ADVERTISEMENT

PAK vs ENG Test | ಚೊಚ್ಚಲ ಪಂದ್ಯದಲ್ಲಿ ಕಮ್ರಾನ್ ಶತಕ

ಇಂಗ್ಲೆಂಡ್ –ಪಾಕ್ ಎರಡನೇ ಟೆಸ್ಟ್‌

ಏಜೆನ್ಸೀಸ್
Published 15 ಅಕ್ಟೋಬರ್ 2024, 14:06 IST
Last Updated 15 ಅಕ್ಟೋಬರ್ 2024, 14:06 IST
<div class="paragraphs"><p>ಕಮ್ರಾನ್ ಗುಲಾಂ</p></div>

ಕಮ್ರಾನ್ ಗುಲಾಂ

   

(ಚಿತ್ರ ಕೃಪೆ: @TheRealPCB)

ಮುಲ್ತಾನ್ (ಪಾಕಿಸ್ತಾನ): ನಾಲ್ಕನೇ ಕ್ರಮಾಂಕದಲ್ಲಿ ಪಾಕಿಸ್ತಾನ ತಂಡ ಎದುರಿಸುತ್ತಿದ್ದ ಸಮಸ್ಯೆಗೆ ಪರಿಹಾರ ಎಂಬಂತೆ ಕಮ್ರಾನ್ ಗುಲಾಂ ತಮ್ಮ ಪದಾರ್ಪಣೆ ಪಂದ್ಯದಲ್ಲೇ ಶತಕ ಬಾರಿಸಿದರು. ಇಂಗ್ಲೆಂಡ್‌ ವಿರುದ್ಧ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಾಟವನ್ನು ಆತಿಥೇಯರು 5 ವಿಕೆಟ್‌ಗೆ 259 ರನ್‌ಗಳೊಡನೆ ತೃಪ್ತಿಕರವಾಗಿ ಪೂರೈಸಿದರು.

ADVERTISEMENT

ಪುನರ್ನಿಮಾಣಗೊಂಡ ಪಿಚ್‌ನಲ್ಲಿ ಸಂಯಮದಿಂದ ಆಡಿದ ಗುಲಾಂ 224 ಎಸೆತಗಳನ್ನು ಎದುರಿಸಿ 118 ರನ್ (4x11, 6x1) ಗಳಿಸಿದರು. ಚೊಚ್ಚಲ ಟೆಸ್ಟ್‌ನಲ್ಲೇ ಶತಕ ಬಾರಿಸಿದ ಪಾಕಿಸ್ತಾನದ 13ನೇ ಆಟಗಾರ ಎನಿಸಿದರು. ಇಂಗ್ಲೆಂಡ್ ವಿರುದ್ಧ ಈ ಸಾಧನೆ ಮಾಡಿದ ಪಾಕ್‌ನ ಮೊದಲ ಬ್ಯಾಟರ್ ಕೂಡ.

ಮೊದಲ ದರ್ಜೆ ಪಂದ್ಯಗಳಲ್ಲಿ 16 ಶತಕ ಬಾರಿಸಿ ಅವಕಾಶಕ್ಕಾಗಿ ಕಾಯುತ್ತಿದ್ದ 29 ವರ್ಷ ವಯಸ್ಸಿನ ಗುಲಾಂ ತಮಗೆ ದೊರೆತ ಅವಕಾಶ ಸದುಪಯೋಗ ಪಡಿಸಿದರು. ಲಯ ಕಳೆದುಕೊಂಡಿದ್ದ ಅನುಭವಿ ಬಾಬರ್ ಆಜಂ ಸ್ಥಾನದಲ್ಲಿ ಅವರಿಗೆ ದೊರಕಿತ್ತು.

ತಂಡ 19 ರನ್ನಿಗೆ 2 ವಿಕೆಟ್ (ಅಬ್ದುಲ್ಲಾ ಶಫೀಖ್ ಮತ್ತು ನಾಯಕ ಶಾನ್ ಮಸೂದ್‌) ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಆರಂಭ ಆಟಗಾರ ಸಯೀಮ್ ಅಯೂಬ್‌ (77) ಜೊತೆ ಮೂರನೇ ವಿಕೆಟ್‌ಗೆ 149 ರನ್ ಸೇರಿಸಿದರು. ಅಯೂಬ್‌ಗೆ ಇದು ನಾಲ್ಕು ಟೆಸ್ಟ್‌ ಪಂದ್ಯಗಳಲ್ಲಿ ಮೂರನೇ ಅರ್ಧ ಶತಕ. ಸತತವಾಗಿ ಸೋತ ನಂತರ ಪಾಕ್ ಈ ಪಂದ್ಯದಲ್ಲಿ ನಾಲ್ಕು ಬದಲಾವಣೆಗಳನ್ನು ಮಾಡಿತ್ತು.

ಸ್ಕೋರುಗಳು:

ಮೊದಲ ಇನಿಂಗ್ಸ್‌: ಪಾಕಿಸ್ತಾನ: 90 ಓವರುಗಳಲ್ಲಿ 5 ವಿಕೆಟ್‌ಗೆ 259 (ಸಯೀಮ್ ಅಯೂಬ್ 77, ಕಮ್ರಾನ್ ಗುಲಾಂ 118, ಮೊಹಮ್ಮದ್ ರಿಜ್ವಾನ್ ಔಟಾಗದೇ 37; ಜಾಕ್ ಲೀಚ್‌ 92ಕ್ಕೆ2).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.