ADVERTISEMENT

ಹರಭಜನ್‌ ಇಸ್ಲಾಂ ಸೇರಲು ಹತ್ತಿರವಾಗಿದ್ದರು: ಇಂಜಮಾಮ್ ಹೇಳಿಕೆಗೆ ಟರ್ಬನೇಟರ್ ಕಿಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ನವೆಂಬರ್ 2023, 4:24 IST
Last Updated 15 ನವೆಂಬರ್ 2023, 4:24 IST
ಹರಭಜನ್‌ ಸಿಂಗ್‌
ಹರಭಜನ್‌ ಸಿಂಗ್‌   

ಇಸ್ಲಾಮಾಬಾದ್‌: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಇಂಜಮಾಮ್ ಉಲ್‌ ಹಕ್‌ ಅವರು ಹರಭಜನ್‌ ಸಿಂಗ್‌ (ಟರ್ಬನೇಟರ್) ಬಗ್ಗೆ ನೀಡಿರುವ ಹೇಳಿಕೆ ಕುರಿತು ಹರಭಜನ್‌ ಸಿಂಗ್‌ ಅವರೇ ಸ್ಪಷ್ಟನೆ ನೀಡಿದ್ದಾರೆ. 

ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಹರಭಜನ್‌ ಸಿಂಗ್‌ ಅವರು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಇಂಜಮಾಮ್ ಉಲ್‌ ಹಕ್‌ ಮಾತಿಗೆ ಸ್ಪಷ್ಟನೆ ನೀಡಿದ್ದು, ಇಂತಹ ಸುಳ್ಳು ಸುದ್ದಿಯನ್ನು ನಂಬಬೇಡಿ ಎಂದು ಹೇಳಿದ್ದಾರೆ.

ಇಂಜಮಾಮ್ ಉಲ್‌ ಹಕ್‌ ಅವರು ಇಸ್ಲಾಂ ಧರ್ಮ ಸೇರಲು ಉತ್ಸುಕರಾಗಿದ್ದರು ಎಂದು ಹೇಳಿದ್ದಾರೆ. ಹರಭಜನ್‌ ಅವರು ಮೌಲಾನಾ ತಾರಿಕ್ ಜಮೀಲ್ ಅವರ ಮಾತುಗಳಿಂದ ಪ್ರಭಾವಿತರಾಗಿದ್ದರು ಮತ್ತು ಅವರು ಇಸ್ಲಾಂ ಧರ್ಮಕ್ಕೆ ಪರಿವರ್ತನೆಯಾಗಲು ಹತ್ತಿರವಾಗಿದ್ದರು ಎಂದು ಹೇಳಿದ್ದರು. ಮುಂದುವರೆದು ಕೆಲವು ಮುಸ್ಲಿಂ ಭಾರತೀಯ ಆಟಗಾರರು ಪಾಕಿಸ್ತಾನ ಕ್ರಿಕೆಟ್ ತಂಡದೊಂದಿಗೆ ನಮಾಜ್‌ ಮಾಡುತ್ತಿದ್ದರು ಎಂದು ಇಂಜಮಾಮ್ ಉಲ್‌ ಹಕ್‌ ಟಿ.ವಿ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

ADVERTISEMENT

ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. 

ಇಂಜಮಾಮ್ ಉಲ್‌ ಹಕ್‌ ಮಾತಿಗೆ ಕಿಡಿಕಾರಿರುವ ಹರಭಜನ್‌ ಸಿಂಗ್‌ ಅವರು ಸಾಮಾಜಿಕ ಜಾಲತಾಣದಲ್ಲಿ ಎಕ್ಸ್‌ ಮಾಡಿದ್ದು ಇಂತಹ ಸುಳ್ಳು ಸುದ್ದಿಯನ್ನು ನಂಬಬೇಡಿ ಎಂದು ಹೇಳಿದ್ದಾರೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.