ADVERTISEMENT

ದ್ರಾವಿಡ್‌ಗೆ ಹೋಲಿಸಿದರೆ ಗಂಭೀರ್ ನೇತೃತ್ವದ ಕೋಚಿಂಗ್ ಬಳಗ ಭಿನ್ನವಾಗಿದೆ: ರೋಹಿತ್

ಪಿಟಿಐ
Published 17 ಸೆಪ್ಟೆಂಬರ್ 2024, 9:38 IST
Last Updated 17 ಸೆಪ್ಟೆಂಬರ್ 2024, 9:38 IST
<div class="paragraphs"><p>ಪಿಟಿಐ ಚಿತ್ರ</p></div>

ಪಿಟಿಐ ಚಿತ್ರ

   

ಚೆನ್ನೈ: ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಶೈಲಿಯು ಈ ಹಿಂದಿನ ಕೋಚ್ ರಾಹುಲ್ ದ್ರಾವಿಡ್‌ ಅವರಿಗಿಂತ ಭಿನ್ನವಾಗಿದೆ. ಆದರೆ, ಹೊಸ ತರಬೇತಿ ತಂಡದ ಜೊತೆ ಉತ್ತಮ ಸಂಬಂಧ ಹೊಂದಿದ್ದೇನೆ ಎಂದು ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.

ಬುಧವಾರದಿಂದ ಬಾಂಗ್ಲಾದೇಶದ ವಿರುದ್ಧ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯಕ್ಕೂ ಮುನ್ನ ಪತ್ರಿಕಾಗೋಷ್ಠಿ ನಡೆಸಿದ ಅವರು, ‘ಖಂಡಿತವಾಗಿ ರಾಹುಲ್ ಭಾಯ್, ವಿಕ್ರಮ್ ರಾಥೊಡ್ ಮತ್ತು ಪಾರಸ್ ಮಹಾಂಬ್ರೆ ತಂಡವು ಭಿನ್ನ ತಂಡವಾಗಿದೆ. ಹೊಸ ತರಬೇತಿ ತಂಡವು ಭಿನ್ನ ದೃಷ್ಟಿಕೋನವನ್ನು ತರುತ್ತದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು’ ಎಂದಿದ್ದಾರೆ.

ADVERTISEMENT

‘ಹೊಸ ತರಬೇತಿ ತಂಡವು ವಿಭಿನ್ನ ಶೈಲಿಯನ್ನು ಹೊಂದಿದೆ. ಆದರೆ, ಅದು ಸಮಸ್ಯೆಯಲ್ಲ. ಪರಸ್ಪರ ಅರ್ಥ ಮಾಡಿಕೊಳ್ಳುವುದು ಮುಖ್ಯ. ಗಂಭೀರ್ ಅವರ ಜೊತೆಯೂ ಉತ್ತಮ ಬಾಂಧವ್ಯವಿದೆ’ಎಂದಿದ್ದಾರೆ.

ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಜುಲೈನಲ್ಲಿ ಗಂಭೀರ್ ಅಧಿಕಾರ ವಹಿಸಿಕೊಂಡರು. ಅವರ ಅಧಿಕಾರ ಆರಂಭವಾದ ಬಳಿಕ ಭಾರತ ತಂಡ ಮೊದಲ ಟೆಸ್ಟ್ ಪಂದ್ಯವನ್ನು ಆಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.