ADVERTISEMENT

ಮುರುಳೀಧರನ್ ಎದುರು ಆಡುವಾಗ ಬ್ಯಾಟ್ಸ್‌ಮನ್‌ಗಳ ಕಣ್ಣಲ್ಲಿ ಭಯ ಇರುತ್ತೆ: ಲಕ್ಷ್ಮಣ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಜೂನ್ 2021, 13:33 IST
Last Updated 21 ಜೂನ್ 2021, 13:33 IST
   

ಮುಂಬೈ:ಶ್ರೀಲಂಕಾದ ದಿಗ್ಗಜ ಕ್ರಿಕೆಟಿಗ ಮುತ್ತಯ್ಯ ಮುರುಳೀಧರನ್‌ ಅವರು ಯಾವುದೇ ಪರಿಸ್ಥಿತಿಯಲ್ಲಿಯೂ ಬ್ಯಾಟ್ಸ್‌ಮನ್‌ಗಳಿಗೆ ಕಾಟ ನೀಡುತ್ತಿದ್ದರು. ಅವರೆದುರು ಆಡುವಾಗ ಬ್ಯಾಟ್ಸ್‌ಮನ್‌ಗಳ ಕಣ್ಣಲ್ಲಿ ಭಯವಿರುತ್ತದೆ ಎಂದು ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರ ವಿವಿಎಸ್‌ ಲಕ್ಷ್ಮಣ್‌ ಹೇಳಿದ್ದಾರೆ.

ʼ21ನೇ ಶತಮಾನದ ಶ್ರೇಷ್ಠ ಬೌಲರ್‌ʼ ಆಯ್ಕೆ ಸಲುವಾಗಿಸ್ಟಾರ್‌ಸ್ಪೋರ್ಟ್ಸ್‌ರೂಪಿಸಿದ 50 ತೀರ್ಪುಗಾರರ ತಂಡವು,ಡೇಲ್‌ ಸ್ಟೇಯ್ನ್‌, ಶೇನ್‌ ವಾರ್ನ್‌ ಮತ್ತು ಗ್ಲೇನ್‌ ಮೆಗ್ರಾತ್‌ಅವರಂತಹ ದಿಗ್ಗಜರಹೊರತಾಗಿಯೂ ಮುತ್ತಯ್ಯ ಮುರುಳೀಧರನ್ ಅವರನ್ನು ಸಾರ್ವಕಾಲಿಕ ಶ್ರೇಷ್ಠ ಬೌಲರ್‌ ಎಂದು ಆಯ್ಕೆಮಾಡಿದೆ.

ಈ ಬಗ್ಗೆ ಮಾತನಾಡಿರುವಲಕ್ಷ್ಮಣ್‌,ʼಕ್ರಿಕೆಟ್‌ನ ಈ ಎಲ್ಲ ಶ್ರೇಷ್ಠರ ಎದುರು ಆಡುವ ಅವಕಾಶ ನನಗೆ ಲಭಿಸಿತು. ಸ್ಟೇಯ್ನ್‌, ಚೆಂಡನ್ನು ಅದ್ಭುತವಾಗಿ ಸ್ವಿಂಗ್‌ ಮಾಡುತ್ತಿದ್ದರು. ಕ್ರೀಡಾಂಗಣದಲ್ಲಿ ಶೇನ್‌ ವಾರ್ನ್‌ ಅವರ ಉಪಸ್ಥಿತಿಯೇ ನಂಬಲಸಾಧ್ಯವಾಗುವಂಥದುʼ ಎಂದು ಲಕ್ಷ್ಮಣ್‌ ಸ್ಟಾರ್‌ ಸ್ಪೋರ್ಟ್ಸ್‌ನ ನೇರಪ್ರಸಾರ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ADVERTISEMENT

ಮುಂದುವರಿದು,ʼಆದರೆ ನನಗೆ, 21ನೇ ಶತಮಾನದ ಶ್ರೇಷ್ಠ ಬೌಲರ್‌ ಮುತ್ತಯ್ಯ ಮುರುಳೀಧರನ್‌. ಏಕೆಂದರೆ, ಶ್ರೀಲಂಕಾ ಅಥವಾ ಉಪಖಂಡದ ಪಿಚ್‌ಗಳಲ್ಲಿ ಮಾತ್ರವಲ್ಲದೇ ವಿಶ್ವದ ಎಲ್ಲ ಕಡೆಯೂ ಬ್ಯಾಟ್ಸ್‌ಮನ್‌ಗಳನ್ನು ಕಾಡಿದ ಏಕೈಕ ಬೌಲರ್‌ ಅವರು. ಅವರು ಸಾರ್ವಕಾಲಿಕ ಶ್ರೇಷ್ಠʼ

ʼಇದು ಕೇವಲ ಅಂಕಿ-ಸಂಖ್ಯೆ ಬಗ್ಗೆ ಅಥವಾ ವಿಕೆಟ್‌ ಗಳಿಕೆಯ ವಿಚಾರವಷ್ಟೇ ಅಲ್ಲ. ಅವರು ಟೆಸ್ಟ್‌ ಕ್ರಿಕೆಟ್‌ನಲ್ಲಿ800 ವಿಕೆಟ್‌ಗಳನ್ನು ಗಳಿಸಿರುವುದು ದೊಡ್ಡ ಸಾಧನೆಯಾಗಿದೆ. ಮುರುಳೀಧರನ್‌ ಅವರ ಬೌಲಿಂಗ್‌ ಎದುರಿಸುವಾಗ ಬ್ಯಾಟ್ಸ್‌ಮನ್‌ಗಳ ಕಣ್ಣಲ್ಲಿ ಭಯ ಕಾಣಬಹುದಾಗಿತ್ತುʼ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.