ಹಾಂಗ್‌ಕಾಂಗ್: ಭಾರತ ತಂಡ, ಹಾಂಗ್‌ಕಾಂಗ್ ಸಿಕ್ಸಸ್ 2024 ಟೂರ್ನಿಯ ಆರಂಭದ ಪಂದ್ಯದಲ್ಲಿ ಬದ್ಧ ಎದುರಾಳಿ ಪಾಕಿಸ್ತಾನ ಎದುರು ಶುಕ್ರವಾರ ಆರು ವಿಕೆಟ್‌ಗಳ ಸೋಲನುಭವಿಸಿತು.
ಟಿನ್‌ಕ್ವಾಂಗ್ ರೋಡ್ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಭಾರತ ನಿಗದಿತ 6 ಓವರುಗಳಲ್ಲಿ 2 ವಿಕೆಟ್‌ಗೆ 119 ರನ್ ಗಳಿಸಿತು. ಕನ್ನಡಿಗ ಭರತ್ ಚಿಪ್ಲಿ ಕೇವಲ 16 ಎಸೆತಗಳಲ್ಲಿ 53 ರನ್ ಗಳಿಸಿದರೆ, ನಾಯಕ ಹಾಗೂ ಇನ್ನೊಬ್ಬ ಕನ್ನಡಿಗ ರಾಬಿನ್ ಉತ್ತಪ್ಪ 8 ಎಸೆತಗಳಲ್ಲಿ 31 ರನ್ ಬಾಚಿದರು.
ಆದರೆ ಪಾಕಿಸ್ತಾನ ಒತ್ತಡಕ್ಕೀಡಾಗದೇ ಇನ್ನೂ ಒಂದು ಓವರ್ ಇರುವಂತೆ 4 ವಿಕೆಟ್ ನಷ್ಟದಲ್ಲಿ ಗುರಿತಲುಪಿತು. ಆಸಿಫ್ ಅಲಿ 15 ಎಸೆತಗಳಲ್ಲಿ 55 ರನ್ ಚಚ್ಚಿ ಭದ್ರ ಅಡಿಪಾಯ ಹಾಕಿಕೊಟ್ಟರು. ಆಸಿಫ್ ಅಲಿ ನಿವೃತ್ತರಾದ ಮೇಲೆ, ಮುಹಮ್ಮದ್ ಅಖ್ಲಾಕ್ (12 ಎಸೆತಗಳಲ್ಲಿ ಅಜೇಯ 40) ಮತ್ತು ಫಾಹೀಮ್ ಅಶ್ರಫ್ (5 ಎಸೆತಗಳಲ್ಲಿ ಅಜೇಯ 22) ಗೆಲುವನ್ನು ಸುಲಭಗೊಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.