ಬ್ರಿಜ್ಟೌನ್: ವೆಸ್ಟ್ ಇಂಡೀಸ್ ತಂಡವು ಶನಿವಾರ ನಡೆದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ನಾಲ್ಕು ವಿಕೆಟ್ಗಳಿಂದ ಸೋಲಿಸಿತು. ಆ ಮೂಲಕ ಸರಣಿಯನ್ನೂ ಆತಿಥೇಯರು 2–1 ರಿಂದ ಗೆದ್ದುಕೊಂಡರು.
ಮಳೆಯಿಂದ 40 ಓವರುಗಳಿಗೆ ಮೊಟಕುಗೊಂಡ ಪಂದ್ಯದಲ್ಲಿ ಮೊದಲು ಆಡಬೇಕಾಗಿ ಬಂದ ಇಂಗ್ಲೆಂಡ್ 9 ವಿಕೆಟ್ಗೆ 206 ರನ್ ಗಳಿಸಿತು. ಮಳೆ ಮತ್ತೆ ಶುರುವಾದ ಪರಿಣಾಮ ಡಕ್ವರ್ತ್ ಲೂಯಿಸ್ ನಿಯಮದಡಿ ವೆಸ್ಟ್ ಇಂಡೀಸ್ ತಂಡದ ಗುರಿಯನ್ನು ನಂತರ 33 ಓವರುಗಳಲ್ಲಿ 188 ರನ್ಗಳಿಗೆ ಪರಿಷ್ಕೃತಗೊಳಿಸಲಾಯಿತು. ಆತಿಥೇಯರು 14 ಎಸೆತಗಳು ಉಳಿದಿರುವಂತೆ 6 ವಿಕೆಟ್ಗೆ 191 ರನ್ ಹೊಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.