ಕೋವಿಡ್–19 ಭೀತಿಯಿಂದಾಗಿ ಲಾಕ್‌ಡೌನ್ ಜಾರಿಯಲ್ಲಿರುವುದರಿಂದ ಜನರು ಮನೆಯಲ್ಲಿಯೇ ಇರಬೇಕಾಗಿದೆ. ಸದಾ ಮನೆಯಿಂದ ಹೊರಗಿದ್ದು ಅಭ್ಯಾಸವಿದ್ದ ನಮಗೆ ಈಗ ಮನೆಯಲ್ಲಿಯೇ ಉಳಿಯಬೇಕು ಎನ್ನುವುದು ದೊಡ್ಡ ತಲೆನೋವು. ಹಾಗಾಗಿ ನಮ್ಮನ್ನು ರಂಜಿಸಲು ಗೂಗಲ್ ತನ್ನ ಡೂಡಲ್‌ನಲ್ಲಿ ಅನಿಮೇಷನ್ಕ್ರಿಕೆಟ್ ಗೇಮ್ ಸೃಜಿಸಿದೆ.
Google ಪದದ ಮೊದಲ ಅಕ್ಷರ G ಅನ್ನು ಬ್ಯಾಟ್ಸ್‌ಮನ್ ರೀತಿ ಮತ್ತು e ಅಕ್ಷರವನ್ನು ಬೌಲರ್ ಎಂಬಂತೆ ವಿನ್ಯಾಸಗೊಳಿಸಲಾಗಿದೆ. ಈ ಡೂಡಲ್ ಮೇಲೆ ಮೌಸ್‌ನ ಕರ್ಸರ್ ಮೂವ್ ಮಾಡಿದರೆ, ‘ಜನಪ್ರಿಯ ಗೂಗಲ್ ಡೂಡಲ್ಸ್ ಕ್ರಿಕೆಟ್‌ನೊಂದಿಗೆ ಮನೆಯಲ್ಲಿಯೇ ಉಳಿಯಿರಿ ಮತ್ತು ಆಟವಾಡಿರಿ’ ಎಂಬ ಸಾಲು ಕಾಣುತ್ತದೆ.
ಡೂಡಲ್ ಮೇಲೆ ಕ್ಲಿಕ್ಕಿಸಿದರೆ ನೀವು ನೇರವಾಗಿ ಕ್ರೀಡಾಂಗಣ ತಲುಪಿತ್ತೀರಿ. ಬಳಿಕ ನೀವು ಆಟವಾಡಬಹುದು. ಆಟಗಾರರು ಸಜ್ಜಾಗಿರುತ್ತಾರೆ. ಬೌಲರ್ ತಾನಾಗಿಯೇ ಬೌಲಿಂಗ್ ಮಾಡಬಲ್ಲ. ಆದರೆ, ಬ್ಯಾಟ್ಸ್‌ಮನ್ ರನ್ ಗಳಿಸಲು ನಿಮ್ಮ ಸಹಾಯ ಬೇಕೇಬೇಕು. ಹಾಗಾಗಿ ಆಟವಾಡಿ ಆನಂದಿಸಿ.
ಒಂದು ತಿಂಗಳಿಗೂ ಹೆಚ್ಚು ಸಮಯದಿಂದ ಮನೆಯಲ್ಲೇ ಇರುವ ಜನರಿಗೆ ಈ ರೀತಿ ಮನರಂಜನೆ ನೀಡುವುದು ಮಾತ್ರವೇ ಡೂಡಲ್‌ನ ಉದ್ದೇಶವಲ್ಲ. 2017ರ ಚಾಂಪಿಯನ್ಸ್ ಟ್ರೋಫಿಕ್ರಿಕೆಟ್ ಟೂರ್ನಿಯನ್ನುನೆನಪಿಸುವುದೂ ಅದರ ಆಶಯ. ಈ ಆಟವನ್ನು ನಿಮ್ಮ ಸ್ನೇಹಿತರೊಂದಿಗೂ ಹಂಚಿಕೊಳ್ಳಬಹುದು.
2017 ರ ಚಾಂಪಿಯನ್ಸ್ ಟ್ರೋಫಿಟೂರ್ನಿಯಲ್ಲಿ ಭಾರತ ಮತ್ತುಪಾಕಿಸ್ತಾನ ತಂಡಗಳು ಫೈನಲ್ ತಲುಪಿದ್ದವು. ಭಾರತವನ್ನು 180 ರನ್ ಅಂತರದಿಂದ ಮಣಿಸಿದ್ದ ಪಾಕ್, ಚಾಂಪಿಯನ್ ಆಗಿತ್ತು.
ಟಾಸ್ ಗೆದ್ದಿದ್ದ ಭಾರತ ಮೊದಲು ಬ್ಯಾಟಿಂಗ್ ಮಾಡುವ ಅವಕಾಶವನ್ನುಪಾಕಿಸ್ತಾನಕ್ಕೆ ನೀಡಿತ್ತು. ಪಾಕ್ ತಂಡ ನಿಗದಿತ 50 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 338 ರನ್ ಗಳಿಸಿತ್ತು. ಇದಕ್ಕುತ್ತರವಾಗಿ ಭಾರತ ಕೇವಲ 158 ರನ್ ಗಳಿಸಿ ಆಲೌಟ್ ಆಗಿತ್ತು. ಆ ಮೂಲಕ ಐಸಿಸಿ ಟೂರ್ನಿಗಳಲ್ಲಿ ಟೀಂ ಇಂಡಿಯಾ ಪಾಕ್ ಎದುರು ಮೊದಲ ಸೋಲು ಕಂಡಂತಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.