ಬೆಂಗಳೂರು: ಮನೋಜ್ ಭಾಂಡಗೆ ಅವರ ಬೌಲಿಂಗ್ ದಾಳಿ (15 ಕ್ಕೆ4) ಮತ್ತು ಮನೀಷ್ ಪಾಂಡೆ ಅವರ ಅಜೇಯ ಅರ್ಧಶತಕದ (ಅಜೇಯ 52) ನೆರವಿನಿಂದ ಕರ್ನಾಟಕ ತಂಡ, ಶುಕ್ರವಾರ ಇಲ್ಲಿ ನಡೆದ ಅಭ್ಯಾಸ ಪಂದ್ಯದಲ್ಲಿ ಏಷ್ಯನ್ ಕ್ರೀಡಾಕೂಟಕ್ಕೆ ತೆರಳಲಿರುವ ಭಾರತ ಟಿ–20 ಕ್ರಿಕೆಟ್ ತಂಡದ ವಿರುದ್ಧ ನಾಲ್ಕು ವಿಕೆಟ್‌ಗಳ ಜಯಪಡೆಯಿತು.
ಮಧ್ಯಮ ವೇಗಿ ಭಾಂಡಗೆ 4 ಓವರುಗಳಲ್ಲಿ 15 ರನ್ನಿತ್ತು 4 ವಿಕೆಟ್‌ಗಳನ್ನು ಪಡೆದರು. ವಾಸುಕಿ ಕೌಶಿಕ್ ಮತ್ತು ಶುಭಾಂಗ್ ಹೆಗ್ಡೆ ಅವರು ತಲಾ ಮೂರು ವಿಕೆಟ್ ಪಡೆದು ಇಂಡಿಯಾ ಇಲೆವೆನ್ ತಂಡವನ್ನು 20 ಓವರುಗಳಲ್ಲಿ 133 ರನ್‌ಗಳಿಗೆ ಉರುಳಿಸಿದರು.
ಇದಕ್ಕೆ ಉತ್ತರವಾಗಿ ಕರ್ನಾಟಕ ತಂಡ ಐದು ಎಸೆತಗಳು ಉಳಿದಿರುವಂತೆ ಆರು ವಿಕೆಟ್ ನಷ್ಟದಲ್ಲಿ ಗೆಲುವು ಸಾಧಿಸಿತು. ಪಾಂಡೆ 40 ಎಸೆತಗಳಲ್ಲಿ ಔಟಾಗದೇ 52 ರನ್ ಹೊಡೆದರು. ಆರಂಭ ಆಟಗಾರ ಎಲ್.ಆರ್.ಚೇತನ್ 29 ರನ್ ಗಳಿಸಿದರು.
ಭಾರತ ಇಲೆವೆನ್ ತಂಡದ ಪರ ಪ್ರಭಸಿಮ್ರನ್ ಸಿಂಗ್ 31 ಎಸೆತಗಳಲ್ಲಿ 49 ರನ್ ಗಳಿಸಿದರೆ, ಯಶಸ್ವಿ ಜೈಸ್ವಾಲ್ 17 ಎಸೆತಗಳಲ್ಲಿ 31 ರನ್ ಸಿಡಿಸಿದರು. ಆದರೆ ಯುವ ಆಟಗಾರರಾದ ರಾಹುಲ್ ತ್ರಿಪಾಠಿ (6), ಜೀತೇಶ್ ಶರ್ಮಾ (2), ರಿಂಕು ಸಿಂಗ್ (5), ಶಿವಂ ದುಬೆ (0) ಅವರು ವಿಫಲರಾದರು.
ಸಂಕ್ಷಿಪ್ತ ಸ್ಕೋರುಗಳು: ಭಾರತ: 20 ಓವರುಗಳಲ್ಲಿ 133 (ಪ್ರಭಸಿಮ್ರನ್ ಸಿಂಗ್ 49, ಯಶಸ್ವಿ ಜೈಸ್ವಾಲ್ 31; ಮನೋಜ್ ಭಾಂಡಗೆ 15ಕ್ಕೆ4, ಶುಭಾಂಗ್ ಹೆಗ್ಡೆ 17ಕ್ಕೆ3); ಕರ್ನಾಟಕ: 19.1 ಓವರುಗಳಲ್ಲಿ 4 ವಿಕೆಟ್‌ಗೆ 136 (ಮನೀಷ್ ಪಾಂಡೆ ಔಟಾಗದೇ 52, ಎಲ್.ಆರ್.ಚೇತನ್ 29). ಕರ್ನಾಟಕ ತಂಡಕ್ಕೆ 6 ವಿಕೆಟ್ ಜಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.