ADVERTISEMENT

ಸಿಂಗಪುರಕ್ಕೆ ವಿಶ್ವ ಚೆಸ್ ಆತಿಥ್ಯ; ಭಾರತಕ್ಕೆ ನಿರಾಸೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2024, 22:40 IST
Last Updated 1 ಜುಲೈ 2024, 22:40 IST
ಡಿ. ಗುಕೇಶ್
ಡಿ. ಗುಕೇಶ್   

ನವದೆಹಲಿ: ವಿಶ್ವ ಚೆಸ್ ಚಾಂಪಿಯನ್‌ಷಿಪ್ ಆಯೋಜನೆ ಆತಿಥ್ಯದ ಅವಕಾಶವನ್ನು ಸಿಂಗಪುರ ಗಿಟ್ಟಿಸಿಕೊಂಡಿತು.

ಭಾರತದ ಡಿ. ಗುಕೇಶ್ ಮತ್ತು ಚೀನಾದ ಆಟಗಾರ ಹಾಗೂ ಹಾಲಿ ಚಾಂಪಿಯನ್ ಡಿಂಗ್ ಲಿರೆನ್ ಅವರ ನಡುವೆ ಈ ವಿಶ್ವ ಚೆಸ್ ಚಾಂಪಿಯನ್‌ಷಿಪ್ ನಡೆಯಲಿದೆ. ಅದಕ್ಕಾಗಿಯೇ  ದೆಹಲಿ ಅಥವಾ ಚೆನ್ನೈನಲ್ಲಿ ಪಂದ್ಯ ಆಯೋಜಿಸಲು ಭಾರತವು ಬಿಡ್ ಸಲ್ಲಿಸಿತ್ತು. ಆದರೆ ಪ್ರಯತ್ನಗಳು ಕೈಗೂಡಲಿಲ್ಲ. ಇದರೊಂದಿಗೆ ತವರಿನಲ್ಲಿಯೇ ಪಂದ್ಯ ಆಡುವ ಅವಕಾಶವು ಗುಕೇಶ್‌ಗೆ ಸಿಗಲಿಲ್ಲ.  

ತಮಿಳುನಾಡು ಚೆಸ್ ಸಂಸ್ಥೆ ಮತ್ತು ಅಖಿಲ ಭಾರತ ಚೆಸ್ ಫೆಡರೇಷನ್ (ಎಐಸಿಎಫ್‌)  ಫಿಡೆಗೆ ಪ್ರತ್ಯೇಕ ಬಿಡ್ ಸಲ್ಲಿಸಿದ್ದವು.

ADVERTISEMENT

‘ಎಲ್ಲ ಬಿಡ್‌ಗಳನ್ನೂ ಅವಲೋಕಿಸಿ ಮತ್ತು ಸಮಗ್ರವಾಗಿ ಪರೀಕ್ಷಿಸಲಾಯಿತು. ಆ  ಸ್ಥಳಗಳ ಮೂಲಭೂತ ಸೌಲಭ್ಯಗಳು, ಕಾರ್ಯಕ್ರಮಗಳು ಮತ್ತು ಅವಕಾಶಗಳನ್ನು ಅನುಲಕ್ಷಿಸಿ ಸಿಂಗಪುರಕ್ಕೆ ಆತಿಥ್ಯದ ಅವಕಾಶ ನೀಡಲಾಗಿದೆ’ ಎಂದು ಫಿಡೆ ಪ್ರಕಟಣೆಯಲ್ಲಿ ತಿಳಿಸಿದೆ.  

17 ವರ್ಷದ ಗುಕೇಶ್ ಅವರು ಕಳೆದ ಏಪ್ರಿಲ್‌ನಲ್ಲಿ ಕ್ಯಾಂಡಿಡೇಟ್ಸ್‌ ಚೆಸ್ ಟೂರ್ನಿಯಲ್ಲಿ ಜಯಿಸಿ ಇತಿಹಾಸ ಬರೆದಿದ್ದರು. ಆ ಮೂಲಕ ಈ ಸಾಧನೆ ಮಾಡಿದ ಅತ್ಯಂತ ಕಿರಿಯ ವಯಸ್ಸಿನ ಆಟಗಾರನೆಂಬ ಹೆಗ್ಗಳಿಕೆ ಅವರದ್ದಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.