ADVERTISEMENT

ಪಾಕ್‌ ತಂಡಕ್ಕೆ ಹೆಮ್ಮಿಂಗ್‌ ಕ್ಯುರೇಟರ್‌

ಪಿಟಿಐ
Published 15 ಜುಲೈ 2024, 22:34 IST
Last Updated 15 ಜುಲೈ 2024, 22:34 IST
   

ಲಾಹೋರ್‌: ಆಸ್ಟ್ರೇಲಿಯಾದ ಟೋನಿ ಹೆಮ್ಮಿಂಗ್‌ ಅವರನ್ನು ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯು ಎರಡು ವರ್ಷಗಳ ಅವಧಿಗೆ ಮುಖ್ಯ ಕ್ಯುರೇಟರ್ ಆಗಿ ನೇಮಿಸಿದೆ.

ಐಸಿಸಿ ಜೊತೆ ಈ ಹಿಂದೆ ಕೆಲಸ ಮಾಡಿರುವ ಹೆಮ್ಮಿಂಗ್‌, ಪಿಚ್ ಮತ್ತು ಔಟ್‌ಫೀಲ್ಡ್ ನಿರ್ವಹಣೆಯಲ್ಲಿ ನಾಲ್ಕು ದಶಕಗಳ ಅನುಭವ ಹೊಂದಿದ್ದಾರೆ.

ಈ ಋತುವಿನಲ್ಲಿ ಬಾಂಗ್ಲಾದೇಶ, ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಸ್ವದೇಶಿ ಸರಣಿಗಳಿಗೆ ಪಿಚ್‌ಗಳ ಗುಣಮಟ್ಟ ಸುಧಾರಿಸುವ ಜವಾಬ್ದಾರಿ ಹೆಮ್ಮಿಂಗ್‌ ಹೆಗಲಿಗೆ ವಹಿಸಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.