ADVERTISEMENT

ಕ್ರಿಕೆಟ್: ಹರ್ಮನ್‌ ಬಳಗಕ್ಕೆ ಇಂಗ್ಲೆಂಡ್ ‘ಟೆಸ್ಟ್’

ಪಿಟಿಐ
Published 13 ಡಿಸೆಂಬರ್ 2023, 12:35 IST
Last Updated 13 ಡಿಸೆಂಬರ್ 2023, 12:35 IST
<div class="paragraphs"><p>ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್, ಸ್ಮೃತಿ ಮಂದಾನ ಮತ್ತು ಜೆಮಿಮಾ ರಾಡ್ರಿಗಸ್&nbsp; –ಪಿಟಿಐ ಚಿತ್ರ</p></div>

ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್, ಸ್ಮೃತಿ ಮಂದಾನ ಮತ್ತು ಜೆಮಿಮಾ ರಾಡ್ರಿಗಸ್  –ಪಿಟಿಐ ಚಿತ್ರ

   

ನವಿ ಮುಂಬೈ: ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ತಂಡವು ಗುರುವಾರ ಆರಂಭವಾಗಲಿರುವ ಮಹಿಳಾ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.

ಡಿ.ವೈ. ಪಾಟೀಲ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಇಂಗ್ಲೆಂಡ್ ತಂಡಕ್ಕಾಗಿ ಭಾರತದ ಪ್ರವಾಸದಲ್ಲಿ ಆಯೋಜಿಸಲಾಗಿರುವ ಏಕೈಕ ಟೆಸ್ಟ್ ಇದಾಗಿದೆ. ಇಂಗ್ಲೆಂಡ್ ತಂಡಕ್ಕೆ ಇದು ನೂರನೇ ಟೆಸ್ಟ್ ಆಗಿದೆ.

ADVERTISEMENT

1986ರಿಂದ ಇಲ್ಲಿಯವರೆಗೆ  ಉಭಯ ತಂಡಗಳು 14 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಅದರಲ್ಲ ಭಾರತ ತಂಡವು ಒಂದು ಬಾರಿ ಮಾತ್ರ ಸೋತಿದೆ. ಎರಡು ಗೆದ್ದಿದೆ. 2021ರಲ್ಲಿ ಬ್ರಿಸ್ಟಲ್‌ನಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದ ಪಂದ್ಯವು ಡ್ರಾ ಆಗಿತ್ತು. ಆ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಸ್ಮತಿ ಮಂದಾನ 78 ರನ್‌ ಗಳಿಸಿದ್ದರು. ಶಫಾಲಿ ವರ್ಮಾ 63 ಎಸೆತಗಳಲ್ಲಿ 96 ರನ್ ಹೊಡೆದಿದ್ದರು. ಭಾರತ ತಂಡದ ಈ ಮುನ್ನಡೆಯ ದಾಖಲೆಯನ್ನು ಮುಂದುವರಿಸಿಕೊಂಡು ಹೋಗುವ ಸವಾಲು ಹರ್ಮನ್‌ಪ್ರೀತ್ ಮುಂದಿದೆ.

ಮಹಿಳೆಯರ ಕ್ರಿಕೆಟ್‌ನಲ್ಲಿ ಹೆಚ್ಚು ಟೆಸ್ಟ್ ಪಂದ್ಯಗಳು ನಡೆಯುತ್ತಿಲ್ಲ. ಆದರೆ ಈ ತಿಂಗಳು ಭಾರತ ತಂಡಕ್ಕೆ ಇಂಗ್ಲೆಂಡ್ ಎದುರು ಸೇರಿದಂತೆ ಎರಡು ಟೆಸ್ಟ್‌ಗಳು ಲಭಿಸಲಿವೆ.

ಇದೇ ತಿಂಗಳು 21 ರಿಂದ 24ರವರೆಗೆ ವಾಂಖೆಡೆ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧ ಒಂದು ಟೆಸ್ಟ್ ಪಂದ್ಯ ನಡೆಯಲಿದೆ.  ಟೆಸ್ಟ್ ಮಾದರಿಯಲ್ಲಿ ಸ್ಮೃತಿ, ನಾಯಕಿ ಹರ್ಮನ್, ಶಫಾಲಿ ಅವರು ಉತ್ತಮ ದಾಖಲೆ ಹೊಂದಿದ್ದಾರೆ. ಕರ್ನಾಟಕದ ಸ್ಪಿನ್ನರ್ ರಾಜೇಶ್ವರಿ ಗಾಯಕವಾಡ ಕೂಡ ಅನುಭವಿಯಾಗಿದ್ದಾರೆ. ಆದ್ದರಿಂದ ಇಂಗ್ಲೆಂಡ್ ವಿರುದ್ಧ ಮೇಲುಗೈ ಸಾಧಿಸುವ ವಿಶ್ವಾಸದಲ್ಲಿ ತಂಡವಿದೆ.

ಹೀಥರ್ ನೈಟ್ ನಾಯಕತ್ವದ ಪ್ರವಾಸಿ ತಂಡವು ಸಮತೋಲನವಾಗಿದೆ. ಟ್ಯಾಮಿ ಬೆಮೌಂಟ್‌ ಕಳೆದ ಜೂನ್‌ನಲ್ಲಿ ನಡೆದಿದ್ದ ಆಸ್ಟ್ರೇಲಿಯಾ ಎದುರಿನ ಪಂದ್ಯದಲ್ಲಿ ದ್ವಿಶತಕ ಗಳಿಸಿದ್ದರು. ಸೋಫಿಯಾ ಡಂಕ್ಲಿ, ಕೇಟ್ ಕ್ರಾಸ್, ಎಮಿ ಜೋನ್ಸ್‌ ಮತ್ತು ವೈಟ್ ಅವರು ಉತ್ತಮ ಲಯದಲ್ಲಿದ್ದು ಆತಿಥೇಯರಿಗೆ ಕಠಿಣ ಸವಾಲೊಡ್ಡಬಲ್ಲರು.

ತಂಡಗಳು

ಭಾರತ: ಹರ್ಮನ್‌ಪ್ರೀತ್ ಕೌರ್ (ನಾಯಕಿ) ಸ್ಮೃತಿ ಮಂದಾನ (ಉಪನಾಯಕಿ) ಜೆಮಿಮಾ ರಾಡ್ರಿಗಸ್ ಶಫಾಲಿ ವರ್ಮಾ ದೀಪ್ತಿ ಶರ್ಮಾ ಯಷ್ಟಿಕಾ ಭಾಟಿಯಾ ರಿಚಾ ಘೋಷ್ (ಇಬ್ಬರೂ ವಿಕೆಟ್‌ಕೀಪರ್) ಸ್ನೇಹಾ ರಾಣಾ ಶುಭಾ ಸತೀಶ್ ಹರ್ಲೀನ್ ಡಿಯೊಲ್ ಸೈಕಾ ಇಷಾಕಿ ರೇಣುಕಾ ಸಿಂಗ್ ತಿತಾಸ್ ಸಾಧು ಮೇಘನಾ ಸಿಂಗ್ ರಾಜೇಶ್ವರಿ ಗಾಯಕವಾಡ ಪೂಜಾ ವಸ್ತ್ರಕರ್.

ಇಂಗ್ಲೆಂಡ್: ಹೀಥರ್ ನೈಟ್ (ನಾಯಕಿ) ಎಮಾ ಲ್ಯಾಂಬ್ ನ್ಯಾಟ್ ಸೀವರ್ ಬ್ರಂಟ್ ಡ್ಯಾನೀಲೆ ವೈಟ್ ಟ್ಯಾಮಿ ಬೆಮಾಂಟ್ ಲಾರೆನ್ ಬೆಲ್ ಅಲೈಸ್ ಕ್ಯಾಪ್ಸಿ ಕೇಟ್ ಕ್ರಾಸ್ ಚಾರ್ಲೀ ಟೀನ್ ಸೋಫಿಯಾ ಡಂಕ್ಲಿ ಸೋಫಿ ಎಕ್ಸೆಲ್‌ಸ್ಟೋನ್ ಲಾರೆನ್ ಫೈಲರ್ ಬೆಸ್ ಹೀತ್ ಎಮಿ ಜೋನ್ಸ್ (ಇಬ್ಬರೂ ವಿಕೆಟ್‌ಕೀಪರ್). ಪಂದ್ಯ ಆರಂಭ: ಬೆಳಿಗ್ಗೆ 9.30

ಬಲಾಬಲ

ಪಂದ್ಯಗಳು: 14

ಭಾರತ ಜಯ: 2

ಇಂಗ್ಲೆಂಡ್ ಜಯ;1

ಡ್ರಾ: 11

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.