ADVERTISEMENT

ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ ಪಡೆದ ಹರ್ಮನ್‌ಪ್ರೀತ್‌

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2024, 16:11 IST
Last Updated 21 ಅಕ್ಟೋಬರ್ 2024, 16:11 IST
   

ದುಬೈ: ಮಹಿಳಾ ಟಿ20 ವಿಶ್ವಕಪ್‌ 2024 ತಂಡವನ್ನು ಐಸಿಸಿ ಸೋಮವಾರ ಪ್ರಕಟಿಸಿದ್ದು, ಇದರಲ್ಲಿ ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್‌ ಸ್ಥಾನ ಪಡೆದಿದ್ದಾರೆ. ಫೈನಲ್‌ನಲ್ಲಿ ಆಡಿದ ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡದ ಆಟಗಾರ್ತಿಯರು ಹೆಚ್ಚಿನ ಸ್ಥಾನಗಳನ್ನು ಪಡೆದಿದ್ದಾರೆ.

ನ್ಯೂಜಿಲೆಂಡ್ ಭಾನುವಾರ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿ ಮೊದಲ ಬಾರಿ ಚಾಂಪಿಯನ್ ಆಗಿತ್ತು. ಸೆಮಿಫೈನಲ್ ತಲು‍ಪಲು ವಿಫಲವಾಗಿದ್ದ ಭಾರತ ತಂಡದಲ್ಲಿ ಹರ್ಮನ್‌ಪ್ರೀತ್ ಕೌರ್ ಮಾತ್ರ ಸ್ಥಿರ ಪ್ರದರ್ಶನ ನೀಡಿದ್ದು, ಐಸಿಸಿ ಪ್ರಕಟಿಸಿದ ತಂಡದಲ್ಲಿ ಸ್ಥಾನ ಪಡೆದ ಭಾರತದ ಏಕೈಕ ಆಟಗಾರ್ತಿ ಎನಿಸಿದ್ದಾರೆ. ಅವರ ಸ್ಟ್ರೈಕ್‌ರೇಟ್‌ (133.92) ಟೂರ್ನಿಯ ಐದನೇ ಉತ್ತಮ ಎನಿಸಿತ್ತು.

ತಂಡ ಹೀಗಿದೆ:

ADVERTISEMENT

ಲಾರಾ ವೋಲ್ವಾರ್ಟ್‌ (ದಕ್ಷಿಣ ಆಫ್ರಿಕಾ, ನಾಯಕಿ), ತಾಝ್ಮಿನ್ ಬ್ರಿಟ್ಸ್‌ (ದಕ್ಷಿಣ ಆಫ್ರಿಕಾ), ಡ್ಯಾನ್ನಿ ವ್ಯಾಟ್‌ ಹಾಜ್ (ಇಂಗ್ಲೆಂಡ್‌), ಅಮೇಲಿಯಾ ಕೆರ್ (ನ್ಯೂಜಿಲೆಂಡ್‌), ಹರ್ಮನ್‌ಪ್ರೀತ್ ಕೌರ್‌ (ಭಾರತ), ಡಿಯೆಂಡ್ರಾ ಡಾಟಿನ್ (ವೆಸ್ಟ್‌ ಇಂಡೀಸ್‌), ನಿಜರ್ ಸುಲ್ತಾನಾ ಜೋಟಿ (ಬಾಂಗ್ಲಾದೇಶ, ವಿಕೆಟ್‌ ಕೀಪರ್), ಆ್ಯಫಿ ಫ್ಲೆಚರ್‌ (ವೆಸ್ಟ್‌ ಇಂಡೀಸ್‌), ರೋಸ್ಮರಿ ಮೇರ್‌ (ನ್ಯೂಜಿಲೆಂಡ್‌), ನೊಬ್‌ಕುಲುಲೆಕೊ ಮ್ಲಾಬಾ (ದಕ್ಷಿಣ ಆಫ್ರಿಕಾ), ಮೇಗನ್ ಶೂಟ್‌ (ಆಸ್ಟ್ರೇಲಿಯಾ). 12ನೇ ಆಟಗಾರ್ತಿ: ಎಡೆನ್ ಕಾರ್ಸನ್ (ನ್ಯೂಜಿಲೆಂಡ್‌).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.