ADVERTISEMENT

ಮುಂಬೈ ಇಂಡಿಯನ್ಸ್‌ನಲ್ಲಿ ರೋಹಿತ್ ಪಾತ್ರದ ಬಗ್ಗೆ ಪಾಂಡ್ಯ ಹೇಳಿದ್ದಿಷ್ಟು...

ಪಿಟಿಐ
Published 18 ಮಾರ್ಚ್ 2024, 12:29 IST
Last Updated 18 ಮಾರ್ಚ್ 2024, 12:29 IST
<div class="paragraphs"><p>ಹಾರ್ದಿಕ್ ಪಾಂಡ್ಯ</p></div>

ಹಾರ್ದಿಕ್ ಪಾಂಡ್ಯ

   

ಮುಂಬೈ: ಹಿರಿಯ ಕ್ರಿಕೆಟಿಗ ರೋಹಿತ್ ಶರ್ಮಾ ಯಾವಾಗಲೂ ನಮ್ಮ ಮಾರ್ಗದರ್ಶಕರಾಗಿ ಇರಲಿದ್ದಾರೆ ಎಂದು ಇಂಡಿಯನ್ ಪ್ರೀಮಿಯರ್ ಲೀಗ್‌ನ(ಐಪಿಎಲ್) ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿರುವ ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.

ಕಳೆದ ಎರಡೂ ಆವೃತ್ತಿಗಳಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಮುನ್ನಡೆಸಿದ್ದ ಹಾರ್ದಿಕ್, ಈ ಬಾರಿ ಮುಂಬೈ ತಂಡಕ್ಕೆ ನಾಯಕರಾಗಿದ್ದಾರೆ. ಐದು ಬಾರಿ ಟ್ರೋಫಿ ಗೆದ್ದಾಗಲೂ ಮುಂಬೈ ತಂಡವನ್ನು ಮುನ್ನಡೆಸಿದ್ದ ರೋಹಿತ್ ಅವರನ್ನು ಮುಂಬೈ ತಂಡದ ನಾಯಕನ ಸ್ಥಾನದಿಂದ ಅಚ್ಚರಿಯ ರೀತಿಯಲ್ಲಿ ಕೆಳಗಿಳಿಸಲಾಗಿತ್ತು.

ADVERTISEMENT

‘ನಾನು ನಾಯಕನಾಗಿರುವುದರಿಂದ ಬೇರೇನೂ ವ್ಯತ್ಯಾಸ ಆಗುವುದಿಲ್ಲ. ಅವರು(ರೋಹಿತ್) ನನ್ನ ಸಹಾಯಕ್ಕಾಗಿ ಸದಾ ಇರುತ್ತಾರೆ. ಅವರು ಈ ತಂಡದಲ್ಲಿದ್ದುಕೊಂಡು ಮಾಡಿರುವ ಸಾಧನೆಗಳು ನನಗೆ ನೆರವಾಗಲಿವೆ. ಅವರು ಮಾಡಿರುವ ಸಾಧನೆಯನ್ನು ಮುಂದುವರಿಸಿಕೊಂಡು ಹೋಗುವುದೇ ಇಂದಿನಿಂದ ನನ್ನ ಕೆಲಸ’ಎಂದು ಸುದ್ದಿಗೋಷ್ಠಿಯಲ್ಲಿ ಹಾರ್ದಿಕ್ ಹೇಳಿದ್ದಾರೆ.

ನಾವು 10 ವರ್ಷಗಳಿಂದ ಜೊತೆಯಲ್ಲಿ ಆಡುತ್ತಿದ್ದೇವೆ. ಈವರೆಗಿನ ನನ್ನ ಸಂಪೂರ್ಣ ಕ್ರಿಕೆಟ್ ವೃತ್ತಿಜೀವನವನ್ನು ಅವರ ಅಡಿಯಲ್ಲಿ ಕಳೆದಿದ್ದೇನೆ. ಟೂರ್ನಿಯುದ್ದಕ್ಕೂ ಅವರ ಕೈ ನನ್ನ ಹೆಗಲ ಮೇಲೆ ಇರಲಿದೆ ಎಂದಿದ್ದಾರೆ.

ನಾನು ಗುಜರಾತ್ ಟೈಟಾನ್ಸ್ ತಂಡದ ನಾಯಕತ್ವ ತೊರೆದು ಮುಂಬೈ ಇಂಡಿಯನ್ಸ್ ತಂಡದಲ್ಲಿ ರೋಹಿತ್ ಶರ್ಮಾ ಅವರ ಜಾಗಕ್ಕೆ ನೇಮಕಗೊಂಡಿದ್ದು, ಒಂದು ವರ್ಗದ ಅಭಿಮಾನಿಗಳಿಗೆ ಬೇಸರ ತರಿಸಿದೆ ಎಂಬುದನ್ನು ಪಾಂಡ್ಯ ಒಪ್ಪಿಕೊಂಡರು.

ಮಾಜಿ ನಾಯಕ ರೋಹಿತ್ ಅವರ ಜೊತೆ ಈವರೆಗೆ ಮಾತನಾಡಿಲ್ಲ. ತಂಡದ ಅಭ್ಯಾಸ ಆರಂಭವಾದ ಬಳಿಕ ಅವರ ಜೊತೆ ಮಾತನಾಡಲು ಅವಕಾಶ ಸಿಗಲಿದೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.