ADVERTISEMENT

GT vs DC Match Highlights: ಮುಕೇಶ್, ಇಶಾಂತ್ ವೇಗಕ್ಕೆ ಗುಜರಾತ್ ಪಲ್ಟಿ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಏಪ್ರಿಲ್ 2024, 4:25 IST
Last Updated 18 ಏಪ್ರಿಲ್ 2024, 4:25 IST
<div class="paragraphs"><p>ಡೆಲ್ಲಿ ಕ್ಯಾಪಿಟಲ್ಸ್ ತಂಡ</p></div>

ಡೆಲ್ಲಿ ಕ್ಯಾಪಿಟಲ್ಸ್ ತಂಡ

   

ಅಹಮದಾಬಾದ್: ವೇಗದ ಜೋಡಿ ಮುಕೇಶ್ ಕುಮಾರ್ ಮತ್ತು ಇಶಾಂತ್ ಶರ್ಮಾ ಅವರ ಅಮೋಘ ಬೌಲಿಂಗ್ ಬಲದಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಬುಧವಾರ ನಡೆದ ಐಪಿಎಲ್ ಪಂದ್ಯದಲ್ಲಿ ಅಮೋಘ ಜಯ ಸಾಧಿಸಿತು. 

ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ತಂಡವು 6 ವಿಕೆಟ್‌ಗಳಿಂದ ಆತಿಥೇಯ ಗುಜರಾತ್ ವಿರುದ್ಧ ಜಯಿಸಿತು. 

ADVERTISEMENT

ಈ ಪಂದ್ಯದ ಹೈಲೈಟ್ಸ್...

  • ಗುಜರಾತ್ ತಂಡವು 17.3 ಓವರ್‌ಗಳಲ್ಲಿ 89 ರನ್‌ಗಳ ಅಲ್ಪಮೊತ್ತಕ್ಕೆ ಆಲೌಟ್ ಆಯಿತು. 

  • ದೆಹಲಿಯ ವೇಗಿಗಳಾದ ಮುಕೇಶ್ ಮತ್ತು ಇಶಾಂತ್ ಅವರ ಮಾರಕ ದಾಳಿ ನಡೆಸಿದರು. ಮುಕೇಶ್‌ 3 ಇಶಾಂತ್‌ 2 ವಿಕೆಟ್‌ ಪಡೆದರು.

  • ಈ ಬಾರಿಯ ಐಪಿಎಲ್‌ನಲ್ಲಿ ದಾಖಲಾದ ಕನಿಷ್ಠ ಮೊತ್ತ ಇದು.( 17.3 ಓವರ್‌ಗಳಲ್ಲಿ 89 ರನ್‌)

  • ಡೆಲ್ಲಿ ತಂಡವು 8.5 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 92 ರನ್‌ ಗಳಿಸಿ ಜಯ ಸಾಧಿಸಿತು.

  • ಗುಜರಾತ್ ತಂಡದ ಎಂಟನೇ ಕ್ರಮಾಂಕದ ಬ್ಯಾಟರ್ ರಶೀದ್ ಖಾನ್ 24 ಎಸೆತಗಳಲ್ಲಿ 31 ರನ್‌ ಗಳಿಸಿದರು. ವೈಯಕ್ತಿಕ ಗರಿಷ್ಠ ಸ್ಕೋರ್ ಗಳಿಸಿದ ಆಟಗಾರನಾದರು.

  • ಇಡೀ ಇನಿಂಗ್ಸ್‌ನಲ್ಲಿ ದಾಖಲಾದ ಏಕೈಕ ಸಿಕ್ಸರ್‌ ಕೂಡ ರಶೀದ್ ಕಾಣಿಕೆ. ಈ ಇನಿಂಗ್ಸ್‌ನಲ್ಲಿ ಒಟ್ಟು ಎಂಟು ಬೌಂಡರಿಗಳು ಮಾತ್ರ ದಾಖಲಾದವು. 

  • ರಶೀದ್, ಸಾಯಿ ಸುದರ್ಶನ್ ಮತ್ತು ರಾಹುಲ್ ತೆವಾಟಿಯಾ ಎರಡಂಕಿ ಮುಟ್ಟಿದವರು. ಉಳಿದ ಬ್ಯಾಟರ್‌ಗಳೆಲ್ಲರೂ ವೈಫಲ್ಯ ಅನುಭವಿಸಿದರು. 

  • ಟ್ರಿಸ್ಟನ್ ಸ್ಟಬ್ಸ್‌ ಒಂದೇ ಓವರ್‌ನಲ್ಲಿ ಎರಡು ವಿಕೆಟ್ ಕಬಳಿಸಿದರು. 

  • ಡೆಲ್ಲಿ ತಂಡದ ನಾಯಕ, ವಿಕೆಟ್‌ ಕೀಪರ್ ರಿಷಭ್ ಪಂತ್ ಎರಡು ಕಠಿಣ ಕ್ಯಾಚ್‌ ಪಡೆದರು. ಹಾಗೂ ಎರಡು ಚುರುಕಾದ ಸ್ಟಂಪಿಂಗ್ ಕೂಡ ಮಾಡಿದರು.

  • 7ನೇ ಪಂದ್ಯ ಆಡಿದ ಡೆಲ್ಲಿ ತಂಡವು ಮೂರನೇ ಜಯ ಸಾಧಿಸಿತು. ಅಂಕಪಟ್ಟಿಯಲ್ಲಿ ಆರನೇ ಸ್ಥಾನಕ್ಕೇರಿತು. ಗಿಲ್ ಬಳಗಕ್ಕೆ ಇದು ನಾಲ್ಕನೇ ಸೋಲು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.