ADVERTISEMENT

ಕಾಮನ್‌ವೆಲ್ತ್ ಕೂಟ: ಮಿರಾಬಾಯಿ ಮನವಿ ತಿರಸ್ಕೃತ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2022, 5:18 IST
Last Updated 8 ಏಪ್ರಿಲ್ 2022, 5:18 IST
ಮೀರಾಬಾಯಿ ಚಾನು
ಮೀರಾಬಾಯಿ ಚಾನು   

ನವದೆಹಲಿ: ಭಾರತದ ಒಲಿಂಪಿಯನ್ ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಮುಂಬರುವ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ 55 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ನೀಡಲು ಆಯೋಜಕರು ನಿರಾಕರಿಸಿದ್ದಾರೆ. ಅದರಿಂದಾಗಿ ಮೀರಾ, 49 ಕೆಜಿ ವಿಭಾಗದಲ್ಲಿ ಸ್ಪರ್ಧಿಸಬೇಕಿದೆ.

ಮೀರಾಬಾಯಿ ಅವರನ್ನು 55 ಕೆಜಿ, ಜಿಲಿ ದಲಬೆಹೆರಾ (49 ಕೆಜಿ) ಮತ್ತು ಎಸ್‌. ಬಿಂದ್ಯಾರಾಣಿ ದೇವಿ (59ಕೆಜಿ) ಅವರನ್ನು ಕಣಕ್ಕಿಳಿಸಲು ಭಾರತ ವೇಟ್‌ಲಿಫ್ಟಿಂಗ್ ಫೆಡರೇಷನ್ (ಐಡಬ್ಲ್ಯುಎಲ್‌ಎಫ್) ಯೋಜಿಸಿತ್ತು. ಇದರಿಂದಾಗಿ ಭಾರತಕ್ಕೆ ವೆಟ್‌ಲಿಫ್ಟಿಂಗ್‌ನಲ್ಲಿ ಪದಕಗಳನ್ನು ಜಯಿಸುವ ಅವಕಾಶಗಳು ಹೆಚ್ಚುತ್ತಿದ್ದವು.

ಬರ್ಮಿಂಗ್‌ಹ್ಯಾಮ್‌ನಲ್ಲಿಜುಲೈ 28 ರಿಂದ ಆಗಸ್ಟ್ 8ರವರೆಗೆ ನಡೆಯಲಿರುವ ಕಾಮನ್‌ವೆಲ್ತ್ ಕೂಟದಲ್ಲಿ 64 ಕೆಜಿ ವಿಭಾಗದ ವೇಟ್‌ಲಿಫ್ಟಿಂಗ್‌ನಲ್ಲಿ ಪಾಪ್ಪಿ ಹಜಾರಿಕಾ ಸ್ಪರ್ಧಿಸುವರು.

ADVERTISEMENT

ಮೀರಾಬಾಯಿ ಹೋದ ವರ್ಷ ಟೋಕಿಯೊ ಒಲಿಂಪಿಕ್ಸ್‌ನಲ್ಲಿ 49 ಕೆಜಿ ವಿಭಾಗದಲ್ಲಿಯೇ ಬೆಳ್ಳಿ ಪದಕ ಜಯಿಸಿದ್ದರು.

‘ಮೀರಾ ಮನವಿಯನ್ನು ತಳ್ಳಿ ಹಾಕಿರುವುದರಿಂದ ಯಾವುದೇ ನಷ್ಟವಿಲ್ಲ. ಅವರ ಪದಕ ಜಯದ ಅವಕಾಶ ಈಗಲೂ ಇದೆ. ಆದ್ದರಿಂದ ನಿರಾಶರಾಗಬೇಕಿಲ್ಲ’ ಎಂದು ಅವರ ಕೋಚ್ ವಿಜಯ್ ಶರ್ಮಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.