ADVERTISEMENT

ಪಾಕ್‌ ತಂಡದ ಕೋಚ್‌ ಹುದ್ದೆ ತೊರೆದ ಗ್ಯಾರಿ ಕರ್ಸ್ಟೆನ್‌

ಪಿಟಿಐ
Published 28 ಅಕ್ಟೋಬರ್ 2024, 13:27 IST
Last Updated 28 ಅಕ್ಟೋಬರ್ 2024, 13:27 IST
<div class="paragraphs"><p>ಗ್ಯಾರಿ ಕರ್ಸ್ಟೆನ್‌</p></div>

ಗ್ಯಾರಿ ಕರ್ಸ್ಟೆನ್‌

   

ಕರಾಚಿ: ಪಾಕಿಸ್ತಾನ ಸೀಮಿತ ಓವರುಗಳ ತಂಡದ ಕೋಚ್‌ ಗ್ಯಾರಿ ಕರ್ಸ್ಟೆನ್ ಅವರು ಸೋಮವಾರ ತಮ್ಮ ಹುದ್ದೆ ತೊರೆದಿದ್ದಾರೆ. ತಂಡದ ಕ್ರಿಕೆಟ್‌ ಮಂಡಳಿ ಜೊತೆಗಿನ ಭಿನ್ನಾಭಿಪ್ರಾಯದಿಂದ ನೇಮಕಗೊಂಡ ಆರೇ ತಿಂಗಳಲ್ಲಿ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ.

56 ವರ್ಷ ವಯಸ್ಸಿನ ಕರ್ಸ್ಟೆನ್ ಈ ವರ್ಷದ ಏಪ್ರಿಲ್‌ನಲ್ಲಿ ನೇಮಕಗೊಂಡಿದ್ದರು. ಈ ಹಿಂದೆ, 2011ರಲ್ಲಿ ಭಾರತ ತಂಡ ಏಕದಿನ ವಿಶ್ವಕಪ್ ಗೆದ್ದಾಗ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಭಾರತ ತಂಡಕ್ಕೆ ಹೆಡ್‌ ಕೋಚ್‌ ಆಗಿದ್ದರು.

ADVERTISEMENT

ಮುಂದಿನ ತಿಂಗಳು ನಿಯಮಿತ ಓವರುಗಳ ಕ್ರಿಕೆಟ್ ಪಂದ್ಯಗಳನ್ನು ಆಡಲು ಆಸ್ಟ್ರೇಲಿಯಾಕ್ಕೆ ತೆರಳುವ ತಂಡಕ್ಕೆ, ಈಗ ಟೆಸ್ಟ್‌ ತಂಡದ ಕೋಚ್ ಆಗಿರುವ ಜೇಸನ್ ಗಿಲೆಸ್ಪಿ ಅವರೇ ಕೋಚ್‌ ಹೊಣೆ ವಹಿಸಲಿದ್ದಾರೆ ಎಂದು ಪಿಸಿಬಿ ‘ಎಕ್ಸ್‌’ ವೇದಿಕೆಯಲ್ಲಿ ತಿಳಿಸಿದೆ. ಕರ್ಸ್ಟೆನ್ ಅವರ ರಾಜೀನಾಮೆಯನ್ನು ಮಂಡಳಿ ಅಂಗೀಕರಿಸಿದೆ.

ತಾವು ತಾತ್ಕಾಲಿಕವಾಗಿ ಈ ಹುದ್ದೆ ವಹಿಸಲಿದ್ದು, ಖಾಯಂ ಆಗಿ ವಹಿಸಲು ಆಸಕ್ತರಾಗಿಲ್ಲ ಎಂದು ಗಿಲೆಸ್ಪಿ ಪಾಕ್‌ ಕ್ರಿಕೆಟ್‌ ಮಂಡಳಿಗೆ ತಿಳಿಸಿದ್ದಾರೆ ಎಂದು ಈ ಬೆಳವಣಿಗೆಯ ಮಾಹಿತಿಯಿರುವ ವಿಶ್ವಸನೀಯ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.