ಸಿಡ್ನಿ: ಈ ಬಾರಿಯ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ 'ಸೂಪರ್ 12' ಹಂತದ ಮೊದಲ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ನ್ಯೂಜಿಲೆಂಡ್ ತಂಡ 89 ರನ್ ಅಂತರದ ಸುಲಭ ಜಯ ಸಾಧಿಸಿತು. ಈ ಪಂದ್ಯದಲ್ಲಿ ಅಮೋಘ ಫೀಲ್ಡಿಂಗ್ ಮಾಡುವ ಮೂಲಕ ನ್ಯೂಜಿಲೆಂಡ್‌ನ ಗ್ಲೇನ್ ಫಿಲಿಪ್ಸ್ ಗಮನ ಸೆಳೆದರು.
ಶನಿವಾರ (ಅಕ್ಟೋಬರ್ 22ರಂದು ) ನಡೆದ ಪಂದ್ಯದಲ್ಲಿಮೊದಲು ಬ್ಯಾಟಿಂಗ್ ಮಾಡಿದನ್ಯೂಜಿಲೆಂಡ್ ನಿಗದಿತ 20 ಓವರ್‌ಗಳಲ್ಲಿ 200 ರನ್ ಕಲೆ ಹಾಕಿತು. ಈ ಕಠಿಣಗುರಿ ಬೆನ್ನತ್ತಿದ ಆಸ್ಟ್ರೇಲಿಯಾ 17 ಓವರ್‌ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 111 ರನ್ ಗಳಿಸಿ ಸೋಲು ಒಪ್ಪಿಕೊಂಡಿತು.
ಫಿಲಿಪ್ಸ್ 'ಸೂಪರ್‌ಮ್ಯಾನ್ ಕ್ಯಾಚ್'
ಸವಾಲಿನ ಮೊತ್ತ ಬೆನ್ನತ್ತಿದ ಆಸ್ಟ್ರೇಲಿಯಾ ತಂಡ ಕೇವಲ 34 ರನ್ ಗಳಿಸುವಷ್ಟರಲ್ಲೇ ಪ್ರಮುಖ ಮೂರು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಗ್ಲೇನ್ ಮ್ಯಾಕ್ಸ್‌ವೆಲ್‌ಗೆ (28 ರನ್) ಜೊತೆಯಾದ ಮಾರ್ಕಸ್ ಸ್ಟೋಯಿನಸ್ ರಕ್ಷಣಾತ್ಮಕ ಆಟಕ್ಕೆ ಮುಂದಾದರು.
ಮಿಚೇಲ್ ಸ್ಯಾಂಟ್ನರ್ ಎಸೆದ ಇನಿಂಗ್ಸ್‌ನ 9ನೇ ಓವರ್‌ನ ಎರಡನೇ ಎಸೆತವನ್ನುಬಲವಾಗಿ ಬಾರಿಸುವ ಪ್ರಯತ್ನ ಮಾಡಿದಸ್ಟೋಯಿನಸ್, ಚೆಂಡನ್ನು ಕವರ್ಸ್‌ನತ್ತ ಡ್ರೈವ್ ಮಾಡಿದರು. ಡೀಪ್ ಪಾಯಿಂಟ್‌ನಲ್ಲಿದ್ದ ಗ್ಲೇನ್ ಫಿಲಿಪ್ಸ್ ಬಲಕ್ಕೆ ಓಡಿ ಬಂದು ಜಿಗಿದು ಚೆಂಡನ್ನು ಹಿಡಿತಕ್ಕೆ ಪಡೆದರು.
ಇದರಿಂದಾಗಿ ಸ್ಟೋಯಿನಸ್ ಅವರು 14 ಎಸೆತಗಳಲ್ಲಿ ಕೇವಲ 7 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು.
ಫಿಲಿಪ್ಸ್ ಅವರು,ಗಾಳಿಯಲ್ಲಿ ಹಾರುತ್ತಾ ಚೆಂಡನ್ನು ಹಿಡಿದ ರೀತಿ ಅಮೋಘವಾಗಿತ್ತು. ಫಿಲಿಪ್ಸ್ ಫಿಲ್ಡಿಂಗ್ ಕಂಡು ಬೆರಗಾಗಿರುವ ನೆಟ್ಟಿಗರು 'ಸೂಪರ್‌ಮ್ಯಾನ್‌ಫಿಲಿಪ್ಸ್' ಎಂದು ಕೊಂಡಾಡಿದ್ದಾರೆ. ಇದು ಖಂಡಿತವಾಗಿಯೂ ಈ ಬಾರಿಯ ವಿಶ್ವಕಪ್‌ನ ಶ್ರೇಷ್ಠ ಕ್ಯಾಚ್ ಎಂದು ಮತ್ತು ಸಾರ್ವಕಾಲಿಕ ಅತ್ಯುತ್ತಮ ಕ್ಯಾಚ್ ಎಂದುಕೆಲವರು ಕಮೆಂಟ್ ಮಾಡಿದ್ದಾರೆ.
ಮತ್ತೆ ಕೆಲವರು ಇದನ್ನು ನಂಬಲು ಸಾಧ್ಯವೇ ಇಲ್ಲ. ಫಿಲಿಪ್ಸ್ ಅಸಮಾನ್ಯ ಫೀಲ್ಡರ್ ಎಂದು ಬರೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.