ADVERTISEMENT

ಟಿ20 ರ‍್ಯಾಂಕಿಂಗ್: ಸೂರ್ಯ ಸ್ಥಾನ ಅಬಾಧಿತ

​ಪ್ರಜಾವಾಣಿ ವಾರ್ತೆ
Published 16 ಮೇ 2024, 14:45 IST
Last Updated 16 ಮೇ 2024, 14:45 IST
ಸೂರ್ಯಕುಮಾರ್ ಯಾದವ್
ಪಿಟಿಐ ಚಿತ್ರ
ಸೂರ್ಯಕುಮಾರ್ ಯಾದವ್ ಪಿಟಿಐ ಚಿತ್ರ   

ದುಬೈ: ಹಾರ್ದಿಕ್ ಪಾಂಡ್ಯ, ಐಸಿಸಿ ಟಿ20 ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಏಳನೇ ಕ್ರಮಾಂಕದಲ್ಲಿದ್ದು, ಉನ್ನತ ಸ್ಥಾನದಲ್ಲಿರುವ ಭಾರತದ ಆಟಗಾರ ಎನಿಸಿದ್ದಾರೆ. ಬಾಂಗ್ಲಾದೇಶದ ಶಕೀಬ್ ಅವರ ಜೊತೆಗೆ ಈಗ ಶ್ರೀಲಂಕಾದ ಸ್ಪಿನ್ನರ್ ವನಿಂದು ಹಸರಂಗ ಜಂಟಿಯಾಗಿ ಅಗ್ರಸ್ಥಾನ ಹಂಚಿಕೊಂಡಿದ್ದಾರೆ. ಬ್ಯಾಟರ್‌ಗಳ ಪಟ್ಟಿಯಲ್ಲಿ ಸೂರ್ಯಕುಮಾರ್ ಯಾದವ್ ಅಗ್ರಸ್ಥಾನ ಮುಂದುವರಿದಿದೆ.

ಪಾಂಡ್ಯ 185 ಪಾಯಿಂಟ್ಸ್‌ ಹೊಂದಿದ್ದು, ಆಸ್ಟ್ರೇಲಿಯಾದ ಮಾರ್ಕಸ್‌ ಸ್ಟೊಯಿನಿಸ್‌ ಅವರಿಗಿಂತ ಒಂದು ಸ್ಥಾನ ಕೆಳಗಿದ್ದಾರೆ.

ಹಸರಂಗ ಮತ್ತು ಶಕೀಬ್ ತಲಾ 228 ಪಾಯಿಂಟ್ಸ್ ಸಂಗ್ರಹಿಸಿದ್ದಾರೆ. ಅಫ್ಗಾನಿಸ್ತಾನದ ಮೊಹಮ್ಮದ್ ನಬಿ (218), ಜಿಂಬಾಬ್ವೆಯ ಸಿಕಂದರ್‌ ರಝಾ (210) ನಂತರದ ಸ್ಥಾನಗಳಲ್ಲಿದ್ದಾರೆ. ರಝಾ ಎರಡು ಸ್ಥಾನ ಬಡ್ತಿ ಪಡೆದಿದ್ದಾರೆ. ದಕ್ಷಿಣ ಆಫ್ರಿಕಾದ ಏಡೆನ್ ಮರ್ಕರಂ (205) ಅವರು ಐದನೇ ಸ್ಥಾನದಲ್ಲಿದ್ದಾರೆ.

ADVERTISEMENT

ಸೂರ್ಯಗೆ ಅಗ್ರಸ್ಥಾನ:

ಬ್ಯಾಟರ್‌ಗಳ ಪಟ್ಟಿಯಲ್ಲಿ ಭಾರತದ ಸೂರ್ಯಕುಮಾರ್‌ ಯಾದವ್ (861 ಪಾಯಿಂಟ್ಸ್‌) ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಇಂಗ್ಲೆಂಡ್‌ನ ಫಿಲ್‌ ಸಾಲ್ಟ್‌ (802) ಅವರಿಗಿಂತ ಸಾಕಷ್ಟು ಹಿಂದೆಯಿದ್ದಾರೆ.

ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್ (781), ಬಾಬರ್ ಆಜಂ (761) ಮತ್ತು ದಕ್ಷಿಣ ಆಫ್ರಿಕಾದ ಏಡೆನ್ ಮರ್ಕರಂ (755) ನಂತರದ ಸ್ಥಾನಗಳಲ್ಲಿ ಇದ್ದಾರೆ. ಯಶಸ್ವಿ ಜೈಸ್ವಾಲ್‌ (714) ಆರನೇ ಸ್ಥಾನದಲ್ಲಿದ್ದಾರೆ.

ಚುಟುಕು ಕ್ರಿಕೆಟ್‌ ಬೌಲರ್‌ಗಳ ಪಟ್ಟಿಯಲ್ಲಿ ಇಂಗ್ಲೆಂಡ್‌ನ ಸ್ಪಿನ್ನರ್ ಅದಿಲ್ ರಶೀದ್ (726), ಹಸರಂಗ (687) ಕ್ರಮವಾಗಿ ಮೊದಲ ಎರಡು ಸ್ಥಾನದಲ್ಲಿದ್ದಾರೆ. ವೆಸ್ಟ್‌ ಇಂಡೀಸ್‌ನ ಅಖೀಲ್ ಹೊಸೇನ್ (664) ಮೂರನೇ ಸ್ಥಾನದಲ್ಲಿದ್ದಾರೆ.

ಅಕ್ಷರ್ ಪಟೇಲ್ (660) ನಾಲ್ಕನೇ ಸ್ಥಾನದಲ್ಲಿದ್ದಾರೆ. ಮಹೀಷ ತೀಕ್ಷಣ (659) ಐದನೇ ಕ್ರಮಾಂಕ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.