಿನಗಳ ಕ್ವಾರಂಟೈನ್ ಮತ್ತು ಆರೋಗ್ಯ ತಪಾಸಣೆಯ ನಂತರ ಅಭ್ಯಾಸಕ್ಕೆ ತೆರಳುವರು’ ಎಮದು ತಂಡದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.