ಅಹಮದಾಬಾದ್: ಆರಂಭಿಕ ಬ್ಯಾಟರ್ ಶುಭಮನ್ ಗಿಲ್(ಅಜೇಯ 103) ಶತಕ ಸಿಡಿಸಿದ್ದು, ಇಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದ ಟೀ ವಿರಾಮಕ್ಕೆ ಭಾರತ ತಂಡ ಮೊದಲ ಇನಿಂಗ್ಸ್‌ನಲ್ಲಿ 2 ವಿಕೆಟ್ ನಷ್ಟಕ್ಕೆ 188 ಗಳಿಸಿತ್ತು. ಭಾರತ ಈಗಲೂ 292 ರನ್‌ಗಳ ಹಿನ್ನಡೆಯಲ್ಲಿದೆ.
ಬ್ಯಾಟಿಂಗ್ ಮುಂದುವರಿಸಿರುವ ಶುಭಮನ್ ಗಿಲ್ ಮತ್ತು 42 ರನ್ ಗಳಿಸಿ ನಿರ್ಗಮಿಸಿರುವ ಚೇತೇಶ್ವರ್ ಪೂಜಾರ 113 ರನ್ ಜೊತೆಯಾಟ ನೀಡುವ ಮೂಲಕ ತಂಡಕ್ಕೆ ನೆರವಾದರು.
ಇದಕ್ಕೂ ಮುನ್ನ, 21ನೇ ಓವರ್‌ನ ಕೊನೆಯ ಎಸೆತದಲ್ಲಿ ಔಟಾದ ನಾಯಕ ರೋಹಿತ್ ಶರ್ಮಾ(35), ಗಿಲ್ ಜೊತೆಗೂಡಿ 74 ರನ್ ಜೊತೆಯಾಟ ನೀಡಿದ್ದರು.
ಮೊದಲ ಇನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ 480 ರನ್ ಗಳಿಸಿದೆ.
ಸಂಕ್ಷಿಪ್ತ ಸ್ಕೋರ್:
ಆಸ್ಟ್ರೇಲಿಯಾ: ಮೊದಲ ಇನಿಂಗ್ಸ್: 480 ರನ್
ಭಾರತ: ಮೂರನೇ ದಿನದಾಟದ ಟೀ ವಿರಾಮಕ್ಕೆ ಮೊದಲ ಇನಿಂಗ್ಸ್: 188/2
ಶುಭಮನ್ ಗಿಲ್: ಅಜೇಯ 103 ರನ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.